ಸ್ನೇಹಜೀವಿ ಉಮೇಶ್ ಮೇಲೆ ಹಲ್ಲೆ-ನ್ಯಾಯಸಿಗದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆಯ ವಿಡಿಯೋ ವೈರಲ್-Video of snehajeevi Umesh, committing suicide with his family goes viral if there is no justice

 SUDDILIVE || BHADRAVATHI

ಸ್ನೇಹಜೀವಿ ಉಮೇಶ್ ಮೇಲೆ ಹಲ್ಲೆ-ನ್ಯಾಯಸಿಗದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆಯ ವಿಡಿಯೋ ವೈರಲ್-Video of snehajeevi Umesh, committing suicide with his family goes viral if there is no justice       

Snahajeevi, umesh



ಭದ್ರಾವತಿ: ನಗರದ ಕಾರ್ಯಕ್ರಮವೊಂದರ ವೇಳೆ ನಡೆದ ಗಲಾಟೆಯಲ್ಲಿ ಸ್ನೇಹಜೀವಿ ಉಮೇಶ್ ಹಾಗೂ ಆತನ ಅಣ್ಣನ ಮಗನ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನ್ಯಾಯಸಿಗದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸ್ ಠಾಣೆ ಮುಂದೆ ಮಾಡಿರುವ ರಕ್ತಸಿಕ್ತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಭದ್ರಾವತಿಯ ಸ್ನೇಹಜೀವಿ ಉಮೇಶ್ ಮಾತನಾಡಿ, ಜನ್ನಾಪುರದಲ್ಲಿ ಗಾಯಕಿ ದಿ.ಎಸ್ ಜಾನಕಿ ಅವರ ಸ್ಮರಣಾರ್ಥ ಕಾರ್ಯಕ್ರಮಕ್ಕೆ ತೆರಳಿದ್ದಾಗ ವೇದಿಕೆಗೆ ಬರಲು ಆಹ್ವಾನಿಸಲಾಗಿತ್ತು. ಆದರೆ, "ತಮಗೆ ಮೋಸ ಮಾಡಿದವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ" ಎಂದು ಹೇಳಿ ನಿರಾಕರಿಸಿದ್ದಾಗಿ ತಿಳಿಸಿದ್ದಾರೆ. ಇದರಿಂದ ಮಾತಿನ ಚಕಮಕಿ ನಡೆದು, ಕೆಲವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲ್ಲೆಯಲ್ಲಿ ಅವರ ಅಣ್ಣನ ಮಗ ಸುಹಾಸ್‌ಗೂ ಗಂಭೀರ ಗಾಯಗಳಾಗಿದ್ದು, ಉಮೇಶ್ ತಮ್ಮ ಮೇಲೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು  ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಭದ್ರಾವತಿಯ ಜನರು ಈ ದೌರ್ಜನ್ಯವನ್ನು ಖಂಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಮತ್ತೊಂದು ಮಾಹಿತಿ ಪ್ರಕಾರ, ಭಾನುವಾರ ನಡೆದ ಗಾಯಕಿ ಜಾನಕಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈ ಗಲಾಟೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಕಾರ್ಯಕ್ರಮದಲ್ಲಿ ಅನ್ನದಾನದ ವೆಚ್ಚವನ್ನು ಗಾಯಗೊಂಡವರೇ ಭರಿಸಿದ್ದರೂ, ವೇದಿಕೆಗೆ ಆಹ್ವಾನಿಸಿದಾಗ ಅವರು ತೆರಳದ ಹಿನ್ನೆಲೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿರುವುದಾಗಿ ತಿಳಿದುಬಂದಿದೆ.

ಹಲ್ಲೆಗೆ ರಾಜಕೀಯ ಭಿನ್ನಾಭಿಪ್ರಾಯವೂ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆಯಲ್ಲಿ ಉಮೇಶ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಗಾಯಗಳ ತೀವ್ರತೆ ಗಮನಿಸಿದರೆ ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ 

Video of snehajeevi Umesh, committing suicide with his family goes viral if there is no justice   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close