ಸೊಂಟದ ಮೇಲೆ ಕೈ ಇಟ್ಟುಕೊಂಡೇ ಉತ್ತರ ಕೊಟ್ರಾ ಸಂಸದರು?Did the MP answer with his hands on his hips?

 SUDDILIVE || SHIVAMOGGA

ಸೊಂಟದ ಮೇಲೆ ಕೈ ಇಟ್ಟುಕೊಂಡೇ ಉತ್ತರ ಕೊಟ್ರಾ ಸಂಸದರು?Did the MP answer with his hands on his hips?    

MP, answer


ಶಿಕಾರಿಪುರ: ಮೇಲ್ನೋಟಕ್ಕೆ ಇದು ಏತನೀರಾವರಿ ಯೋಜನೆಯ ಪೈಪ್‌ಲೈನ್ ಬಳಿ ನಿಂತು ಸಂಸದರು ಫೋಟೋಗೆ ಪೋಸ್ ನೀಡಿದ ದೃಶ್ಯವೆಂದು ಕೆಲವರಿಗೆ ಅನಿಸಬಹುದು. ಆದರೆ ಅದರ ಹಿಂದಿರುವ ವಾಸ್ತವ ಬೇರೆಯದ್ದಾಗಿದೆ. ವರ್ಷಗಳ ಕಾಲ ಟೀಕೆ, ಅನುಮಾನ ಮತ್ತು ಪ್ರಶ್ನೆಗಳಿಗೆ ಗುರಿಯಾಗಿದ್ದ ಬೃಹತ್ ಏತನೀರಾವರಿ ಯೋಜನೆ ಇದೀಗ ಯಶಸ್ವಿಯಾಗಿ ಸಾಕಾರಗೊಂಡಿದ್ದು, ಕಡೆನಂದಿಹಳ್ಳಿ ಕೆರೆಗೆ ತುಂಗಭದ್ರಾ ನದಿಯ ನೀರು ಹರಿದುಬಂದಿರುವುದು ಟೀಕಾಕಾರರಿಗೆ ಕೆಲಸದ ಮೂಲಕವೇ ನೀಡಿದ ಉತ್ತರವಾಗಿ ಪರಿಣಮಿಸಿದೆ.

"ಭಗೀರಥ ಪ್ರಯತ್ನ" ಎಂದೇ ಬಣ್ಣಿಸಲಾಗುತ್ತಿರುವ ಉಡುಗಣಿ–ತಾಳಗುಂದ–ಹೊಸೂರು ಹೋಬಳಿಗಳ ಕೆರೆ ತುಂಬಿಸುವ ಏತನೀರಾವರಿ ಯೋಜನೆ ಈಗ ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಸುಮಾರು ₹850 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಹಿರೇಕೆರೂರು ತಾಲೂಕಿನ ಚಟ್ನಹಳ್ಳಿ ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಶಿಕಾರಿಪುರ ತಾಲೂಕಿನ 281 ಕೆರೆಗಳು ಹಾಗೂ ಹಿರೇಕೆರೂರು ತಾಲೂಕಿನ 9 ಕೆರೆಗಳು ಸೇರಿದಂತೆ ಒಟ್ಟು 290 ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ರೂಪಿಸಲಾಗಿದೆ.

ಯೋಜನೆಯ ಯಶಸ್ವಿ ಅನುಷ್ಠಾನದ ಹಿನ್ನೆಲೆಯಲ್ಲಿ ಕಡೆನಂದಿಹಳ್ಳಿ ಗ್ರಾಮದ ಕೆರೆಗೆ ಭೇಟಿ ನೀಡಿದ ಸಂಸದರು, ಕೆರೆಗೆ ಧುಮ್ಮಿಕ್ಕಿ ಹರಿದುಬರುತ್ತಿರುವ ನದಿಯ ನೀರನ್ನು ರೈತರೊಂದಿಗೆ ವೀಕ್ಷಿಸಿ, ಲಿಫ್ಟ್ ಇರಿಗೇಷನ್ ವ್ಯವಸ್ಥೆಯ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ವರ್ಷಗಳ ಕಾಲ ಮಳೆಗಾಗಿ ಕಾಯುತ್ತಿದ್ದ ಪ್ರದೇಶದ ಕೆರೆಗಳಿಗೆ ಇದೀಗ ತುಂಗಭದ್ರಾ ನೀರು ಹರಿದುಬಂದಿರುವುದು ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಒಣಗಿದ್ದ ಕಡೆನಂದಿಹಳ್ಳಿ ಕೆರೆ ನೀರಿನಿಂದ ತುಂಬುತ್ತಿರುವ ದೃಶ್ಯ ಕಂಡ ರೈತರು ಸಂತಸ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಅನೇಕ ರೈತರು ಯೋಜನೆಯ ಕನಸಿಗೆ ರೂಪ ನೀಡಿದ ಮಾಜಿ ಮುಖ್ಯಮಂತ್ರಿ ಅವರನ್ನು "ಆಧುನಿಕ ಭಗೀರಥ" ಎಂದು ಕೊಂಡಾಡಿ, ಈ ಯೋಜನೆಯಿಂದ ಈ ಭಾಗದ ಕೃಷಿಗೆ ಹೊಸ ಜೀವ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಆಧಾರಿತ ಪ್ರದೇಶವಾದ ಶಿಕಾರಿಪುರ ಮತ್ತು ಸುತ್ತಮುತ್ತಲಿನ ಭಾಗಗಳಿಗೆ ಈ ಯೋಜನೆ ದೀರ್ಘಕಾಲಿಕ ನೀರಾವರಿ ಭದ್ರತೆಯನ್ನು ಒದಗಿಸುವ ನಿರೀಕ್ಷೆಯಿದ್ದು, ಕೆರೆಗಳು ಭರ್ತಿಯಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಳ, ಕೃಷಿ ಉತ್ಪಾದನೆ ವೃದ್ಧಿ ಹಾಗೂ ರೈತರ ಬದುಕಿನಲ್ಲಿ ಸ್ಥಿರತೆ ಮೂಡುವ ವಿಶ್ವಾಸ ವ್ಯಕ್ತವಾಗುತ್ತಿದೆ.

ಈ ಯೋಜನೆ ಕೇವಲ ನೀರು ಹರಿಸುವ ಕಾಮಗಾರಿ ಮಾತ್ರವಲ್ಲ; ಟೀಕೆಗಳ ನಡುವೆಯೂ ಗುರಿ ಸಾಧಿಸಿದ ಭಗೀರಥ ಪ್ರಯತ್ನಕ್ಕೆ ದೊರೆತ ಯಶಸ್ಸಿನ ಸಂಕೇತವಾಗಿದ್ದು, ಅಭಿವೃದ್ಧಿಯೇ ಎಲ್ಲ ಟೀಕೆಗಳಿಗೆ ಸೂಕ್ತ ಉತ್ತರ ಎಂಬ ಸಂದೇಶವನ್ನೂ ನೀಡಿದೆ.

Did the MP answer with his hands on his hips?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close