ಭರ್ಜರಿ ಜನಸ್ತೋಮದೊಂದಿಗೆ ಹೊರಟ ಭದ್ರಾವತಿಯ 54 ನೇ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ-Bhadravati's 54th Hindu Mahasabha Ganapati Rajbeedi Festival kicks off with huge crowd

SUDDILIVE || SHIVAMOGGA

ಭರ್ಜರಿ ಜನಸ್ತೋಮದೊಂದಿಗೆ ಹೊರಟ ಭದ್ರಾವತಿಯ 54 ನೇ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ-Bhadravati's 54th Hindu Mahasabha Ganapati Rajbeedi Festival kicks off with huge crowd    

Rajabeedi, utsava


ಭದ್ರಾವತಿ: ನಗರದ ಹೊಸಮನೆ ಮುಖ್ಯರಸ್ತೆಯ ಗಣಪತಿ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿದ್ದ 54ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಹಿಂದೂ ಮಹಾಸಭಾ ಹಾಗೂ ಹಿಂದೂ ಸೇನೆ ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಯುವಕ-ಯುವತಿಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಗಣೇಶನ ದರ್ಶನ ಪಡೆದು ಆಶೀರ್ವಾದ ಪಡೆದರು.

ಸುಮಾರು ಬೆಳಿಗ್ಗೆ 11 ಗಂಟೆ ವೇಳೆಗೆ ಗಣಪತಿ ದೇವಸ್ಥಾನದ ಬಳಿಯಿಂದ ರಾಜಬೀದಿ ಉತ್ಸವದ ಮೆರವಣಿಗೆ ಆರಂಭವಾಯಿತು. ಶಿವಾಜಿ ಸರ್ಕಲ್, ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್ ಮೂಲಕ ರೈಲ್ವೆ ನಿಲ್ದಾಣದ ಮುಂಭಾಗ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಹುತ್ಹಾ ಕಾಲೋನಿ ಮಾರ್ಗವಾಗಿ ಮೆರವಣಿಗೆ ಸಾಗಿತು.

ನಂತರ ಹುತ್ಹಾ ಕಾಲೋನಿಯಿಂದ ವಾಪಸ್ ಮಾಧವಾಚಾರ್ ಸರ್ಕಲ್‌ಗೆ ಆಗಮಿಸಿ, ಅಲ್ಲಿಂದ ಗಾಂಧಿ ಸರ್ಕಲ್ ಮೂಲಕ ನಗರಸಭೆ ಮುಂಭಾಗಕ್ಕೆ ಮೆರವಣಿಗೆ ಸಾಗಿತು. ಬಳಿಕ ಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.

ಮೆರವಣಿಗೆಯ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ವತಿಯಿಂದ ಅಲ್ಲಲ್ಲಿ ಪಾನೀಯ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸೇವಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಗಣಪತಿಗಾಗಿ ದೊಡ್ಡ ದೊಡ್ಡ ಹೂವಿನ ಹಾರಹಾಕಲು ಅಲ್ಲಲ್ಲಿ ಕ್ರೇನ್ ವ್ಯವಸ್ಥೆಯೂ ಮಾಡಲಾಗಿದೆ. ಪೊಲೀಸರ ಬಿಗಿ ಬಂದೋ ಬಸ್ತ್ ನಲ್ಲಿ ಈ ಮೆರವಣಿಗೆ ಸಾಗುತ್ತಿದ್ದು ಎಸ್ಪಿ ನಿಖಿಲ್ ಮೆರವಣಿಗೆಯ ಉದ್ದಕ್ಕೂ ಹಾಜರಿದ್ದರು. 

ರಂಗಪ್ಪ ಸರ್ಕಲ್‌ನಿಂದ ಸೇತುವೆ ದಾಟಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಹಾಗೂ ಹಿಂದೂ ಹರ್ಷ ಅವರ ಭಾವಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ರಾತ್ರಿ ಸುಮಾರು 10 ಗಂಟೆ ವೇಳೆಗೆ ಗಣಪತಿಯ ಜಲಸ್ಥಂಭನ ನಡೆಯುವ ಸಾಧ್ಯತೆ ಇದೆ. ಕಳೆದ ಒಂದೆರಡು ವರ್ಷಗಳಿಂದ ಗಣಪತಿ ವಿಸರ್ಜನೆ ತಡರಾತ್ರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಜಲಸ್ಥಂಭನದ ಸಮಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.

Bhadravati's 54th Hindu Mahasabha Ganapati Rajbeedi Festival kicks off with huge crowd    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close