Girl in a jacket

ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ಪತ್ತೆ, ಆತ್ಮಹತ್ಯೆಯಲ್ಲ ಕೊಲೆ ಎಂದ ಮೃತನ ಕುಟುಂಬ

ಸುದ್ದಿಲೈವ್/ಶಿವಮೊಗ್ಗ

ರಾತ್ರಿ ಬಂದು ಕಟ್ಟಡ ನಿರ್ಮಾಣದ ಕೆಲಸವಿದೆ ಎಂದು ಕರೆದುಕೊಂಡು ಹೋದ ಪರಿಚಯಸ್ಥ ವಾಪಾಸ್ ಯುವಕನನ್ನ ಮನೆಗೆ ಬಿಟ್ಟು ಹೋಗಿದ್ದಾನೆ.

ಮಧ್ಯರಾತ್ರಿ ಬಂದಿದ್ದ ಯುವಕ ಮನೆಯವರಿಗೆ ಬೆಳಿಗ್ಗೆ ನೇಣು ಬಿಗಿದುಕೊಂಡು ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಪ್ರಕರಣದ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳಲಾಗುತ್ತಿದೆ.

ಲಕ್ಕವಳ್ಳಿಯ ಇಂದಿರಾ ನಗರದ ನಿವಾಸಿ ಶ್ರೀರಾಮುಲು ಎಂಬ 30 ವರ್ಷದ ಯುವಕನನ್ನ ಪರಿಚಯಸ್ಥನೊಬ್ಬನು ಮನೆಯ ಬಳಿ ಬಂದು, ಕರೆದುಕೊಂಡು ಹೋಗಿ ಮಧ್ಯರಾತ್ರಿ 1 ಗಂಟೆಗೆ ಕರೆದುಕೊಂಡು ಮನೆಗೆ ಬಿಟ್ಟು ಹೋಗಿದ್ದಾನೆ.

ಈ ವೇಳೆ ರಾಮುಲು ಕುಟುಂಬ ಪರಿಚಯಸ್ಥನಿಗೆ ಇಷ್ಟು ಹೊತ್ತಿಗೆ ಎಲ್ಲಿಗೆ ಕರೆಸುಕೊಂಡುಹೋಗಿದ್ದೆ ಇಷ್ಟುಹೊತ್ತಿಗೆ ವಾಪಾಸ್ ಕರೆದುಕೊಂಡು ಬಂದಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಪರಿಚಯಸ್ಥ ಬಾತ್ ರೂಂ ನಿರ್ಮಾಣವಿತ್ತು ಕರೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾನೆ.

ಮರುದಿನ ಬೆಳಿಗ್ಗೆ ಶೀಟಿನ‌ಮನೆಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಯುವಕ ಪತ್ತೆಯಾಗಿದ್ದಾನೆ. ಬೆಳಗ್ಗಿನ ಜಾವ ಯುವಕ ನೇಣಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮೃತನ ಕುಟುಂಬ ರಾಮುಲು ಸಾವಿಗೆ ಪರಿಚಯಸ್ಥ ಕಾರಣ ಎಂದು ಆರೋಪಿಸಿದೆ.

ಪರಿಚಯಸ್ಥ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಶವ ಪರೀಕ್ಷೆಗೆ  ಮೃತ ದೇಹವನ್ನ ಶಿವಮೊಗ್ಗ ಮೆಗ್ಗಾನ್ ಗೆ ರವಾನಿಸಲಾಗಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/13732

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು