ಭಗತ್ ಸಿಂಗ್ ಜನ್ಮದಿನಾಚರಣೆ: ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಯುವಕರ ಬಳಗ- Bhagat Singh's birthday celebration: A group of young people celebrated their birthday with special children

 SUDDILIVE || SHIVAMOGGA

ಭಗತ್ ಸಿಂಗ್ ಜನ್ಮದಿನಾಚರಣೆ: ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಯುವಕರ ಬಳಗ- Bhagat Singh's birthday celebration: A group of young people celebrated their birthday with special children   
Bhagath, singh

ಶಿವಮೊಗ್ಗ: ಭಗತ್ ಸಿಂಗ್ ಯುವಕರ ಬಳಗದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 119ನೇ ಜನ್ಮದಿನಾಚರಣೆಯನ್ನು ವಿಶೇಷ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಡಾ. ಪುಟ್ಟರಾಜ ಕವಿ ಗವಾಯಿಗಳ ಅಂಧ ಮಕ್ಕಳ ಸಂಗೀತ ವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ವಿದ್ಯಾಲಯದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ದಿನನಿತ್ಯದ ಬಳಕೆಗೆ ಅಗತ್ಯವಾಗುವ ಬಟ್ಟೆ, ಹಣ್ಣು, ಸಿಹಿತಿಂಡಿ ಸೇರಿದಂತೆ ವಿವಿಧ ಉಪಯುಕ್ತ ವಸ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗದ ಸದಸ್ಯರು, ಭಗತ್ ಸಿಂಗ್ ಅವರ ದೇಶಪ್ರೇಮ, ಧೈರ್ಯ, ತ್ಯಾಗ ಮತ್ತು ಸಾಮಾಜಿಕ ಕಾಳಜಿಯ ಕುರಿತು ಮಕ್ಕಳಿಗೆ ಹಾಗೂ ಯುವಕರಿಗೆ ತಿಳಿಸಿದರು. ಭಗತ್ ಸಿಂಗ್ ಅವರು ಬೆಳೆದು ಬಂದ ಹಾದಿ, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ವಹಿಸಿದ ಪಾತ್ರ ಹಾಗೂ ದೇಶಕ್ಕಾಗಿ ಮಾಡಿದ ತ್ಯಾಗಗಳು ಇಂದಿನ ಯುವಜನತೆಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

ಜನ್ಮದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅಗತ್ಯವಿರುವ ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರಲ್ಲಿ ಸಂತಸ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಇಂತಹ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಬಳಗದ ಸದಸ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಯುವಕರ ಬಳಗದ ಅಧ್ಯಕ್ಷ ಆರ್‌ಟಿಆರ್ ಮಂಜುನಾಥ್, ಶಶಿಕುಮಾರ್, ರತ್ನ ಟ್ರೇಡರ್ಸ್ ಮಂಜು, ರಘು, ವಿಜಯ್, ನವೀನ್, ರಾಜೇಶ್, ಅಜಿತ್, ಸಂಜಯ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

Bhagat Singh's birthday celebration: A group of young people celebrated their birthday with special children   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close