SUDDILIVE || SHIVAMOGGA
ಜಂತರ್ ಮಂತರ್ ಪ್ರತಿಭಟನೆ ಬೆಂಬಲಿಸಿ ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿ ಮುತ್ತಿಗೆ ಯತ್ನ ಬಂಧನ -District Congress protests in support of Jant Mantar protest
ಶಿವಮೊಗ್ಗ: ದೆಹಲಿಯ ಜಂತರ್-ಮಂತರ್‌ನಲ್ಲಿ ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಗುರುವಾರ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ರಸ್ತೆತಡೆ ನಡೆಸಿ ನಂತರ ಬಿಜೆಪಿ ಕಚೇರಿ ಮುತ್ತಿಗೆ ಪ್ರತಿಭಟನೆ ನಡೆಸಿ ನಂತರ ಬಿಜೆಪಿ ಕಚೇರಿಯನ್ನ ಮುತ್ತಿಗೆ ಹಾಕಲು ಯತ್ನಿಸಿತು.
ನೀಟ್ ಪರೀಕ್ಷೆಯಲ್ಲಿನ ಅಕ್ರಮ, ಕೇಂದ್ರ ಸರ್ಕಾರದ ದಮನ ಪ್ರಕ್ರಿಯೆಯೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಸರ್ಕಲ್ ನಲ್ಲಿ ಮಳೆಯ ನಡುವೆಯೂ ಪ್ರತಿಭಟನಾಕಾರರು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನುb ಕೂಗಿದರು. ದಿಡೀರ್ ಎಂದು ತೀರ್ಮಾನಿಸಿ ಬಿಜೆಪಿ ಶಿವಮೊಗ್ಗ ಜಿಲ್ಲಾ ಕಚೇರಿ ಮುತ್ತಿಗೆ ಹಾಕಿದರು. ಬಹತೆಕ ಕಚೇರಿಯನ್ನ ಮುತ್ತಿಗೆ ಹಾಕಿದ್ದ ಪ್ರತಿಭಾನಾಕಾರರನ್ನ ಪೊಲೀಸರು ತಡೆದು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಶೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾಶಿ, ಪಾಲಿಕೆ ಮಾಜಿ ಮೇಯರ್ ಮರಿಯಪ್ಪ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಬಿಜೆಪಿ ಕಚೇರಿಯ ಬಳಿ ಯುವ ಕಾಂಗ್ರೆಸ್ ನ ಗಿರೀಶ್ ರಂಗನಾಥ್, ಶರತ್ ಮರಿಯಪ್ಪ ಮುತ್ತಿಗೆ ಹಾಕಿದರು.
ಡಿವೈಎಸ್ಪಿ ನಡುವೆ ಮಾತಿನ ಚಕಮಕಿ
ಕಾಂಗ್ರೆಸ್ ನ ಗಿರೀಶ್ ಬಿಜೆಪಿ ಕಚೇರಿ ಮುತ್ತಿಗೆ ಹಾಕಿದ ವೇಳೆ ಪೊಲೀಸ್ ವ್ಯಾನ್ ಮೇಲೆ ನಿಂತು ಬಾವುಟ ತೋರಿದರು. ಇದನ್ನ ಕಂಡ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಾಹನ ನಮ್ಮದು ಸುಮ್ಮನಿದ್ದೀರಿ ಎಂದು ಡಿವೈಎಸ್ಪಿ ಜೊತೆ ಮಾತಿನ ಚಕಮಕಿ ನಡೆಸಿದರು.
ಡಿವೈಎಸ್ಪಿ ಜೊ
District Congress protests in support of Jant Mantar protest



