ವೇದಿಕೆ ಮೇಲೆ ವಂದೇ ಮಾತರಂ ವಿಚಾರ: ಶಾಸಕ ಚೆನ್ನಬಸಪ್ಪಗೆ ಡಿಕೆಶಿ ಕಿವಿಮಾತು-Vande Mataram issue on stage: DKshi listens to MLA Chennabasappa

 SUDDILIVE || SHIVAMOGGA

ವೇದಿಕೆ ಮೇಲೆ ವಂದೇ ಮಾತರಂ ವಿಚಾರ: ಶಾಸಕ ಚೆನ್ನಬಸಪ್ಪಗೆ ಡಿಕೆಶಿ ಕಿವಿಮಾತು-Vande Mataram issue on stage: DKshi listens to MLA Chennabasappa

Vande, matharam





ತೀರ್ಥಹಳ್ಳಿ: ವೇದಿಕೆ ಮೇಲೆ ವಂದೇ ಮಾತರಂ ವಿಚಾರವಾಗಿ ಶಾಸಕ ಎಸ್.ಎನ್. ಚೆನ್ನಬಸಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದ್ದಾರೆ.

ತೀರ್ಥಹಳ್ಳಿಯ ಅನಂತಮೂರ್ತಿ ಪಾಠಶಾಲೆ ಮೈದಾನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರಂಭದಲ್ಲಿಯೇ ಶಾಸಕ ಚೆನ್ನಬಸಪ್ಪ ಅವರಿಗೆ ಕಿವಿಮಾತು ಹೇಳಿದರು.

“ಹಾಡೋದು ಇತ್ತು. ಈಗ 40-50 ವರ್ಷದ ಹಿಂದಿನ ಹಾಡನ್ನ ಈಗೇನೋ ಹೊಸದಾಗಿ ಒಂದಷ್ಟು ನಾವಿಲ್ಲಿ ಏನೇನೋ ಹೇಳ್ತಾ ಇದ್ದೀವಿ. ಒಂದೇ ಮಾತಂ ಹಾಡಿನ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಈಗ ಅದನ್ನು ಹೊಸದಾಗಿ ಸೇರಿಸಬೇಕು ಅಂತ ಹೇಳಿ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ.

ಹಾಡಿನ ಬಗ್ಗೆ ನಮ್ಮದೇನೋ... ನಮ್ಮದೇ ಆದಂತಹ ಅಭಿಪ್ರಾಯ ಇದೆ, ಅವರದೇ ಆದಂತಹ ಅಭಿಪ್ರಾಯ ಇದೆ. ಒಂದು ಮಾತು ಹೇಳಲಿಕ್ಕೆ ಬಯಸ್ತಾ ಇದ್ದೀನಿ, ನಾನು ಬದುಕಿರೋ ಮಟ್ಟಿಗೆ ರಾಜಕಾರಣ ಮಾಡಲಿಕ್ಕೆ ಬಂದಿದ್ದೀನಿ ಹೊರತು, ಭಾವನೆಗಳ ಮೇಲೆ ರಾಜಕಾರಣ ಮಾಡಲಿಕ್ಕೆ ಬಂದಿಲ್ಲ.

ನೆನ್ನೆ ಕೂಡ ಹೇಳಿದ್ದೇನೆ. ಅದನ್ನು ಯಾಕೆ ನನಗೆ ಕೆಣಕ್ತಾ ಇದ್ದಾರೋ ನನ್ನ ಸ್ನೇಹಿತ ಚನ್ನಬಸಪ್ಪ ಅಂತ ನನಗೆ ಅರ್ಥ ಆಗ್ತಾ ಇಲ್ಲ,” ಎಂದು ಡಿ.ಕೆ. ಶಿವಕುಮಾರ್ ಅವರು ವೇದಿಕೆ ಮೇಲೆಯೇ ಶಾಸಕ ಚೆನ್ನಬಸಪ್ಪ ಅವರಿಗೆ ಕಿವಿಮಾತು ಹೇಳಿದರು.

ಮುಂದುವರಿದು ಶಿವಮೊಗ್ಗ ಶಾಸಕ ಚೆನ್ನಬಸಪ್ಪ ಅವರು ತಮ್ಮನ್ನು ಸ್ವಾಗತಿಸಿದ ವಿಚಾರವನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬಂದಾಗ ನಮ್ಮ ಶಿವಮೊಗ್ಗ ಎಂ.ಎಲ್.ಎ. ಅವರು ನಮಗೆ ಬಹಳ ಸ್ವಾಗತ ಕೊಟ್ಟರು. ಯಾವುದೋ ಒಂದು ಮೊದಲಿನಿಂದಲೂ ಒಂದು ನಮ್ಮದೊಂದು...” ಎಂದು ಹೇಳಿದರು.

