ಶಿವಮೊಗ್ಗದ ಶಾಂತವೀರ ನಾಯ್ಕ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ನೇಮಕ- Shantaveera Nayak from Shivamogga appointed as state president of KPCC labour wing

SUDDILIVE || BANGLORE

ಶಿವಮೊಗ್ಗದ ಶಾಂತವೀರ ನಾಯ್ಕ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ನೇಮಕ-  Shantaveera Nayak from Shivamogga appointed as state president of KPCC labour wing 

Labur, wing


ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ಶಿವಮೊಗ್ಗದ ಶಾಂತವೀರ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸೆಪ್ಟೆಂಬರ್ 11, 2026ರಂದು ನೇಮಕಾತಿ ಆದೇಶ ಹೊರಡಿಸಿದ್ದಾರೆ. ಆದೇಶದಂತೆ ಶಾಂತವೀರ ನಾಯ್ಕ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಕೆಪಿಸಿಸಿ ಮಾರ್ಗದರ್ಶನದಲ್ಲಿ ಹಾಗೂ ರಾಜ್ಯದ ನಾಯಕರ ಸಹಕಾರದೊಂದಿಗೆ ಕಾರ್ಮಿಕ ವಿಭಾಗದ ಸಂಘಟನೆಗೆ ಒತ್ತು ನೀಡುವುದರ ಜೊತೆಗೆ ಪಕ್ಷದ ಬಲವರ್ಧನೆಗೆ ಕಾರ್ಯೋನ್ಮುಖರಾಗುವಂತೆ ಅವರಿಗೆ ಸೂಚಿಸಲಾಗಿದೆ.

ಶಿವಮೊಗ್ಗದ ವಿದ್ಯಾನಗರದ ಪ್ರಿಯಾಂಕ ಲೇಔಟ್ ನಿವಾಸಿಯಾಗಿರುವ ಶಾಂತವೀರ ನಾಯ್ಕ ಅವರು ಇದೀಗ ರಾಜ್ಯಮಟ್ಟದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದೇ ವೇಳೆ ಈವರೆಗೆ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕೆ. ಪುಟ್ಟಸ್ವಾಮಿ ಗೌಡ ಅವರ ಸೇವೆಯನ್ನು ಪಕ್ಷ ಸ್ಮರಿಸಿದೆ. ಹೊಸದಾಗಿ ನೇಮಕಗೊಂಡಿರುವ ಶಾಂತವೀರ ನಾಯ್ಕ ಅವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಶುಭ ಹಾರೈಸಿದ್ದಾರೆ.

Shantaveera Nayak from Shivamogga appointed as state president of KPCC labour wing 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close