ಜಂಬೂಸವಾರಿಯಲ್ಲಿ ಶಿವಮೊಗ್ಗದ ಮಹಿಳಾ ಡೊಳ್ಳು ಕಲಾವಿದರ ಕಲಾಪ್ರದರ್ಶನಕ್ಕೆ ಮೆಚ್ಚುಗೆ- Appreciation for the artistic performance of female doll artists from Shivamogga at Jambu Savari

SUDDILIVE || SHIVAMOGGA

ಜಂಬೂಸವಾರಿಯಲ್ಲಿ ಶಿವಮೊಗ್ಗದ ಮಹಿಳಾ ಡೊಳ್ಳು ಕಲಾವಿದರ ಕಲಾಪ್ರದರ್ಶನಕ್ಕೆ ಮೆಚ್ಚುಗೆ- Appreciation for the artistic performance of female doll artists from Shivamogga at Jambu Savari    

Artist, mysore

Shivamogga, artist


ಶಿವಮೊಗ್ಗ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಶಿವಮೊಗ್ಗದ ಮಹಿಳಾ ಡೊಳ್ಳು ಕಲಾವಿದರು ಅತ್ಯುತ್ತಮ ಕಲಾಪ್ರದರ್ಶನ ನೀಡಿ ನಾಡಿನ ಗಮನ ಸೆಳೆದಿದ್ದಾರೆ. ಮಹಿಳಾ ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತಂಡಕ್ಕೆ ಅಭಿನಂದನೆ ಸಲ್ಲಿಸಲಾಗಿದೆ.

ಮೈಸೂರು ಅರಮನೆಯ ಆವರಣದಲ್ಲಿ ನಡೆದ ಐತಿಹಾಸಿಕ ಜಂಬೂಸವಾರಿಯಲ್ಲಿ ಮುಖ್ಯಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಅರಮನೆ ವಂಶಸ್ಥರು, ಸಚಿವರು ಹಾಗೂ ಹಿರಿಯ ಗಣ್ಯರ ಸಮ್ಮುಖದಲ್ಲಿ ಶಿವಮೊಗ್ಗದ ಮಹಿಳಾ ಕಲಾವಿದರು ಡೊಳ್ಳು ಕುಣಿತವನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಸಾಂಪ್ರದಾಯಿಕ ಕಲಾಪ್ರಕಾರವನ್ನು ಲಯಬದ್ಧವಾಗಿ ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ತಂಡದ ಮುಖ್ಯಸ್ಥರಾದ ಪಣಿಯಮ್ಮ, ಶಾಂತಾ ಹಾಗೂ ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ಮಹಿಳಾ ಕಲಾವಿದರು ಪ್ರದರ್ಶನ ನೀಡಿದರು. ನಾಡಿನ ಪ್ರಮುಖ ಸಾಂಸ್ಕೃತಿಕ ಉತ್ಸವದಲ್ಲಿ ಶಿವಮೊಗ್ಗದ ಕಲಾವಿದರು ಭಾಗವಹಿಸಿ ಜಿಲ್ಲೆಯ ಕಲಾ ಪರಂಪರೆಯನ್ನು ಪ್ರತಿನಿಧಿಸಿರುವುದು ವಿಶೇಷವಾಗಿದೆ.

Appreciation for the artistic performance of female doll artists from Shivamogga at Jambu Savari 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close