SUDDILIVE || SHIVAMOGGA
ಕುಳ್ಳಿ ಕಿರಣ್ ಮರ್ಡರ್-Murder of Kulli Kiran
ಶಿವಮೊಗ್ಗ: ಕುಳ್ಳಿ ಕಿರಣ್ ನ್ನ(32) ಕೊಲೆ ಮಾಡಾಗಿದೆ. ಪ್ರಕರಣದ ಹಿಂದೆ ಯಾವುದೇ ಗ್ಯಾಂಗ್‌ಗಳ ಕೈವಾಡವಿಲ್ಲ ಎಂಬುದು ಸದ್ಯದ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಘಟನೆಗೆ ವೈಯಕ್ತಿಕ ಕಾರಣ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪೋಸ್ಟ್‌ಮಾರ್ಟಮ್ ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಳ್ಳಿ ಕಿರಣ್ ರಾನೇನಕೊಪ್ಪದಲ್ಲಿ ವ್ಯಕ್ತಿಯೊಬ್ವರ ತೋಟವೊಂದನ್ನು ನೋಡಲು ಅಲ್ಲಿಗೆ ಬಂದಿದ್ದ ಎನ್ನಲಾಗಿದ್ದು, ಈ ವೇಳೆ ಯಾರೋ ಅವರಿಗೆ ಫೋನ್ ಮಾಡಿದ್ದರು. ಬಳಿಕ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕೊಲೆ ಮಾಡಿದವರ ಸಂಖ್ಯೆ ಒಂದೆರಡು ಅಥವಾ ಮೂರು ಮಂದಿ ಇರಬಹುದು ಎಂಬ ಮಾಹಿತಿ ಲಭ್ಯವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಈ ಹಂತದಲ್ಲಿ ಯಾರನ್ನೂ ಆರೋಪಿಗಳೆಂದು ಅಧಿಕೃತವಾಗಿ ಘೋಷಿಸಲಾಗಿಲ್ಲ.
ಗ್ಯಾಂಗ್‌ಗಳ ಕೈವಾಡವಿಲ್ಲ
ಘಟನೆ ಹಿಂದೆ ಯಾವುದೇ ಗ್ಯಾಂಗ್ ಅಥವಾ ಸಂಘಟಿತ ಗುಂಪಿನ ಕೈವಾಡವಿದೆ ಎಂಬ ಅನುಮಾನ ಸದ್ಯಕ್ಕೆ ಇಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ಗ್ಯಾಂಗ್ ಸಸ್ಪೆಕ್ಟ್ ಅಲ್ಲ ಎಂದು ಮಾಹಿತಿ ಲಭ್ಯವಾಗಿದೆ, ಬೇರೆಯವರ ವಿಚಾರಣೆ ಹಾಗೂ ತನಿಖೆಯ ನಂತರ ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ.
ಮಾರಕಾಸ್ತ್ರ ಬಳಕೆ ಕುರಿತು ಮಾಹಿತಿ
ಕೊಲೆಗೆ ಮಾರಕಾಸ್ತ್ರ ಬಳಕೆಯಾಗಿದೆ., ಯಾವ ಮಾರಕಾಸ್ತ್ರ ಬಳಸಲಾಗಿದೆ, ಹಲ್ಲೆಯ ನಿಖರ ಸ್ವರೂಪವೇನು ಎಂಬ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಘಟನೆಗೆ ನಿಖರ ಕಾರಣ, ಹಲ್ಲೆ ನಡೆಸಿದವರು ಯಾರು ಮತ್ತು ಯಾವ ಪರಿಸ್ಥಿತಿಯಲ್ಲಿ ಘಟನೆ ನಡೆದಿದೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸದ್ಯದ ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಗೆ ವೈಯಕ್ತಿಕ ಕಾರಣವಿರಬಹುದು ಎನ್ನಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ. ಕಾನೂನು ಬಾಹಿರ ಘಟನೆಗೆ ಸಂಬಂಧಪಟ್ಟ ಯಾವುದೇ ಮುನ್ಸೂಚನೆ ಸಿಗಿದ ಕಾರಣ ಇದೊಂದು ವೈಯುಕ್ತಿಕ ಕಾರಣಕ್ಕೆ ಮರ್ಡರ್ ನಡೆದಿದೆ ಎಂಬುದು ಧೃಢಪಟ್ಟಿದೆ. ಕುಳ್ಳಿ ಕಿರಣ್ ಸೀಗೆಹಟ್ಟಿಯ ಹುಡುಗನಾಗಿದ್ದನು.
