Girl in a jacket

ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಮೊಬೈಲ್ ಅಂಗಡಿ ಬೆಂಕಿಗೆ ಆಹುತಿ!

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಅಂಗಡಿಯೊಂದು ಧಗ ಧಗ ಹೊತ್ತಿ ಉರಿದಿದೆ.  ಸುಮಾರು 4 ಲಕ್ಷ ರೂ ಮೌಲ್ಯದ ಕಂಪ್ಯೂಟರ್ ಮತ್ತು ರಿಪೇರಿಗೆ ಬಂದ ಮೊಬೈಲ್ ಹಾಗೂ ಮಾರಾಟದ ಹೊಸ ಮೊಬೈಲ್ ಬೆಂಕಿಗೆ ಆಹುತಿಯಾಗಿದೆ.

ಖಾಸಗಿ ಬಸ್ ನಿಲ್ದಾಣದಲ್ಲಿ ವಾಸಿಂ ಎಂಬುವರಿಗೆ ಸೇರಿದ ಮೊಬೈಲ್ ಅಂಗಡಿಗೆ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ದಾವಿಸಿ ಬೆಂಕಿ ಆರಿಸುವಲ್ಲಿ ನಿರತವಾಗಿದ್ದಾರೆ.

ಸುಮಾರು 10 ರಿಂದ 11 ಗಂಟೆಯ ಸಮಯದಲ್ಲಿ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಬಸ್ ನಿಲ್ದಾಣದ ಜನರಿಗೆ ಈ ದೃಶ್ಯಗಳನ್ನ ಒಮ್ಮಲೆ ಕಂಡು ಭಯಗೊಂಡಿದ್ದಾರೆ. ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ-https://suddilive.in/archives/13857

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು