ಸಾಗರದಲ್ಲಿ ಬಿಜೆಪಿಗೆ 'ಸೆಲ್ಫ್ ಗೋಲ್': ತಹಶೀಲ್ದಾರ್ ಪರ ಪ್ರತಿಭಟನೆ ವೇಳೆ ಅನಿರೀಕ್ಷಿತ ಹಿನ್ನಡೆ- 'Self-goal' for BJP in Sagara: Unexpected setback during protest in support of the Tahsildar ​

SUDDILIVE || SAGARA

ಸಾಗರದಲ್ಲಿ ಬಿಜೆಪಿಗೆ 'ಸೆಲ್ಫ್ ಗೋಲ್': ತಹಶೀಲ್ದಾರ್ ಪರ ಪ್ರತಿಭಟನೆ ವೇಳೆ ಅನಿರೀಕ್ಷಿತ ಹಿನ್ನಡೆ- 'Self-goal' for BJP in Sagara: Unexpected setback during protest in support of the Tahsildar     ​

Self, goal




ಸಾಗರ: ಕೆಡಿಪಿ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಮಹಿಳಾ ಮೋರ್ಚಾ ಸಾಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್ ಹಾಗೂ ಡಾ. ರಾಜನಂದಿನಿ ಕಾಗೋಡು ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಕಟು ವಾಗ್ದಾಳಿ ನಡೆಸಿ ಕ್ಷಮೆಯಾಚನೆಗೆ ಒತ್ತಾಯಿಸಲಾಯಿತು.

​ಆದರೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಡಾ. ಪ್ರತಿಭಾ ನೀಡಿದ ಸ್ಪಷ್ಟನೆ ಬಿಜೆಪಿಗೆ ಭಾರೀ ಮುಜುಗರ ತಂದಿಟ್ಟಿದೆ. ಶಾಸಕರ ಮಾತುಗಳಿಂದ ತಮಗೆ ಯಾವುದೇ ನೋವಾಗಿಲ್ಲ ಎಂದ ಅವರು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಜನಪರ ಕೆಲಸ ಮಾಡಲು ಶಾಸಕರು ಮಾರ್ಗದರ್ಶನ ನೀಡಿದ್ದಾರೆಯೇ ಹೊರತು ಅಕ್ರಮ ತಡೆಯುವುದನ್ನು ವಿರೋಧಿಸಿಲ್ಲ ಎಂದು ಸಮರ್ಥಿಸಿಕೊಂಡರು. ಮಹಿಳಾ ಅಧಿಕಾರಿಯ ಈ ಹೇಳಿಕೆಯಿಂದ ಕಾಂಗ್ರೆಸ್ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೊರಟ ಬಿಜೆಪಿ ಪಡೆ ಪ್ರತಿಭಟನಾ ವೇದಿಕೆಯಲ್ಲೇ ಹಿನ್ನಡೆ ಅನುಭವಿಸುವಂತಾಯಿತು.

'Self-goal' for BJP in Sagara: Unexpected setback during protest in support of the Tahsildar     ​

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close