ಜಮೀರ್ ಅಹ್ಮದ್ ಸತ್ತಿದ್ದಾರೋ, ಬದುಕಿದ್ದಾರೋ ಗೊತ್ತಿಲ್ಲ: ಈಶ್ವರಪ್ಪ ಕಿಡಿ-I don't know if Zameer Ahmed is dead or alive: Eshwarappa Kidi

SUDDILIVE || SHIVANOGGA

ಜಮೀರ್ ಅಹ್ಮದ್ ಸತ್ತಿದ್ದಾರೋ, ಬದುಕಿದ್ದಾರೋ ಗೊತ್ತಿಲ್ಲ: ಈಶ್ವರಪ್ಪ ಕಿಡಿ-I don't know if Zameer Ahmed is dead or alive: Eshwarappa Kidi    

Eshwarappa, kidi

ಶಿವಮೊಗ್ಗ: ಬಡವರಿಗೆ ಮನೆ ಹಂಚಿಕೆ ಹಾಗೂ ಹೆಚ್ಚುವರಿ ವೆಚ್ಚದ ಹೊರೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದ ಭರವಸೆ ಈಡೇರಿಲ್ಲ ಎಂದು ಆರೋಪಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, “ಜಮೀರ್ ಅಹ್ಮದ್ ಸತ್ತಿದ್ದಾರೋ, ಬದುಕಿದ್ದಾರೋ ಗೊತ್ತಿಲ್ಲ. ಬಡವರ ಲೆಕ್ಕದಲ್ಲಿ ಅವರು ಬದುಕಿಲ್ಲ” ಎಂದು ಕಟುವಾಗಿ ಟೀಕಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 400 ಮನೆಗಳನ್ನು ಹಸ್ತಾಂತರಿಸಿದ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ಹೆಚ್ಚುವರಿ ವೆಚ್ಚದ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೆ ಆ ಭರವಸೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡವರು ಸರ್ಕಾರವನ್ನು ನಂಬಿ ಮನೆಗಳಿಗಾಗಿ ಹಣ ಪಾವತಿಸಿದ್ದಾರೆ. ಆದರೆ ಹೆಚ್ಚುವರಿ ವೆಚ್ಚದ ಸಮಸ್ಯೆ ಬಗೆಹರಿಯದೆ ಫಲಾನುಭವಿಗಳು ಕಾಯುವಂತಾಗಿದೆ. ಸಚಿವರು ಹಲವು ಬಾರಿ ಬಂದು ಭರವಸೆ ನೀಡಿ ಹೋಗಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದು ಹೇಳಿದರು.

ಸಚಿವರಾದ ಬಿ. ಸೋಮಣ್ಣ, ಮಧು ಬಂಗಾರಪ್ಪ ಅಥವಾ ಜಮೀರ್ ಅಹ್ಮದ್ ಖಾನ್ ಅವರ ಪರವಾಗಿ ತಾವು ಮಾತನಾಡುತ್ತಿಲ್ಲ ಎಂದ ಈಶ್ವರಪ್ಪ, ಮನೆಗಳ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಮತ್ತು ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹಿಂದಿನವರು ಮಾಡಿದ ತಪ್ಪುಗಳನ್ನು ಮುಂದಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಬಡವರು ಸರ್ಕಾರವನ್ನು ನಂಬಿ ಹಣ ಕಟ್ಟಿರುವುದರಿಂದ ಅವರಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಒತ್ತಾಯಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದ ಹಣಕಾಸಿನ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಗಳ ಅನುದಾನ ಬಳಕೆಯ ಕುರಿತು ಪ್ರಶ್ನೆಗಳನ್ನು ಎತ್ತಿದರು.

I don't know if Zameer Ahmed is dead or alive: Eshwarappa Kidi  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close