SIR ಗೆ ನ್ಯಾಯಬೆಲೆ ಅಂಗಡಿಗೆ ಬರಲು ವಾಟ್ಸಪ್ ನಲ್ಲಿ ಸಂದೇಶ- Message on WhatsApp to SIR to come to the fair price shop

SUDDILIVE || THIRTHAHALLI

SIR ಗೆ ನ್ಯಾಯಬೆಲೆ ಅಂಗಡಿಗೆ ಬರಲು ವಾಟ್ಸಪ್ ನಲ್ಲಿ ಸಂದೇಶ- Message on WhatsApp to SIR to come to the fair price shop   

Sir, whatsapp

ತೀರ್ಥಹಳ್ಳಿ: ಮತ ಪರಿಷ್ಕರಣೆ (SIR) ವಿಚಾರದಲ್ಲಿ ಸಾರ್ವಜನಿಕರ ಜೊತೆಯಲ್ಲಿ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರಾ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಪ್ರತಿಯೊಂದು ಮನೆಗೆ ಭೇಟಿ ನೀಡಿ ಮತಪಟ್ಟಿಯ ಪರಿಷ್ಕರಣೆ ಮಾಡಬೇಕಾಗಿದ್ದ ಅಧಿಕಾರಿಗಳು ಬೇಜವಾಬ್ದಾರಿ ತೋರಿಸುತ್ತಿದ್ದಾರಾ? ಎಂಬ ಪ್ರಶ್ನೆ ಈಗ ಮೂಡಿದೆ.

ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಬೇಕಾಗಿದ್ದ ಬಿಎಲ್ಓಗಳು ಹಾಗೂ ಬಿಎಲ್‌ಎಗಳು ಸಾರ್ವಜನಿಕರನ್ನೇ ನ್ಯಾಯಬೆಲೆ ಅಂಗಡಿಗೆ ಬರುವಂತೆ ಹೇಳಿರುವ ಪೋಸ್ಟರ್‌ಗಳು ಇದೀಗ ವಾಟ್ಸಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.

ಗ್ರಾಮಸ್ಥರೆಲ್ಲರೂ ಕಡ್ಡಾಯವಾಗಿ ತಮ್ಮ ಆಧಾರ್‌ ಕಾರ್ಡ್‌ನೊಂದಿಗೆ ಗಾಡ್ರ್ರಗದ್ದೆಯ ನ್ಯಾಯಬೆಲೆ ಅಂಗಡಿಗೆ ಬರುವಂತೆ ಪೋಸ್ಟರ್ ಮಾಡಲಾಗಿದ್ದು, ಇದು ಇದೀಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚುನಾವಣಾ ಮತ ಪರಿಷ್ಕರಣೆ ವಿಚಾರದಲ್ಲಿ ಈಗಾಗಲೇ ಹಲವು ಗೊಂದಲಗಳಿಂದ ಕೂಡಿರುವ ಜನರಿಗೆ ಇಂತಹ ಪೋಸ್ಟರ್ ಮಾಡಿ ಹರಿಬಿಟ್ಟಿರುವುದು ಮತ್ತಷ್ಟು ಗೊಂದಲವನ್ನು ಸೃಷ್ಟಿ ಮಾಡಿದೆ.

ಕೂಡಲೇ ತೀರ್ಥಹಳ್ಳಿ ತಾಲೂಕು ದಂಡಾಧಿಕಾರಿಗಳು ಈ ವಿಷಯದ ಬಗ್ಗೆ ಗಮನ ವಹಿಸಿ, ಅಧಿಕಾರಿಗಳು ಮನೆ ಮನೆಗೆ ತೆರಳಿ ಮತ ಪರಿಷ್ಕರಣೆ ಕಾರ್ಯ ನಡೆಸುವಂತೆ ಸೂಚನೆ ನೀಡಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Message on WhatsApp to SIR to come to the fair price shop

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close