ಆಶ್ರಯವಿಲ್ಲದೆ ಬಸ್‌ನಿಲ್ದಾಣದಲ್ಲಿ ಇದ್ದ ಮಹಿಳೆಗೆ ಅಕ್ಕ ಪಡೆ ಆಸರೆ- 'Akka Pade' provides shelter to a woman stranded at the bus station

SUDDILIVE || SHIVAMOGGA

ಆಶ್ರಯವಿಲ್ಲದೆ ಬಸ್‌ನಿಲ್ದಾಣದಲ್ಲಿ ಇದ್ದ ಮಹಿಳೆಗೆ ಅಕ್ಕ ಪಡೆ ಆಸರೆ- 'Akka Pade' provides shelter to a woman stranded at the bus station   

Akka, pade

ಗಸ್ತಿನ ವೇಳೆ ಮಹಿಳೆಯನ್ನು ಗುರುತಿಸಿ ವಿಚಾರಣೆ; ಸುರಕ್ಷಿತವಾಗಿ ಒನ್‌ಸ್ಟಾಪ್ ಸೆಂಟರ್‌ಗೆ ದಾಖಲಿಸಿದ ಸಿಬ್ಬಂದಿ


ಶಿವಮೊಗ್ಗ: ಆಶ್ರಯವಿಲ್ಲದೆ ಕಳೆದ ಎರಡು-ಮೂರು ದಿನಗಳಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ವಾಸವಾಗಿದ್ದ ಮಹಿಳೆಯೊಬ್ಬರನ್ನು ಅಕ್ಕ ಪಡೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ, ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಒನ್‌ಸ್ಟಾಪ್ ಸೆಂಟರ್‌ಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಕ್ಕ ಪಡೆಯ ಅಧಿಕಾರಿಗಳು ಶಿವಮೊಗ್ಗ ನಗರದ ವಿವಿಧೆಡೆ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಒಬ್ಬರೇ ಇರುವುದನ್ನು ಗಮನಿಸಿದ್ದಾರೆ. ಅನುಮಾನಗೊಂಡ ಸಿಬ್ಬಂದಿ ಮಹಿಳೆಯ ಬಳಿ ತೆರಳಿ ಆಕೆಯ ಬಗ್ಗೆ ವಿಚಾರಿಸಿದ್ದಾರೆ.

ಈ ವೇಳೆ ಮಹಿಳೆ ತನ್ನ ಊರು ತುಮಕೂರು ಎಂದು ತಿಳಿಸಿದ್ದು, ತಾನು ಅನಾಥೆಯಾಗಿದ್ದು, ತನ್ನನ್ನು ನೋಡಿಕೊಳ್ಳಲು ಅಥವಾ ಆಶ್ರಯ ನೀಡಲು ಯಾರೂ ಇಲ್ಲ ಎಂದು ತಿಳಿಸಿದ್ದಾಳೆ. ಯಾವುದೇ ಸುರಕ್ಷಿತ ಸ್ಥಳವಿಲ್ಲದ ಹಿನ್ನೆಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಬಸ್ ನಿಲ್ದಾಣದಲ್ಲೇ ಉಳಿದುಕೊಂಡಿರುವುದಾಗಿ ಅಕ್ಕ ಪಡೆ ಸಿಬ್ಬಂದಿಗೆ ತಿಳಿಸಿದ್ದಾರೆ.

ಮಹಿಳೆಯ ಪರಿಸ್ಥಿತಿಯನ್ನು ಅರಿತ ಅಕ್ಕ ಪಡೆ ಸಿಬ್ಬಂದಿ, ಆಕೆಯ ಸುರಕ್ಷತೆ ಹಾಗೂ ಮುಂದಿನ ಆರೈಕೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮಹಿಳೆಯನ್ನು ಸುರಕ್ಷಿತವಾಗಿ ಒನ್‌ಸ್ಟಾಪ್ ಸೆಂಟರ್‌ಗೆ ಕರೆದೊಯ್ದು ದಾಖಲಿಸುವ ಮೂಲಕ ಆಕೆಗೆ ತಾತ್ಕಾಲಿಕ ಆಶ್ರಯ ಮತ್ತು ಅಗತ್ಯ ನೆರವು ದೊರೆಯುವಂತೆ ಮಾಡಿದ್ದಾರೆ.

ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯವಿಲ್ಲದೆ, ಸಂಕಷ್ಟದಲ್ಲಿರುವ ಮಹಿಳೆಯರು ಕಂಡುಬಂದಲ್ಲಿ ಅವರ ಪರಿಸ್ಥಿತಿಯನ್ನು ಅರಿತು ಸೂಕ್ತ ನೆರವು ನೀಡುವಲ್ಲಿ ಅಕ್ಕ ಪಡೆ ಕೈಗೊಳ್ಳುತ್ತಿರುವ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಿಳೆಯನ್ನು ಸುರಕ್ಷಿತವಾಗಿ ಆಶ್ರಯ ಕೇಂದ್ರಕ್ಕೆ ಸೇರಿಸುವ ಮೂಲಕ ಅಕ್ಕ ಪಡೆ ಸಿಬ್ಬಂದಿ ಮತ್ತೊಮ್ಮೆ ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದ್ದಾರೆ.

'Akka Pade' provides shelter to a woman stranded at the bus station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close