Girl in a jacket

ಶೋಯೇಬ್ ಯಾನೆ ಅಂಡನ ಕಾಲಿಗೆ ಗುಂಡೇಟು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗ್ಯಾಂಗ್ ವಾರ್ ನಲ್ಲಿ ಮೂರು ಹತ್ಯೆಯಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ರೌಡಿಯನ್ನ ಹಿಡಿಯಲು ಮುಂದಾದ ಶಿವಮೊಗ್ಗದ ಪೊಲೀಸರ ಮೇಲೆ ದಾಳಿ ನಡೆದಿದೆ. ಪೊಲೀಸರು ಸಹ ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಶೋಯೇಬ್ ಯಾನೆ ಅಂಡನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಶೋಯೇಬ್ ಯಾನೆ ಸೇಬು, ಗೌಸ್ ಮತ್ತು ಯಾಸೀನ್ ಹತ್ಯೆಯಾಗಿತ್ತು. ಈ ಪ್ರಕರಣಕದಲ್ಲಿ ಹತ್ಯೆಗೆ ಯತ್ನ ಮತ್ತು ಕೊಲೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣದಿಂದ 19 ಜನ‌ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು.

ಈ ವೇಳೆ ಶೋಯೆಬ್ ಯಾನೆ ಅಂಡ ಎಂಬಾತ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ತಲೆಮರೆಸಿಕೊಂಡಿದ್ದನು. ತಲೆ ಮರೆಸಿಕೊಂಡ ಶೋಯೇಬ್ ಯಾನೆ ಅಂಡನನ್ನ ಇಂದು ಬೆಳಿಗ್ಗೆ ಹಿಡಿಯಲು ತೆರಳಿದ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಪಿಎಸ್ಐ ಕುಮಾರ್ ಮತ್ತು ಅಣ್ಣಪ್ಪ ಎಂಬುವರು ಅಂಡನನ್ನ ಗ್ರಾಮಾಂತರ ಭಾಗವಾದ ಬೀರನಕೆರೆಯಲ್ಲಿ ಪತ್ತೆಹಚ್ಚಿ ಹಿಡಿದು ತೆರಳಿದ್ದಾರೆ. ಪೊಲೀಸ್ ಕಾನ್ ಸ್ಟೇಬಲ್ ಅಣ್ಣಪ್ಪನವರು ಹಿಡಿಯಲು ಮುಂದಾದಾಗ ಅಂಡ ದಾಳಿ ನಡೆಸಿದ್ದಾನೆ. ಪಿಎಸ್ ಐ ಕುಮಾರ್ ಅವರ ಖಡಕ್ ವಾರ್ನಿಂಗ್ ನಡುವೆಯೂ ಅಂಡ ಪೊಲೀಸರ ಮೇಲೆ ಅಟ್ಯಾಕ್ ಗೂ ಮುಂದಾದ ಪರಿಣಾಮ ಪೊಲೀಸರು ಗುಂಡು ಹಾರಿಸಿದ್ದಾರೆ.

ಶಿವಮೊಗ್ಗದಲ್ಲಿ ಪುಡಿರೌಡಿಗಳಿಗೆ ಇಂತಹದ್ದೊಂದು ಸಂದೇಶ ಬೇಕಿತ್ತು. ಶೋಯೇಬ್ ಯಾನೆ ಅಂಡ ಏನು ಘನಾಂಧಾರಿ ಕೆಲಸ ಮಾಡಿಕೊಂಡು ಓಡಾಡುತ್ತಿರಲಿಲ್ಲ. ಈತ ಆದಿಲ್ ನ ಸಹಚರನಾಗಿದ್ದನು. ಐದು ಕೊಲೆ ಪ್ರಕರಣದಲ್ಲಿ ಮತ್ತುಎರಡು ಕೊಲೆ ಯತ್ನದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಇದನ್ನೂ ಓದಿ-https://suddilive.in/archives/14664

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು