ಕೊಳದಲ್ಲಿ ಅಡಗಿದ್ದ ‘ಕರಿಯಾ’ ಕೊನೆಗೂ ಪೊಲೀಸರ ಬಲೆಗೆ; ದುರ್ಯೋಧನನ ಕಥೆ ನೆನಪಿಸಿದ ಕಾರ್ಯಾಚರಣೆ-'Kariya', hiding in a pond, finally falls into the police net; an operation reminiscent of the story of Duryodhana

 SUDDILIVE || BHADRAVATHI

ಕೊಳದಲ್ಲಿ ಅಡಗಿದ್ದ ‘ಕರಿಯಾ’ ಕೊನೆಗೂ ಪೊಲೀಸರ ಬಲೆಗೆ; ದುರ್ಯೋಧನನ ಕಥೆ ನೆನಪಿಸಿದ ಕಾರ್ಯಾಚರಣೆ-'Kariya', hiding in a pond, finally falls into the police net; an operation reminiscent of the story of Duryodhana

Kariya, bhadravathi





ಭದ್ರಾವತಿ: ನ್ಯಾಯಾಲಯದಿಂದ ಮೂರು ಬಾರಿ ಜಾಮೀನು ರಹಿತ ವಾರಂಟ್‌ (NBW) ಜಾರಿಯಾಗಿದ್ದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಭದ್ರಾವತಿ ನಿವಾಸಿ ಆರೋಪಿ ದಿಲೀಪ್ @ ಕರಿಯಾನನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ನ್ಯಾಯಾಲಯದ ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿದ್ದ ಆರೋಪಿ ಕರಿಯಾ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.

ಈ ವೇಳೆ ಆರೋಪಿ ಕೊಳವೊಂದರಲ್ಲಿ ಅಡಗಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಅವರು ನೀರಿಗೆ ಧುಮುಕಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಕೊಳದಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ ರೀತಿಯು ಮಹಾಭಾರತದಲ್ಲಿ ಪಾಂಡವರಿಂದ ತಪ್ಪಿಸಿಕೊಳ್ಳಲು ಸರೋವರದಲ್ಲಿ ಅಡಗಿಕೊಂಡಿದ್ದ ದುರ್ಯೋಧನನ ಪ್ರಸಂಗವನ್ನು ನೆನಪಿಸುವಂತಿತ್ತು ಎಂದು ಸ್ಥಳೀಯವಾಗಿ ಚರ್ಚೆಯಾಗುತ್ತಿದೆ.

ಆರೋಪಿಯನ್ನು ಯಶಸ್ವಿಯಾಗಿ ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಸಿಎಚ್‌ಸಿ ಗಂಗಾಧರ ಹಾಗೂ ಹಾಲಪ್ಪ ಅವರುಗಳೂ ಶ್ರಮಿಸಿದ್ದಾರೆ.

ಮೂರು ಬಾರಿ ಜಾಮೀನು ರಹಿತ ವಾರಂಟ್‌ ಜಾರಿಯಾಗಿದ್ದರೂ ಪೊಲೀಸರಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

'Kariya', hiding in a pond, finally falls into the police net; an operation reminiscent of the story of Duryodhana

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close