CITY-COOPERATUVE ಬ್ಯಾಂಕ್ ಲಾಕರ್‌ನಿಂದ 120 ಗ್ರಾಂ ಚಿನ್ನಾಭರಣ ನಾಪತ್ತೆ; ಕೋಟೆ ಠಾಣೆಯಲ್ಲಿ ಪ್ರಕರಣ-120 grams of gold jewellery missing from CITY-COOPERATUVE bank locker; case registered at Chaura police station

 SUDDILIVE || SHIVAMOGGA

CITY-COOPERATUVE ಬ್ಯಾಂಕ್ ಲಾಕರ್‌ನಿಂದ 120 ಗ್ರಾಂ ಚಿನ್ನಾಭರಣ ನಾಪತ್ತೆ; ಕೋಟೆ ಠಾಣೆಯಲ್ಲಿ ಪ್ರಕರಣ-120 grams of gold jewellery missing from CITY-COOPERATUVE bank locker; case registered at Chaura police station   
Bank, jewellary


ಶಿವಮೊಗ್ಗ:
ನಗರದ ಕೋಟೆ ರಸ್ತೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ 120 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿರುವ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ದಾಖಲೆಯ ಪ್ರಕಾರ, ಕೋಟೆ ರಸ್ತೆಯ ನಿವಾಸಿ ಲಕ್ಷ್ಮೀ ಸತ್ಯನಾರಾಯಣ (75) ಅವರು ಕಳೆದ ನಾಲ್ಕು ವರ್ಷಗಳಿಂದ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಅಲ್ಲಿನ ಲಾಕರ್‌ನಲ್ಲಿ ತಮ್ಮ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಇಡುತ್ತಿದ್ದರು. 2025ರ ಅಕ್ಟೋಬರ್ 9ರಂದು ಸುಮಾರು 400 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಇಟ್ಟಿದ್ದರು.

ಲಾಕರ್‌ಗೆ ಎರಡು ಕೀಲಿಗಳಿದ್ದು, ಒಂದು ಕೀ ಲಕ್ಷ್ಮೀ ಸತ್ಯನಾರಾಯಣ ಅವರ ಬಳಿ ಹಾಗೂ ಮತ್ತೊಂದು ಕೀ ಬ್ಯಾಂಕ್ ಸಿಬ್ಬಂದಿ ಬಳಿ ಇರುತ್ತಿತ್ತು. ಎರಡೂ ಕೀಲಿಗಳನ್ನು ಬಳಸಿದಾಗ ಮಾತ್ರ ಲಾಕರ್ ತೆರೆಯುವ ವ್ಯವಸ್ಥೆ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 24ರಂದು ಬೆಳಗ್ಗೆ ಸುಮಾರು 11.30ಕ್ಕೆ ಲಕ್ಷ್ಮೀ ಸತ್ಯನಾರಾಯಣ ಅವರು ಬ್ಯಾಂಕ್‌ಗೆ ತೆರಳಿ, ಬ್ಯಾಂಕ್ ಸಿಬ್ಬಂದಿಯ ಸಹಾಯದಿಂದ ಲಾಕರ್ ತೆರೆದಾಗ ಕೆಲವು ಚಿನ್ನಾಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಪುತ್ರ ಬದರಿನಾಥ್ ಅವರಿಗೆ ಮಾಹಿತಿ ನೀಡಿದ್ದು, ಅವರು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಒಟ್ಟು 120 ಗ್ರಾಂ ತೂಕದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಪತ್ತೆಯಾಗಿದೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ನಾಪತ್ತೆಯಾಗಿರುವ ಆಭರಣಗಳಲ್ಲಿ 15 ಗ್ರಾಂ ನವರತ್ನ ನೆಕ್ಲೆಸ್, 16 ಗ್ರಾಂ ಹವಳದ ಸರ ಮತ್ತು ಬಾಬಾ ಪೆಂಡೆಂಟ್, 24 ಗ್ರಾಂ ಚಿನ್ನದ ಬಳೆಗಳು, 20 ಗ್ರಾಂ ಮಾವಿನ ಸರ ಹಾಗೂ ಓಲೆ ಸೆಟ್, 4 ಗ್ರಾಂ ಕೆಂಪು ಹರಳಿನ ಓಲೆ, 8 ಗ್ರಾಂ ಮಣಿ ಸರ, 15 ಗ್ರಾಂ ಚಿನ್ನದ ಸರ ಹಾಗೂ 18 ಗ್ರಾಂ ಬಿಳಿ-ಕೆಂಪು ನೆಕ್ಲೆಸ್ ಸೇರಿವೆ. FIRನಲ್ಲಿ ಇವುಗಳ ಒಟ್ಟು ಅಂದಾಜು ಮೌಲ್ಯವನ್ನು ₹60,000 ಎಂದು ದಾಖಲಿಸಲಾಗಿದೆ.

ಬ್ಯಾಂಕ್ ಸಿಬ್ಬಂದಿ ಹಾಗೂ ವ್ಯವಸ್ಥಾಪಕರನ್ನು ಈ ಕುರಿತು ವಿಚಾರಿಸಿದರೂ ಸಮಂಜಸವಾದ ಉತ್ತರ ದೊರೆತಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಬ್ಯಾಂಕ್‌ನ ನೌಕರ ವರ್ಗದವರಲ್ಲಿ ಯಾರೋ ಚಿನ್ನಾಭರಣಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಿ, ಕಳವಾದ ಆಭರಣಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 184/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 305 ಅಡಿಯಲ್ಲಿ ಸೆಪ್ಟೆಂಬರ್ 24ರಂದು ರಾತ್ರಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಕರಣದಲ್ಲಿ ಬ್ಯಾಂಕ್‌ನ ಕೋಟೆ ರಸ್ತೆ ಶಾಖೆಯ ಸಿಬ್ಬಂದಿಯನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದ್ದು, ತನಿಖೆಯ ಬಳಿಕ ಕಳವು ಪ್ರಕರಣದ ನಿಖರ ಕಾರಣ ಹಾಗೂ ಆಭರಣಗಳು ಹೇಗೆ ನಾಪತ್ತೆಯಾದವು ಎಂಬುದು ತಿಳಿದುಬರಬೇಕಿದೆ.

-120 grams of gold jewellery missing from CITY-COOPERATUVE bank locker; case registered at Chaura police station   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close