ಕೊಲೆ ಯತ್ನ ಆರೋಪ: ಶಾಸಕ ಬಿ.ಕೆ.ಸಂಗಮೇಶ್ ಸೇರಿ ಐವರು ಆರೋಪಮುಕ್ತ- Attempted murder charge: Five including MLA B.K. Sangamesh acquitted

 SUDDILIVE || BANGALORE

ಕೊಲೆ ಯತ್ನ ಆರೋಪ: ಶಾಸಕ ಬಿ.ಕೆ.ಸಂಗಮೇಶ್ ಸೇರಿ ಐವರು ಆರೋಪಮುಕ್ತ- Attempted murder charge: Five including MLA B.K. Sangamesh acquitted   

Mla, sangmesh


ಬೆಂಗಳೂರು:
ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಸೇರಿದಂತೆ ಐವರು ಆರೋಪಿಗಳನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಸೆಷನ್ಸ್ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ಶಾಸಕ ಬಿ.ಕೆ.ಸಂಗಮೇಶ್, ಅವರ ಅಣ್ಣ ಬಿ.ಕೆ.ಮೋಹನ್, ತಮ್ಮ ಬಿ.ಕೆ.ಜಗದೀಶ್ ಹಾಗೂ ಸಂಗಮೇಶ್ ಅವರ ಮಕ್ಕಳಾದ ಗಣೇಶ ಮತ್ತು ಬಸವರಾಜ ಪ್ರಕರಣದ ಆರೋಪಿಗಳಾಗಿದ್ದರು.

ಕಾಯ್ದಿರಿಸಿದ್ದ ತೀರ್ಪನ್ನು ವಿಶೇಷ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ಅವರು ಮಂಗಳವಾರ ಪ್ರಕಟಿಸಿ, ಎಲ್ಲ ಆರೋಪಿಗಳೂ ನಿರಪರಾಧಿಗಳು ಎಂದು ಘೋಷಿಸಿದರು.

ವಿಚಾರಣೆ ವೇಳೆ ಆರೋಪಿಗಳ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ದೂರುದಾರರಾದ ಸಿ.ಮಹೇಶ್ ಕುಮಾರ್ ಅವರು ರಾಜಕೀಯ ಎದುರಾಳಿಯಾಗಿದ್ದು, ಉದ್ದೇಶಪೂರ್ವಕವಾಗಿ ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಸುಳ್ಳು ಸಾಕ್ಷ್ಯ ನೀಡಲಾಗಿದೆ ಎಂದು ವಾದಿಸಿದ್ದರು.

ಈ ವಾದವನ್ನು ನ್ಯಾಯಾಲಯ ಪರಿಗಣಿಸಿದೆ. ದೂರುದಾರರ ಅಕ್ಕ ಜಯಮ್ಮ ಅವರು ನಂಬಲರ್ಹವಾದ ಸಾಕ್ಷ್ಯ ನೀಡಲು ವಿಮುಖರಾಗಿರುವುದರಿಂದ ಅವರ ಸಾಕ್ಷ್ಯವನ್ನು ಆಧರಿಸಿ ಯಾವುದೇ ರೀತಿಯ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ವಿವರಿಸಿದ್ದಾರೆ.

ಅಲ್ಲದೆ, ತನಿಖೆಯ ಸಂದರ್ಭದಲ್ಲಿ ವಿಭಿನ್ನ ರೀತಿಯ ಸಾಕ್ಷ್ಯಾಧಾರಗಳು ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಬಿಡುಗಡೆ ತೀರ್ಪುಗಳ ಪರಿಶೀಲನಾ ಸಮಿತಿಗೆ (Acquittal Review Committee) ನ್ಯಾಯಾಲಯ ಸೂಚಿಸಿದೆ. ತನಿಖೆಯಲ್ಲಿ ಲೋಪ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಲಾಗಿದೆ.

ಪ್ರಕರಣ: 

ಭದ್ರಾವತಿ ನಗರದ ಹಳದಮ್ಮ ದೇವಿಯ ಜಾತ್ರೆಯ ಪ್ರಯುಕ್ತ 2010ರ ಮೇ 21ರಂದು ಕುಸ್ತಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಬಿ.ಕೆ.ಸಂಗಮೇಶ್ ಹಾಗೂ ಅವರ ಬೆಂಬಲಿಗರು ಕಾರುಗಳಲ್ಲಿ ಬಂದು ನಮ್ಮ ಮನೆಗೆ ನುಗ್ಗಿ ನಮ್ಮ ಮೇಲೆ ಗಂಭೀರವಾದ ಹಲ್ಲೆ ಮಾಡಿರುತ್ತಾರೆ. ಈ ಸಮಯದಲ್ಲಿ ಬಿಡಿಸಲು ಬಂದ ನನ್ನ ಅಕ್ಕ ಜಯಮ್ಮ ಅವರ ಮೇಲೂ ಹಲ್ಲೆ ನಡೆಸಲಾಗಿದೆ' ಎಂದು ಸಿ.ಮಹೇಶ್ ಕುಮಾರ್ ಅವರು ಬಿ.ಕೆ.ಸಂಗಮೇಶ್ ಮತ್ತಿತರರ ವಿರುದ್ಧ 2010ರ ಮೇ 22ರಂದು ದೂರು ನೀಡಿದ್ದರು.

ದೂರಿನ ಅನ್ವಯ ಭದ್ರಾವತಿಯ ಪೇಪ‌ರ್ ಟೌನ್ ಠಾಣೆಯ ಪೊಲೀಸರು; ಭಾರತೀಯ ದಂಡ ಸಂಹಿತೆ-1860ರ ಕಲಂ 120 (2) ( ), 147 (ក), 307 (ಕೊಲೆ ಯತ್ನ) ಮತ್ತು 326ರ (ಅಪಾಯಕಾರಿ ಆಯುಧ ಬಳಸಿ ಗಂಭೀರ ಗಾಯ ಉಂಟು ಮಾಡುವುದು) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

Attempted murder charge: Five including MLA B.K. Sangamesh acquitted 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close