ಸುದ್ದಿಲೈವ್/ಶಿವಮೊಗ್ಗ
ಮಹಾನಗರ ಪಾಲಿಕೆಯ ಸ್ವೀಪ್ ತಂಡದ ವತಿಯಿಂದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಯುವ ಮತದಾರರಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಅದರಲ್ಲಿ “ನೇಸರ ಕಲಾ ತಂಡ”ದವರಿಂದ ಮತದಾನದ ಜಾಗೃತಿಗಾಗಿ “ಬೀದಿ ನಾಟಕ,ಹಾಗೂ ವಿಕಲ ಚೇತನರಿಂದ ಮತದಾನ ಗೀತೆ”ಯನ್ನು ಹಾಡಿಸಲಾಯಿತು.ಸ್ಟೈಲ್ ಗ್ರೂಪ್” ತಂಡದವರಿಂದ ಮತದಾನ ಜಾಗೃತಿ ಗೀತೆಗಳಿಗೆ ನೃತ್ಯ ಮಾಡಿಸಲಾಯಿತು.
ಯುವ ಮತದಾರರಿಗೆ ಮತದಾನದ ಕುರಿತು ಪಿಕ್ ಅಂಡ್ ಸ್ಪೀಚ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಹಾಗೂ ಆಟವನ್ನು ಆಡಿಸಿ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ-https://suddilive.in/archives/13864
Tags:
ಸ್ಥಳೀಯ ಸುದ್ದಿಗಳು