ಹಬ್ಬ ಮುಗೀಲಿ, ಮುಂದೈತೆ ಮಾರಿಹಬ್ಬ’: ಸರ್ಕಾರದ ವಿರುದ್ಧ ಶಾಸಕ ಚೆನ್ನಿ ಗುಡುಗು- Habba Mugili, Mondaite Marihabba': MLA Chenni Gudugu against the government

 SUDILIVE || SHIVAMOGFA

‘ಹಬ್ಬ ಮುಗೀಲಿ, ಮುಂದೈತೆ ಮಾರಿಹಬ್ಬ’: ಸರ್ಕಾರದ ವಿರುದ್ಧ ಶಾಸಕ ಚೆನ್ನಿ ಗುಡುಗು- Habba Mugili, Mondaite Marihabba': MLA Chenni Gudugu against the government   
Shasaka, channabasappa



ಶಿವಮೊಗ್ಗ: ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ ಗಣಪತಿ ಪ್ರತಿಷ್ಠಾಪನೆ, ಮೆರವಣಿಗೆ ವಿಚಾರದಲ್ಲಿ ಪೊಲೀಸರ ಧೋರಣೆಯನ್ನು ಖಂಡಿಸಿರುವ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ), ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇವತ್ತು ಹಬ್ಬ ಆಗಿದೆ, ಮುಂದೆ ಐತೆ ಮಾರಿಹಬ್ಬ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

“ಯಥಾ ರಾಜ ತಥಾ ಪ್ರಜ. ಇಡೀ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ವಿಶೇಷವಾಗಿ ಗೃಹ ಸಚಿವರ ಮಾನಸಿಕತೆಯೂ ಹಾಗೆಯೇ ಇದೆ. ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ” ಎಂದು ಅವರು ಆರೋಪಿಸಿದರು.

ಮಸೀದಿ ಇರುವ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸಾಗದಂತೆ ಸೂಚನೆ ನೀಡಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ಒಬ್ಬ ಇನ್‌ಸ್ಪೆಕ್ಟರ್ ಈ ರೀತಿಯ ಧೋರಣೆ ತಾಳುವುದು ಸಂವಿಧಾನ ವಿರೋಧಿ ಎಂದು ಹೇಳಿದರು.

“ಮಸೀದಿ ಮುಂದೆ ಹೋಗಬೇಡಿ ಎಂದು ಹೇಳಲು ಇನ್‌ಸ್ಪೆಕ್ಟರ್‌ಗೆ ಏನು ಅಧಿಕಾರ ಇದೆ? ಅಲ್ಲಿ ಏನಿದೆ? ಬಾಂಬ್‌ಗಳಿವೆಯೇ? ಗಣಪತಿ ಮೆರವಣಿಗೆ ಹೋದರೆ ಗಣಪತಿ ಮೇಲೆ ಬಾಂಬ್ ಹಾಕುತ್ತಾರೆಯೇ? ಯಾಕೆ ಮಸೀದಿ ಮುಂದೆ ಹೋಗಬಾರದು?” ಎಂದು ಪ್ರಶ್ನಿಸಿದರು.

ಮಸೀದಿ ಒಳಗೆ ಏನಿದೆ ಎಂಬುದನ್ನು ಪರಿಶೀಲಿಸುವುದು ಅಗತ್ಯವಿದ್ದರೆ ಸಂಬಂಧಪಟ್ಟ ಭದ್ರತಾ ಇಲಾಖೆಗಳು ಆ ಕೆಲಸ ಮಾಡಬೇಕು. ಆದರೆ ಮಸೀದಿ ಮುಂದೆ ಹೋಗಬಾರದು ಎಂದು ಹೇಳುವ ಮೂಲಕ ನಿರ್ಬಂಧ ಹೇರುವುದು ಸರಿಯಲ್ಲ. ಇಂತಹ ಕ್ರಮವನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಂಬಂಧಪಟ್ಟ ಇನ್‌ಸ್ಪೆಕ್ಟರ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿರುವುದನ್ನೂ ಶಾಸಕ ಚನ್ನಬಸಪ್ಪ ಟೀಕಿಸಿದರು. “ಇನ್‌ಸ್ಪೆಕ್ಟರ್ ಮಾಡಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಅಥವಾ ಗೃಹ ಸಚಿವರು ಹೇಳುತ್ತಿಲ್ಲ. ಅವನು ಮಾಡಿದ್ದೇ ಆಟ ಎಂಬಂತಾಗಿದೆ ಸರ್ಕಾರದ ನಿಲುವು” ಎಂದು ಆರೋಪಿಸಿದರು.

ಟಿ. ನರಸೀಪುರ ಪ್ರತಿಭಟನೆ, ಬಂಧನದ ವಿರುದ್ಧ ಆಕ್ರೋಶ

ಟಿ. ನರಸೀಪುರದಲ್ಲಿ ಇದೇ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿರುವುದನ್ನೂ ಅವರು ಖಂಡಿಸಿದರು.

