SUDDILIVE || SHIVAMOGGA
ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದ ಆಟಂಬಾಂಬ್ ಸಿಡಿದು ನಾಯಿ ಸಾವು-Illegally kept cracker misfires at home; dog dies after being hit by cracker
ಶಿವಮೊಗ್ಗ: ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದ ಪಟಾಕಿ ಮಿಸ್‌ಫೈರ್ ಆಗಿ ನಾಯಿಯ ಬಲಿ ಪಡೆದಿದ್ದು. ಇದಕ್ಕೆ ಕಾರಣಾದ ಆರೋಪಿಯನ್ನ ಬಂಧಿಸಲಾಗಿದೆ. ಈ ಘಟನೆ ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಚೌಟ್ಟಿ ಗ್ರಾಮದಲ್ಲಿ ನಡೆದಿದೆ.
ಹಿರೇಚೌಟ್ಟಿ ಗ್ರಾಮದ ನಿವಾಸಿ ಮಹಾದೇವಪ್ಪ ಎ.ಕೆ. ಎಂಬಾತನ ಮನೆಯಲ್ಲಿ ಅಕ್ರಮವಾಗಿ ಪಟಾಕಿಯ ಆಟಂಬಾಂಬ್ ವೊಂದನ್ನ ತಯಾರಿಸುತ್ತಿದ್ದರು. ಇದು ಮಿಸ್‌ಫೈರ್ ಆದ ಪರಿಣಾಮ ಮನೆಯಲ್ಲಿದ್ದ ನಾಯಿಗೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಆನವಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪಟಾಕಿ ಮಿಸ್‌ಫೈರ್ ಆಗಿರುವ ಬಗ್ಗೆ, ಆಟಂಬಾಂಬ್ ನ್ನ ಯಾವ ಉದ್ದೇಶಕ್ಕಾಗಿ ಮನೆಯಲ್ಲಿ ಇರಿಸಲಾಗಿತ್ತು ಹಾಗೂ ಪಟಾಕಿ ತಯಾರಿಕೆಗೆ ಪರವಾನಗಿ ಇದೆಯೇ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಪಟಾಕಿ ಅಕ್ರಮವಾಗಿ ಇರಿಸಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮುಂದುವರಿದಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
