ಕುಳ್ಳಿ ಕಿರಣ್ ಕೊಲೆ ಪ್ರಕರಣ: ಆರೋಪಿಯ ಕಾಲಿಗೆ ಪೊಲೀಸ್ ಗುಂಡೇಟು; ಪಿಸಿ ಮೇಲೆ ಲೀಡಿಂಗ್ ಚೈನ್ ನಿಂದ ಹಲ್ಲೆಗೆ ಯತ್ನ-'Kulli' Kiran murder case: Accused shot in the leg by police; attempt to attack a police constable with a leading chain

 SUDDILIVE || SHIVAMOGGA

ಕುಳ್ಳಿ ಕಿರಣ್ ಕೊಲೆ ಪ್ರಕರಣ: ಆರೋಪಿಯ ಕಾಲಿಗೆ ಪೊಲೀಸ್ ಗುಂಡೇಟು; ಪಿಸಿ ಮೇಲೆ ಲೀಡಿಂಗ್ ಚೈನ್ ನಿಂದ ಹಲ್ಲೆಗೆ ಯತ್ನ-'Kulli' Kiran murder case: Accused shot in the leg by police; attempt to attack a police constable with a leading chain 
Shot, leg


ಶಿವಮೊಗ್ಗ:
ನಿನ್ನೆ ರಾಮೇನಕೊಪ್ಪದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕುಳ್ಳಿ ಕಿರಣ್ ಎಂಬಾತನನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ದಾಳಿ ನಡೆಸಲು ಮುಂದಾದ ಘಟನೆ ನಡೆದಿದ್ದು, ಈ ವೇಳೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ರಾಮೇನಕೊಪ್ಪದಲ್ಲಿ ನಿನ್ನೆ ಕುಳ್ಳಿ ಕಿರಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಆರಂಭಿಕ ತನಿಖೆಯಲ್ಲಿ ಕಿರಣ್ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷದ ಶಂಕೆ ವ್ಯಕ್ತವಾಗಿತ್ತು.

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹೊಸಕೊಪ್ಪದ ನಿವಾಸಿ ಉಮೇಶ್ನನ್ನು ಬಂಧಿಸಲು ತುಂಗನಗರ ಪೊಲೀಸ್ ಠಾಣೆಯ ಪಿಐ ಕೆ.ಟಿ. ಗುರುರಾಜ್ ನೇತೃತ್ವದ ಪೊಲೀಸ್ ತಂಡ ಇಂದು ಬೆಳಿಗ್ಗೆ 6 ಗಂಟೆಗೆ ತೆರಳಿತ್ತು. ಆರೋಪಿಯನ್ನ‌ಬಂಧಿಸಿ ಕರೆತರುವಾಗ ಎನ್ ಆರ್ ಪುರ ರಸ್ತೆಯಲ್ಲಿರುವ ಲಿಂಗಾಪುರದಲ್ಲಿ ಆರೋಪಿ ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಆರೋಪಿ ಪೊಲೀಸರಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಆರೋಪಿ ಉಮೇಶ್, ತುಂಗನಗರ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ತಮ್ಮಣ್ಣ ಅವರ ಮೇಲೆ ಲೀಡಿಂಗ್ ಚೈನ್ ನಿಂದ ಹಲ್ಲೆ ನಡೆಸಿದ್ದಾನೆ. ಪರಿಸ್ಥಿತಿ ನಿಯಂತ್ರಿಸಲು ಪಿಐ ಕೆ.ಟಿ. ಗುರುರಾಜ್ ಅವರು  ಶರಣಾಗುವಂತೆ ಎಚ್ಚರಿಕೆ ನೀಡಿದರೂ ಆರೋಪಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.

ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದು, ಉಮೇಶ್‌ನ ಎಡಗಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಆರೋಪಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಯತ್ನದಲ್ಲಿ ಗಾಯಗೊಂಡ ಪೊಲೀಸ್ ಕಾನ್‌ಸ್ಟೆಬಲ್ ತಮ್ಮಣ್ಣ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಳ್ಳಿ ಕಿರಣ್ ಹತ್ಯೆಯಲ್ಲಿ ಭಾಗಿಯಾಗಿದ್ದ ಉಮೇಶ್ ಹೊಸಕೊಪ್ಪದ ಜೊತೆ ಈ ಮೂವರನ್ನೂ ಬಂಧಿಸಲಾಗಿದೆ

ಕುಚಿಕು ಗೆಳೆಯರ ನಡುವೆ ವೈಮನಸ್ಸು?

ಕುಳ್ಳಿ ಕಿರಣ್ ಮತ್ತು ಉಮೇಶ್ ಒಂದು ಕಾಲದಲ್ಲಿ ಕುಚಿಕು ಗೆಳೆಯರು ಎನ್ನಲಾಗುತ್ತಿದ್ದು, ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ವೈಮನಸ್ಸು ಮುಂದುವರಿದು ಕಿರಣ್ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ಪೊಲೀಸರ ತನಿಖೆಯಲ್ಲಿ ಮೂಡಿದೆ.

ಸದ್ಯ ಉಮೇಶ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಕುಳ್ಳಿ ಕಿರಣ್ ಹತ್ಯೆಗೆ ನಿಖರ ಕಾರಣವೇನು, ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತುಂಗನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

'Kulli' Kiran murder case: Accused shot in the leg by police; attempt to attack a police constable with a leading chain 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close