ಸಾಗರದಲ್ಲಿ ಹೃದಯವಿದ್ರಾವಕ ಘಟನೆ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾ*ವು-Heartbreaking incident in the ocean: Two-year-old boy di*es after being bitten by a snake

SUDDILIVE || SAGARA

ಸಾಗರದಲ್ಲಿ ಹೃದಯವಿದ್ರಾವಕ ಘಟನೆ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾ*ವು-Heartbreaking incident in the ocean: Two-year-old boy di*es after being bitten by a snake    

Snake, bite


ಸಾಗರ ತಾಲ್ಲೂಕಿನ ಕಲಸಿ ಪೇಟೆಯಲ್ಲಿ ಹಾವು ಕಚ್ಚಿ ಎರಡು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಅನಿಲ್ ಮತ್ತು ರೂಪ ದಂಪತಿಯ ಮುದ್ದಿನ ಮಗ ಯುನೈ (2) ಮೃತಪಟ್ಟ ಬಾಲಕ.

ಮಗು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಹಾವು ಕಚ್ಚಿದೆ ಎನ್ನಲಾಗಿದೆ. ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಪುಟ್ಟ ಮಗುವಿನ ಅಕಾಲಿಕ ಸಾವು ಪೋಷಕರು ಹಾಗೂ ಕುಟುಂಬದವರಲ್ಲಿ ತೀವ್ರ ದುಃಖ ಮೂಡಿಸಿದೆ.

ಈ ಘಟನೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ


ಮನೆಯ ಸುತ್ತಮುತ್ತ ಪೊದೆಗಳು ಬೆಳೆದಿದ್ದರೆ, ಕಸಕಡ್ಡಿಗಳು ಹಾಗೂ ಅನಗತ್ಯ ವಸ್ತುಗಳು ಸಂಗ್ರಹವಾಗಿದ್ದರೆ ಹಾವುಗಳು ಅಡಗಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಮಕ್ಕಳು ಆಟವಾಡುವ ಸ್ಥಳದ ಬಗ್ಗೆ ಪೋಷಕರು ವಿಶೇಷ ಎಚ್ಚರಿಕೆ ವಹಿಸಬೇಕು.

ಪೋಷಕರೇ ಎಚ್ಚರ: ಚಿಕ್ಕ ಮಕ್ಕಳು ಆಟವಾಡುವಾಗ ಅವರ ಮೇಲೆ ನಿಗಾ ಇರಲಿ. ಹಾವು ಅಥವಾ ಇತರ ಅಪಾಯಕಾರಿ ಜೀವಿಗಳು ಕಾಣಿಸಿಕೊಂಡರೆ ಅವುಗಳ ಸಮೀಪ ಹೋಗದಂತೆ ಮಕ್ಕಳಿಗೆ ತಿಳಿಸಬೇಕು.

Heartbreaking incident in the ocean: Two-year-old boy dies after being bitten by a snake 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close