ಮತ್ತೆ ಹಾವಳಿಯಿಟ್ಟ ಬಚ್ಚಾ ಫೈಸಲ್ ಮತ್ತು ನಿಹಾಲ್ @ಬೆಕ್ಕು-Bachcha Faisal and Nihal are giving trouble again

 SUDDILIVE || SHIVAMOGGA

ಮತ್ತೆ ಹಾವಳಿಯಿಟ್ಟ ಬಚ್ಚಾ ಫೈಸಲ್ ಮತ್ತು ನಿಹಾಲ್ @ಬೆಕ್ಕು-Bachcha Faisal and Nihal are giving trouble again     
Bachcha, faisal

ಶಿವಮೊಗ್ಗ ನಗರದ ಆರ್‌.ಎಂ‌.ಎಲ್‌. ನಗರದಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ನಿಹಾಲ್ ಹಾಗೂ ಬಚ್ಚಾ ಫೈಸಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಾಗಿದೆ.

ಪೊಲೀಸರ ದಾಖಲೆಯ ಪ್ರಕಾರ, ಜುಲೈ 28ರಂದು ಮಧ್ಯಾಹ್ನ 1.30ರಿಂದ 2.30ರ ನಡುವೆ ಆರ್‌.ಎಂ‌.ಎಲ್‌. ನಗರದ ಹಳೆಯ ರೈಸ್ ಮಿಲ್ ಪಕ್ಕದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ಮೊಹಮ್ಮದ್ ಅಜೀಜ್ ಅಲಿಯಾಸ್ ಸಲ್ಮಾನ್ ಬಟ್ಟೆ ಮಲ್ಲಪ್ಪ (30) ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ತಿಳಿಸಿರುವಂತೆ, ಆರೋಪಿಗಳಾದ ನಿಹಾಲ್ ಹಾಗೂ ಬಚ್ಚಾ ಫೈಸಲ್ ಅವರೊಂದಿಗೆ ಕಳೆದ ಆರು ತಿಂಗಳಿನಿಂದ ಪರಿಚಯವಿತ್ತು. ಮೂರು-ನಾಲ್ಕು ತಿಂಗಳ ಹಿಂದೆ ಇಲಿಯಾಸ್ ನಗರ ನಿವಾಸಿ ಇಬ್ರಾಹಿಂ ಮೇಲಿನ ಹಲ್ಲೆ ಪ್ರಕರಣದಲ್ಲಿ ಇವರ ವಿರುದ್ಧ ಈಗಾಗಲೇ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಜೈಲು ಸೇರಿದ್ದರು. ಸುಮಾರು ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ತಮ್ಮೊಂದಿಗೆ ಸೇರಿಕೊಳ್ಳುವಂತೆ ಪದೇಪದೇ ಕರೆ ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Bachcha, faisal

ಘಟನೆಯ ದಿನ ಆರೋಪಿಗಳು ಮನೆ ಬಳಿ ಬಂದು "ಮಾತನಾಡಬೇಕು" ಎಂದು ಹೇಳಿ ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಆರ್‌.ಎಂ‌.ಎಲ್‌. ನಗರದ ಹಳೆಯ ರೈಸ್ ಮಿಲ್ ಪಕ್ಕದ ಖಾಲಿ ಜಾಗಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲಿ "ಏಕೆ ನಮ್ಮೊಂದಿಗೆ ಸೇರಿಕೊಳ್ಳುತ್ತಿಲ್ಲ, ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ" ಎಂದು ಪ್ರಶ್ನಿಸಿದ್ದು, ತಾನು ಈಗ ಕುಟುಂಬದೊಂದಿಗೆ ನೆಮ್ಮದಿಯಾಗಿ ಬದುಕಲು ಬಯಸುತ್ತಿದ್ದು, ಇನ್ನು ಮುಂದೆ ಅವರೊಂದಿಗೆ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಆರೋಪಿಗಳಲ್ಲಿ ಒಬ್ಬ ಕೈಗಳಿಂದ ಹಲ್ಲೆ ನಡೆಸಿದ್ದು, ಮತ್ತೊಬ್ಬ ಮಚ್ಚಿನ ಹಿಡಿಕೆಯಿಂದ ಬಲ ಕಣ್ಣಿನ ಭಾಗಕ್ಕೆ ಹೊಡೆದಿದ್ದಾನೆ. ಇನ್ನೋರ್ವ ಬ್ಯಾಟ್‌ನಿಂದ ತಲೆಯ ಹಿಂಭಾಗ ಹಾಗೂ ಎಡ ಭುಜಕ್ಕೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಮೊಬೈಲ್ ಕೆಳಗೆ ಬಿದ್ದಿದ್ದು, ಅದನ್ನೂ ಆರೋಪಿಗಳು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ವೇಳೆ "ಮತ್ತೊಮ್ಮೆ ಸಿಕ್ಕರೆ ಜೀವಂತ ಬಿಡುವುದಿಲ್ಲ" ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಬಳಿಕ ಸ್ನೇಹಿತನ ಸಹಾಯದಿಂದ ಮನೆಗೆ ತೆರಳಿ, ನಂತರ ತಂದೆಯೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವರ್ಷ ಫೆಬ್ರವರಿಯಲ್ಲಿ ನಿಹಾಲ್ ಯಾನೆ ಬೆಕ್ಕು, ಬಚ್ಚಾ ಫೈಸಲ್ ಇಬ್ರಾಹಿಂ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದಲ್ಲಿ ಬಟ್ಟೆ ಮಲ್ಲಪ್ಪ, ನಿಹಾಲ್ ಮತ್ತು ಬಚ್ಚಾ ಫೈಸಲ್ ಅಂದರ್ ಆಗಿದ್ದರು. ನಮ್ಮ ವಿರುದ್ಧ ದೂರು ಕೊಡ್ತ್ಯಾ ಎಂದು ಆರೋಪಿಸಿ ಬಚ್ಚ, ನಿಹಾಲ್ ಮತ್ತು ಮತ್ತಿತರರು ಬೈಕ್ ನಲ್ಲಿ ಬಂದು ಹಲ್ಲೆ ಮಾಡಿದ್ದರು. ಈ ವಿಚಾರದಲ್ಲಿ ಇಬ್ಬರು ಅಂದರ್ ಆಗಿದ್ದರು. ಜೂಲಿನಿಂದ ಬೇಲು ಪಡೆದು ಇಬ್ವರು ಮತ್ತೆ ಹಾವಳಿಯಿಟ್ಟಿದ್ದಾರೆ. 

Fatal attack on youth in Shivamogga over old enmity; FIR against two   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close