ಜಿಂಕೆಯ ಅಪಹರಣ, ಹಲ್ಲೆ ವಿಡಿಯೋ ವೈರಲ್ ಬೆನ್ನಲ್ಲೇ ದಾಖಲಾಯಿತು ಸುಮೊಟೊ ಪ್ರಕರಣ-ಓರ್ವ ಬಂದನ-Sumoto case registered after Jinke kidnapping, attack video goes viral - One arrested

SUDDILIVE || SHIVAMOGGA

ಜಿಂಕೆಯ ಅಪಹರಣ, ಹಲ್ಲೆ ವಿಡಿಯೋ ವೈರಲ್ ಬೆನ್ನಲ್ಲೇ ದಾಖಲಾಯಿತು ಸುಮೊಟೊ ಪ್ರಕರಣ-ಇಬ್ಬರ ಬಂದನ-Sumoto case registered after jinke kidnapping, attack video goes viral - two person arrested    

Jinke, kidnapper

ಶಿವಮೊಗ್ಗ, ಜು. 22: ಶಿವಮೊಗ್ಗ ನಗರದಲ್ಲಿ ಯುವಕನನ್ನು ಕಾರಿನಲ್ಲಿ ಬಲವಂತವಾಗಿ ಅಪಹರಿಸಿ ನಿರ್ಜನ ಶೆಡ್‌ಗೆ ಕರೆದೊಯ್ದು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಶಿವಮೊಗ್ಗ ಬೈಪಾಸ್ ಸಮೀಪದ ಮಹೀಂದ್ರಾ ಶೋರೂಂ ಬಳಿ ಇರುವ ಪ್ರದೇಶದಿಂದ ಮನು ಅಲಿಯಾಸ್ "ಜಿಂಕೆ" ಎಂಬ ಯುವಕನನ್ನು ಮೂವರು-ನಾಲ್ವರು ಆರೋಪಿಗಳು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ. ಬಳಿಕ ಕುಂಸಿ ಭಾಗದ ಸಮೀಪದ ಶೆಡ್ ಒಂದರಲ್ಲಿ ಆತನ ಮೇಲೆ ಹಲ್ಲೆ ನಡೆಸಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಸುಮಾರು ಏಳು ನಿಮಿಷಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಡಿಯೋ ವೈರಲ್ ಹಿನ್ನೆಲೆ ಸುಮೊಟೊ ಪ್ರಕರಣ

ಘಟನೆಯ ಸಂಬಂಧ ಯಾವುದೇ ಸಂತ್ರಸ್ತ ಅಥವಾ ಕುಟುಂಬದವರು ದೂರು ನೀಡದ ಹಿನ್ನೆಲೆಯಲ್ಲಿ, ವೈರಲ್ ವಿಡಿಯೋವನ್ನು ಆಧರಿಸಿ ತುಂಗಾನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ (ಸೂಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವಕನಿಗೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ.

ಓರ್ವ ಆರೋಪಿ ಬಂಧನ

ಪ್ರಕರಣ ಸಂಬಂಧ ನಾಗೇಶ್ ನಾಯ್ಕ ಹಾಗೂ ಅಬು ಹಾಶಿಂ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ನಾಗೇಶ್ ಶಿವಮೊಗ್ಗದ 'ಮಸಲ್ ಪ್ಲಾನೆಟ್' ಜಿಮ್ನಲ್ಲಿ ತರಬೇತುದಾರನಾಗಿ (ಜಿಮ್ ಟ್ರೈನರ್) ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿದ್ದು, ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ್ದರು.


ಅಪಹರಣದ ಹಿಂದಿನ ಕಾರಣ ತನಿಖೆಯಲ್ಲಿ

ಅಪಹರಣಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈರಲ್ ವಿಡಿಯೋದಲ್ಲಿರುವ ಸಂಭಾಷಣೆ ಹಾಗೂ ಪ್ರಾಥಮಿಕ ತನಿಖೆಯ ಪ್ರಕಾರ, ವೈಯಕ್ತಿಕ ವೈಮನಸ್ಸು ಅಥವಾ ಪರಸ್ಪರ ಸಂಬಂಧಿಸಿದ ಮಾತುಕತೆ ಹಿನ್ನೆಲೆ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹಣಕಾಸಿನ ವ್ಯವಹಾರವೇ ಕಾರಣ ಎಂಬುದಕ್ಕೆ ಈ ಹಂತದಲ್ಲಿ ಯಾವುದೇ ದೃಢೀಕರಣ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಯುವಕ 'ಜಿಂಕೆ' ಎಂಬ ಅಡ್ಡಹೆಸರು

ಹಲ್ಲೆಗೊಳಗಾದ ಯುವಕನ ಮೂಲ ಹೆಸರು ಮನು ಆಗಿದ್ದು, ಸ್ಥಳೀಯವಾಗಿ 'ಜಿಂಕೆ' ಎಂಬ ಅಡ್ಡಹೆಸರಿನಿಂದ ಪರಿಚಿತನಾಗಿದ್ದಾನೆ. ಈತನ ವಿರುದ್ಧ ಈ ಹಿಂದೆ ಹನಿಟ್ರ್ಯಾಪ್ ಪ್ರಕರಣ ದಾಖಲಾಗಿತ್ತು ಎಂಬ ಮಾಹಿತಿಯೂ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಆದರೆ, ಪ್ರಸ್ತುತ ಪ್ರಕರಣದ ತನಿಖೆಗೆ ಆ ಹಿಂದಿನ ಪ್ರಕರಣದೊಂದಿಗೆ ಯಾವುದೇ ನೇರ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜಿಂಕೆಗೆ ಹೊಡೆಯುತ್ತಿರುವುದು ಶಿವಮೊಗ್ಗದ ಮುಬಾರಕ್ ಎಂದು ಸಹ ತಿಳಿದು ಬಂದಿದೆ.

ಮುಬಾರಕ್, ಜಿಂಕೆ ಮತ್ತಿತರರು ಜೈಲಿನಲ್ಲಿದ್ದಾಗ ಪರಿಚಯವಾದವರು, ಎಲ್ಲರೂ ಸ್ನೇಹಿತರೆ, ಜಿಂಕೆ ಭದ್ರಾವತಿಯಲ್ಲಿ ಬಸ್ ನಿಲ್ದಾಣದ ಎದುರು ಹೂವಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದವನು. ಈತ ಮಹೀಂದ್ರ ಥಾರ್ ಖರೀದಿಸಿದೆ. ಶಿವಮೊಗ್ಗದ ಬೈಪಾಸ್ ನಲ್ಲಿರುವ ಮಹೀಂದ್ರ ಶೋ ರೂಮ್ ಗೆ ಸರ್ವಿಸ್ ಗೆ ಬಂದಾಗ ಅಲ್ಲಿಂದ ಮುಬಾರಕ್ ಗ್ಯಾಂಗ್ ಅಪಹರಿಸಿದೆ.  

Sumoto case registered after Jinke kidnapping, attack video goes viral - One arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close