ಹೊಸನಗರದಲ್ಲಿ ಗೋಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರು ಆರೋಪಿಗಳ ಬಂಧನ- Police crack cow slaughter case in Hosanagar; four accused arrested

 SUDDILIVE || HOSANAGARA

ಹೊಸನಗರದಲ್ಲಿ  ಗೋಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ನಾಲ್ವರು ಆರೋಪಿಗಳ ಬಂಧನ- Police crack cow slaughter case in Hosanagar; four accused arrested   

Hosangara, police

ಶಿವಮೊಗ್ಗ, ಜುಲೈ 5: ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಪಟಗುಪ್ಪ ಸೇತುವೆ ಸಮೀಪದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಕರುವನ್ನು ಹತ್ಯೆ ಮಾಡಿ ಮಾಂಸ ಮಾರಾಟಕ್ಕೆ ಯತ್ನಿಸಿದ ಪ್ರಕರಣವನ್ನು ಹೊಸನಗರ ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೂನ್ 19ರ ಸಂಜೆ ಕರುವನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಹೊಸನಗರ ಪೊಲೀಸ್ ಠಾಣೆಯ ಸಿಪಿಸಿ 1609 ಗೋಪಾಲಕೃಷ್ಣ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 67/2026 ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020ರ ಕಲಂ 4, 7, 12 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 11(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ತೀರ್ಥಹಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಹೊಸನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಎಂ.ಐ. ಗೌಡಪ್ಪಗೌಡ ಅವರ ನೇತೃತ್ವದಲ್ಲಿ ಹೊಸನಗರ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಶಂಕರಗೌಡ ಪಾಟೀಲ್, ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ರಾಜುರೆಡ್ಡಿ ಹಾಗೂ ನಗರ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಶಿವಾನಂದ ವೈ ಕೆ ಹಾಗೂ ಸಿಬ್ಬಂದಿಯವರಾದ ಶ್ರೀ ಕಿರಣ್ ಕುಮಾರ್ ಡಿ.ವೈ, ಹೆಚ್.ಸಿ 442, ಶ್ರೀ ಶಿವಕುಮಾರನಾಯ್ಕ, ಹೆಚ್.ಸಿ 459, ಶ್ರೀ ಮಾಯಪ್ಪ ಗೋಕಾವಿ, ಸಿಪಿಸಿ 1297, ಶ್ರೀ ರವಿಚಂದ್ರ, ಸಿಪಿಸಿ 1221, ಶ್ರೀ ಸುನಿಲ್ ಸಿಪಿಸಿ 1683, ಶ್ರೀ ಗೋಪಾಲಕೃಷ್ಣ, ಸಿಪಿಸಿ 1609, ಶಿವಮೊಗ್ಗ, ಎ.ಎನ್.ಸಿ ವಿಭಾಗದ ಶ್ರೀ ಗುರುರಾಜ ಮತ್ತು ಶ್ರೀ ಇಂದ್ರೇಶ ರವರುಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿತರಾದ ಎ1) ಮಹಮದ್ ಸಲೀಂ ಬಾಳೂರ್ ಬಿನ್ ಹಜರತ್ ಸಾಬ್, 34 ವರ್ಷ, ಮುಸ್ಲಿಂ ಜನಾಂಗ, ಸೆಂಟ್ರಿಂಗ್ ಕೆಲಸ, ವಾಸ: ಅಕ್ಕಿ ಆಲೂರು, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ. ಎ2) ಮಕಬುಲ್ ಅಹ್ಮದ್ ಬಡಿಗೇರ ಬಿನ್ ಮಹಮದ್ ಖಾಸಿಂ, 22 ವರ್ಷ, ಮುಸ್ಲಿಂ ಜನಾಂಗ, ಬಾರ್ ಬೆಂಡಿಂಗ್ ಕೆಲಸ, ವಾಸ: ಆಡೂರು ಗ್ರಾಮ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ. 

ಎ3) ಸುಲೇಮಾನ್ ಕೋಲಾರಿ ಬಿನ್ ಖಾಸಿಂ ಸಾಬ್, 26 ವರ್ಷ, ಮುಸ್ಲಿಂ ಜನಾಂಗ, ಬಾರ್ ಬೆಂಡಿಂಗ್, ವಾಸ: ಅಕ್ಕಿ ಆಲೂರು, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ... ಎ4) ಮಲಿಕ್ ರಿಹಾನ್ ಸುರಳೇಶ್ವರ ಬಿನ್ ಮಕಬುಲ್ ಸಾಬ್, 25 ವರ್ಷ, ಮುಸ್ಲಿಂ ಜನಾಂಗ, ಬಾರ್ ಬೆಂಡಿಂಗ್ ಕೆಲಸ, ವಾಸ: ಆಡೂರು ಗ್ರಾಮ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆಬಂಧಿತರೆಲ್ಲರೂ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರು ಮತ್ತು ಆಡೂರು ಗ್ರಾಮದ ನಿವಾಸಿಗಳಾಗಿದ್ದು, ಸೆಂಟ್ರಿಂಗ್ ಹಾಗೂ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಹೊಸನಗರ ಪೊಲೀಸರು ಮುಂದುವರಿಸಿದ್ದಾರೆ.

Police crack cow slaughter case in Hosanagar; four accused arrested   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close