ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವ ಆಮಿಷ-ಬಿಲ್ಡರ್ಸ್ ವಿರುದ್ಧ ವಂಚನೆ ಆರೋಪ–ಮೋಸಕ್ಕೊಳಗಾದವರು ದೂರು ನೀಡಲು ಪೊಲೀಸರ ಮನವಿ-Police appeal to those who have been cheated to file complaints

SUDDILIVE || SHIVAMOGGA

ಕಡಿಮೆ ದರದಲ್ಲಿ ಮನೆ ಕಟ್ಟಿಕೊಡುವ ಆಮಿಷ-ಬಿಲ್ಡರ್ಸ್ ವಿರುದ್ಧ ವಂಚನೆ ಆರೋಪ–ಮೋಸಕ್ಕೊಳಗಾದವರು ದೂರು ನೀಡಲು ಪೊಲೀಸರ ಮನವಿ-Builders accused of fraud for offering low-cost houses - Police appeal to those who have been cheated to file complaints    

Builder, fraud

ಶಿವಮೊಗ್ಗ: ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಮನೆ ನಿರ್ಮಾಣ ಸಾಲ ಒದಗಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ಶಿವಮೊಗ್ಗದ ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವಿರುದ್ಧ ಸಾರ್ವಜನಿಕರ ದೂರು ಕೇಳಿ ಬರುತ್ತಿದ್ದು, ಆಸಕ್ತರು ದೂರು ನೀಡಲು ಇಚ್ಚಿಸಿದರೆ ತುಂಗ ನಗರ ಪೊಲಿಸ್ ಠಾಣೆಗೆ ದೂರು ನೀಡಲು ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆಟಿ ಮನವಿ ಮಾಡಿಕೊಂಡಿದ್ದಾರೆ.  

ಪೊಲೀಸರ ಮಾಹಿತಿ ಪ್ರಕಾರ, ಗೋಪಾಲ ಗೌಡ ಬಡಾವಣೆಯಲ್ಲಿರುವ ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯವರು ಮನೆ ಕಟ್ಟಿಕೊಡಲಾಗುವುದು ಎಂದು ತಿಳಿಸಿರುವುದಲ್ಲದೆ, ಕಡಿಮೆ ಬಡ್ಡಿದರದಲ್ಲಿ ಮನೆ ನಿರ್ಮಾಣಕ್ಕೆ ಸಾಲ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ ಸಾರ್ವಜನಿಕರ ವಿಶ್ವಾಸ ಗಳಿಸುತ್ತಿದ್ದಾರೆ. 

ಹಣ ಪಡೆದು ಕಾಮಗಾರಿ ಸ್ಥಗಿತ

ಮನೆ ನಿರ್ಮಾಣದ ಹೆಸರಿನಲ್ಲಿ ಮುಂಗಡ ಹಣ ಪಡೆದುಕೊಂಡ ಬಳಿಕ ಕೆಲ ದಿನಗಳ ಕಾಲ ಕಾಮಗಾರಿ ನಡೆಸಿ, ನಂತರ ಯಾವುದೇ ಕೆಲಸ ಮಾಡದೇ ಸ್ಥಗಿತಗೊಳಿಸುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಕೆಲವು ಪ್ರಕರಣಗಳಲ್ಲಿ ಸಾಲದ ಕಂತುಗಳನ್ನು ಆರಂಭದಲ್ಲಿ ಕೆಲವು ತಿಂಗಳು ಪಾವತಿಸಿ ವಿಶ್ವಾಸ ಮೂಡಿಸಿ, ಬಳಿಕ ಕಂತು ಪಾವತಿಯನ್ನು ನಿಲ್ಲಿಸುತ್ತಿದ್ದರು. ಇದರಿಂದ ಸಾಲ ಪಡೆದವರ ಮೇಲೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ವಸೂಲಾತಿ ಕ್ರಮ ಆರಂಭವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಪ್ರಕರಣ ದಾಖಲು

ಈ ಸಂಬಂಧ ಸಾರ್ವಜನಿಕರು ದೂರು ನೀಡಲು ಇಚ್ಚಿಸಿದರೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಸಾರ್ವಜನಿಕರಲ್ಲಿ ಪಿಐ ಮನವಿ ಮಾಡಿಕೊಂಡಿದ್ದಾರೆ, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ ಇತರ ಮಾಧ್ಯಮಗಳ ಮೂಲಕವೂ ವಿವಿಧ ರೀತಿಯ ಜಾಹೀರಾತು ನೀಡಿ ಜನರನ್ನು ಸೆಳೆಯಲಾಗುತ್ತಿತ್ತು ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ

ಇದೇ ರೀತಿಯಲ್ಲಿ ಆಶೀರಾಜ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಗೆ ಹಣ ನೀಡಿ ಮೋಸಕ್ಕೊಳಗಾಗಿರುವವರು ವಿಳಂಬ ಮಾಡದೆ ಅಗತ್ಯ ದಾಖಲೆಗಳೊಂದಿಗೆ ತುಂಗಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಸಾರ್ವಜನಿಕರು ಮನೆ ನಿರ್ಮಾಣ, ಜಮೀನು, ಸೈಟ್ ಅಭಿವೃದ್ಧಿ ಅಥವಾ ಸಾಲ ವ್ಯವಸ್ಥೆಯ ಹೆಸರಿನಲ್ಲಿ ಬರುವ ಆಕರ್ಷಕ ಆಫರ್‌ಗಳಿಗೆ ಹಣ ಪಾವತಿಸುವ ಮುನ್ನ ಸಂಸ್ಥೆಯ ವಿಶ್ವಾಸಾರ್ಹತೆ, ದಾಖಲೆಗಳು ಹಾಗೂ ಕಾನೂನುಬದ್ಧ ಮಾಹಿತಿಯನ್ನು ಪರಿಶೀಲಿಸಿ ಮುಂದುವರಿಯುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

Builders accused of fraud for offering low-cost houses - Police appeal to those who have been cheated to file complaints

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close