SUDDILIVE || SHIVAMOGGA
ಕೆಎಸ್‌ಆರ್‌ಎಸ್‌ಸಿ ಹೋರಾಟಗಳಿಂದ ಹಿಂದೆ ಸರಿದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್-KSRTC has not backed down from the protests: Kodihalli Chandrashekhar
ಕೆಎಸ್‌ಆರ್‌ಎಸ್‌ಸಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಹೋರಾಟಗಳಿಂದ ಹಿಂದೆ ಸರಿದಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು “ಕೆಎಸ್‌ಆರ್‌ಎಸ್‌ಸಿ ಪ್ರತಿಭಟನೆಗಳು, ಹೋರಾಟಗಳನ್ನೆಲ್ಲಾ ಕೈಬಿಟ್ಟಿದ್ದೀರಾ?” ಎಂದು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿದರು.
“ಈಗಾಗಲೇ ಅನೇಕ ಸಂಘಟನೆಗಳು ಸಕ್ರಿಯವಾಗಿ ಪರಸ್ಪರ ಚರ್ಚೆಗಳನ್ನು ನಡೆಸುತ್ತಿವೆ. ಈ ವಿಚಾರದಲ್ಲಿ ವಿವಿಧ ಸಂಘಟನೆಗಳ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಅವರು ನಮ್ಮನ್ನು ಕರೆದರೆ ನಮ್ಮ ಸಹಕಾರವನ್ನು ನೀಡುತ್ತೇವೆ. ಅನೇಕ ಬಾರಿ ಈ ಕುರಿತು ಸಂಘಟನೆಗಳು ನಮ್ಮೊಂದಿಗೂ ಚರ್ಚೆ ನಡೆಸುತ್ತಿವೆ,” ಎಂದು ಕೋಡಿಹಳ್ಳಿ ಚಂದ್ರಶೇಖರ್ ಉತ್ತರಿಸಿದರು.
ಪ್ರತಿಭಟನೆ ಹಾಗೂ ಹೋರಾಟದ ಮುಂದಿನ ನಡೆಯ ಕುರಿತು ಸಂಘಟನೆಗಳೊಂದಿಗೆ ಚರ್ಚೆಗಳು ನಡೆಯುತ್ತಿದ್ದು, ಅಗತ್ಯವಿದ್ದಲ್ಲಿ ತಮ್ಮ ಸಹಕಾರ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದರು.
ಆ.19ರಂದು ಹೆಚ್.ಎಸ್. ರುದ್ರಪ್ಪ ಸ್ಮರಣಾರ್ಥ ವಿಚಾರ ಸಂಕಿರಣ:
ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಾದ ಹೆಚ್.ಎಸ್. ರುದ್ರಪ್ಪ ಅವರ ಸ್ಮರಣಾರ್ಥ ಆ.19ರಂದು ಶಿವಮೊಗ್ಗದಲ್ಲಿ ವಿಚಾರ ಸಂಕಿರಣ ಹಾಗೂ ಮೆರವಣಿಗೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಚಾರ ಸಂಕಿರಣವನ್ನು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ತಾವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದೇನೆ ಎಂದು ತಿಳಿಸಿದರು. ವಿಚಾರ ಸಂಕಿರಣದಲ್ಲಿ ವಿವಿಧ ಪ್ರಮುಖ ವಿಷಯಗಳ ಕುರಿತು ತಜ್ಞರು ವಿಚಾರ ಮಂಡಿಸಲಿದ್ದಾರೆ. ಅಣು ವಿದ್ಯುತ್ ಸ್ಥಾವರದಿಂದ ಉಂಟಾಗಬಹುದಾದ ಅಪಾಯಗಳ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಲಿದ್ದಾರೆ.
ಅದೇ ರೀತಿ ಶರಾವತಿ ಹಿನ್ನೀರಿಗೆ ಸಂಬಂಧಿಸಿದ ಹೊಸ ಯೋಜನೆ ಹಾಗೂ ವಿದ್ಯುತ್ ಉತ್ಪಾದನೆಯ ನಂತರ ಎದುರಾಗಬಹುದಾದ ಪರಿಸರ ಪರಿಣಾಮಗಳು ಮತ್ತು ಅಪಾಯಗಳ ಕುರಿತು ಪರಿಸರ ತಜ್ಞ ಅಖಿಲೇಶ್ ಚಿಪ್ಳಿ ವಿಚಾರ ಮಂಡಿಸಲಿದ್ದಾರೆ. ಇನ್ನು ಬಗರ್‌ಹುಕುಂ ಹಾಗೂ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಡಾ. ಸರ್ಫರಾಜ್ ಚಂದ್ರಗುತ್ತಿ ಮಾತನಾಡಲಿದ್ದಾರೆ ಎಂದು ಕೋಡಿಯಳ್ಳಿ ಚಂದ್ರಶೇಖರ್ ತಿಳಿಸಿದರು.
ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ
ಆ.19ರಂದು ಬೆಳಗ್ಗೆ 10.30ಕ್ಕೆ ಪ್ರವಾಸಿ ಮಂದಿರದ ಆವರಣದಿಂದ ಹೆಚ್.ಎಸ್. ರುದ್ರಪ್ಪ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಸಾಗಿ ಅಂಬೇಡ್ಕರ್ ಭವನ ತಲುಪಲಿದೆ ಎಂದು ಅವರು ತಿಳಿಸಿದರು.
ಹೆಚ್.ಎಸ್. ರುದ್ರಪ್ಪ ಅವರ ರೈತಪರ ಹೋರಾಟ, ವಿಚಾರಧಾರೆ ಹಾಗೂ ಇಂದಿನ ರೈತರು ಮತ್ತು ಪರಿಸರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕೋಡಿಯಳ್ಳಿ ಚಂದ್ರಶೇಖರ್ ಹೇಳಿದರು.
KSRTC has not backed down from the protests: Kodihalli Chandrashekhar