“ನ್ಯಾಯ ಕೇಳಲು ಹೋದವರನ್ನು ಬಂಧಿಸಲಾಗುತ್ತಿದೆ. ಪೊಲೀಸ್ ಠಾಣೆ ಧ್ವಂಸ ಮಾಡಿದವರ ಬಗ್ಗೆ ವಿಶೇಷ ಪ್ರೀತಿ ತೋರಿಸಲಾಗುತ್ತಿದೆ. ಹುಬ್ಬಳ್ಳಿ ಭಾಗದಲ್ಲಿ ಪೊಲೀಸ್ ಠಾಣೆ ಧ್ವಂಸ ಮಾಡಿದವರ ಪ್ರಕರಣಗಳನ್ನು ವಾಪಸ್ ಪಡೆಯುವ ವ್ಯವಸ್ಥೆ ನಡೆಯುತ್ತಿದೆ. ಆದರೆ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಡೆಸಿದ ಚುನಾಯಿತ ಪ್ರತಿನಿಧಿಗಳು ಮತ್ತು ಹಿಂದೂ ಯುವಕರನ್ನು ಬಂಧಿಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ನಡೆಯುವುದಿಲ್ಲ. ಸರ್ಕಾರದ ಈ ‘ತೊಘಲಕ್ ನೀತಿ’ಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಅವರು ಹೇಳಿದರು.

‘ಇದು ಹಿಂದೂ ಸಮಾಜ ಸಹಿಸುವುದಿಲ್ಲ’

ಲೋಕಸಭಾ ಸದಸ್ಯರು, ಮಾಜಿ ಸಂಸದರು, ವಿರೋಧ ಪಕ್ಷದ ನಾಯಕರು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಬಂಧಿಸುವ ಮೂಲಕ ಸರ್ಕಾರ ದಮನಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ಆರೋಪಿಸಿದರು.

“ಇದು ಹಿಂದೂ ಸಮಾಜ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡುತ್ತೇವೆ. ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

“ಕಾಂಗ್ರೆಸ್ ಮಾತ್ರವಲ್ಲ, ಇಡೀ ಸರ್ಕಾರವೇ ಮುಸ್ಲಿಮರಿಗೆ ಸರೆಂಡರ್ ಆಗಿದೆ. ಕಾಂಗ್ರೆಸ್ ಪಕ್ಷ ಬಹಳ ವರ್ಷಗಳ ಹಿಂದೆಯೇ ಸರೆಂಡರ್ ಆಗಿತ್ತು. ಈಗ ನಡೆಯುತ್ತಿರುವ ಘಟನೆಗಳನ್ನು ಇಡೀ ಹಿಂದೂ ಸಮಾಜ ಗಮನಿಸುತ್ತಿದೆ. ಹಿಂದೂ ಸಮಾಜದ ಮೇಲೆ ಆಕ್ರಮಣ ನಡೆಯುತ್ತಿರುವುದು ಗೊತ್ತಾಗುತ್ತಿದೆ. ಇನ್ನು ಕಾಂಗ್ರೆಸ್‌ನವರಿಗೆ ಉಳಿಗಾಲವಿಲ್ಲ” ಎಂದು ಶಾಸಕ ಚನ್ನಬಸಪ್ಪ ಹೇಳಿದರು.

‘ನಾಲ್ಕು ದಿನಗಳ ಗಡುವು ಮೀರಿದರೆ ಸರ್ಕಾರವೇ ಹೊಣೆ’

ಸರ್ಕಾರಕ್ಕೆ ನೀಡಿರುವ ನಾಲ್ಕು ದಿನಗಳ ಗಡುವಿನ ಬಗ್ಗೆಯೂ ಮಾತನಾಡಿದ ಅವರು, ಸರ್ಕಾರ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

“ಗಡುವಿಗೆ ಇವತ್ತು ಬೆಲೆ ಕೊಡದೆ ಹೋದರೆ, ರಾಜ್ಯದಲ್ಲಿ ಆಗುವ ಎಲ್ಲಾ ಅನಾಹುತಗಳಿಗೆ ಅವರೇ ಕಾರಣೀಭೂತರು” ಎಂದು ಹೇಳಿದರು.

ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾವೂ ಸೇರಿದಂತೆ ಇಡೀ ಹಿಂದೂ ಸಮಾಜ ಸಂಬಂಧಪಟ್ಟ ಸ್ಥಳಕ್ಕೆ ತೆರಳಲಿದೆ ಎಂದು ಅವರು ಘೋಷಿಸಿದರು.

“ಖಂಡಿತ ಹೋಗುತ್ತೇನೆ. ನಾನು ಮಾತ್ರ ಅಲ್ಲ, ಇಡೀ ಹಿಂದೂ ಸಮಾಜ ಅಲ್ಲಿಗೆ ಹೋಗುತ್ತದೆ. ಅವರು ಸರಿಯಾದ ಕ್ರಮ ತೆಗೆದುಕೊಳ್ಳದೆ ಹೋದರೆ ನಾವು ಸುಮ್ಮನಿರುವುದಿಲ್ಲ” ಎಂದು ಶಾಸಕ ಚನ್ನಬಸಪ್ಪ ಎಚ್ಚರಿಕೆ ನೀಡಿದರು.

ಅಂತಿಮವಾಗಿ, “ಹಿಂದೂಗಳನ್ನು ಮುಟ್ಟಿದರೆ ಏನಾಗುತ್ತದೆ ಎಂಬುದನ್ನು ನೋಡೋಣ. ಇದು ನಿಮ್ಮ ಅಧೋಗತಿಗೆ ಮೊದಲ ಹೆಜ್ಜೆ” ಎಂದು ಸರ್ಕಾರದ ವಿರುದ್ಧ ತೀವ್ರ ಎಚ್ಚರಿಕೆ ನೀಡಿದರು.

Habba Mugili, Mondaite Marihabba': MLA Chenni Gudugu against the government   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close