“ಶಿವಮೊಗ್ಗಕ್ಕೆ ಬಂದಾಗ ತಾನೇ ಮಾತಾಡೋದು. ಶಿವಮೊಗ್ಗಕ್ಕೆ ಬಂದಾಗ ಅಲ್ಲಿ ಬೇಕಾದ್ರೆ ಮಾತಾಡೋಣ. ಇಲ್ಲಿ ಎಲ್ಲಾ ನಮಗೆ ಬೇಕಾದಷ್ಟು ವೇದಿಕೆಗಳಿದ್ದಾವೆ. ಈಗ ಪ್ರತಿಭಟನೆ ಮಾಡಿ ನಾನು ಹೊರಗಡೆ ಹೊರಟು ಹೋಗ್ತೀನಿ ಅಂತ ಅಂದರೆ ಹೋಗಬಹುದು, ನಾವು ಯಾರೂ ನಿಲ್ಲಿಸೋಕೆ ಆಗಲ್ಲ.

ಆದರೆ ಮಾತಾಡೋಕೆ ನಾನೇನು ಪ್ರತಿಭಟನೆ ಮಾಡಬೇಡಿ ಅಪ್ಪ, ನೀನು ಮಾತಾಡಬೇಡ ಅಂತ...

ಸಾಮಾನ್ಯವಾಗಿ ವಿರೋಧ, ಟೀಕೆ ಮಾಡೋರು ಇದ್ದರೆನೆ ನಮ್ಮಂತವರು ಗಟ್ಟಿಯಾಗಿ ರಾಜ್ಯ ಪರಿಪಾಲನೆ ಮಾಡಲಿಕ್ಕೆ ಸಾಧ್ಯ. ಅದಕ್ಕೆ ಇವತ್ತು ನಾನು ಅವರಿಗೆ ಮನವಿ ಮಾಡೋದು ಇಷ್ಟೇ, ಬಿಡಿ. ಅದು ನಿಮ್ಮ ಪಕ್ಷದ ಸಿದ್ಧಾಂತಕ್ಕೆ ನೀವಿದ್ದೀರಿ, ನಮ್ಮ ಪಕ್ಷದ ಸಿದ್ಧಾಂತಕ್ಕೆ ನಾವಿದ್ದೀವಿ.

ಬಟ್ ಇಲ್ಲಿರೋದು ಕಾಂಗ್ರೆಸ್ ಸರ್ಕಾರ ಅಲ್ವಾ? ಕಾಂಗ್ರೆಸ್ ಸರ್ಕಾರ ಏನು ತೀರ್ಮಾನ ಮಾಡಿ, ಕಾಂಗ್ರೆಸ್ ಸರ್ಕಾರ ನಿಮಗೂ ಇದೊಂದು ವೇದಿಕೆ ನಿರ್ಮಾಣ ಮಾಡಿ ಕೊಟ್ಟಿದೆಯಲ್ಲ. ನಿಮ್ಮ ಆಚಾರ, ವಿಚಾರಗಳನ್ನು ಹೇಳಲಿಕ್ಕೆ ಈ ಒಂದು ವೇದಿಕೆ ಅವಕಾಶ ಮಾಡಿ ಕೊಟ್ಟಿದೆಯಲ್ಲ. ಅದಕ್ಕೆ ನೀವು ಸಂತೋಷ ಪಡ್ತಾ ಇದ್ದೀರಿ.

ಸೋ, ಅದಕ್ಕೆ ಇಲ್ಲಿ ಕೊನೆ ಆಗಲಿ ಇದು ಅಂತ ಹೇಳಿ ನಮ್ರತೆಯಿಂದ ಅವರಿಗೆ ಮನವಿ ಮಾಡಿಕೊಳ್ತಾ ಇದ್ದೀನಿ, ಅಷ್ಟೇ. ಇನ್ನೇನು ಇಲ್ಲ. ನಾವೂ ಜಗಳ, ಗಲಾಟೆ ಎಲ್ಲಾ... ನಾನು ಮಾತಾಡಬೇಕಾಗಿದ್ದನ್ನ ನೀವೇ ಅವರಿಗೆ ಉತ್ತರ ಕೊಟ್ಟುಬಿಟ್ರಿ ಅವರಿಗೆ. ಅದಕ್ಕೆ ನಿಮ್ಮೆಲ್ಲರಿಗೂ ಕೂಡ ಧನ್ಯವಾದಗಳು,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಈ ಮೂಲಕ ವಂದೇ ಮಾತರಂ ಹಾಡಿನ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಡಿ.ಕೆ. ಶಿವಕುಮಾರ್, ಕಾರ್ಯಕ್ರಮದ ವೇದಿಕೆಯನ್ನು ಪ್ರತಿಭಟನೆ ಅಥವಾ ರಾಜಕೀಯ ಸಂಘರ್ಷಕ್ಕೆ ಬಳಸದೆ, ತಮ್ಮ-ತಮ್ಮ ಪಕ್ಷಗಳ ಸಿದ್ಧಾಂತಗಳಂತೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಪರೋಕ್ಷವಾಗಿ ಶಾಸಕ ಚೆನ್ನಬಸಪ್ಪ ಅವರಿಗೆ ಮನವಿ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close