Girl in a jacket

ಗೀತ ಶಿವರಾಜ್ ಕುಮಾರ್ ಗೆಲುವಿಗೆ ಟ್ರ್ಯಾಕ್ಟರ್ ಚಾಲೆಂಜ್

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಯ ಮತದಾನ ಮುಗಿದಿದ್ದರೂ ಫಲಿತಾಂಶ ಹೊರಬೀಳಲು 22 ದಿನ ಬಾಕಿ ಉಳಿದಿದೆ. ಈ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಬಿಜೆಪಿ ಕಾಂಗ್ರೆಸ್ ಈಶ್ವರಪ್ಪ ಸೇರಿದಂತೆ 23 ಜನ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ಒಳಗೊಳಗೆ ನಡೆದಿದೆ.

ಶಿಕಾರಿಪುರದಲ್ಲಿ ರೈತನೋರ್ವ ಗೀತ ಶಿವರಾಜ್ ಕುಮಾರ್ ಗೆಲ್ಲುವುದಾಗಿ ಟ್ರ್ಯಾಕ್ಟರ್ ಚಾಲೆಂಜ್ ಮಾಡಿದ್ದಾರೆ. ಬಿಜೆಪಿಯವರು ಗೆಲ್ಲುವುದಾದರೆ ಸವಾಲು ಸ್ವೀಕರಿಸಿ ಬನ್ನಿ ನಾನು ಟ್ರ್ಯಾಕ್ಟರ್ ಚಾಲೆಂಜ್ ಹಾಕಿದ್ದಾನೆ. ನೀವು ಟ್ರ್ಯಾಕ್ಟರ್ ಚಾಲೆಂಜ್ ಸ್ವೀಕರಿಸಿ ಎಂದು ಸವಾಲು ಎಸೆದಿದ್ದಾನೆ.

ಈ ಸವಾಲು ಚುನಾವಣೆಯ ನೀತಿ ಸಂಹಿತೆ ಒಳಗೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇಂತಹ ಚಾಲೆಂಜ್ ಗಳು ನಡೆದಿರುವ ಉದಾಹರಣೆಗಳು ಈ ಹಿಂದೆ ನಡೆದಿದೆ. ಆದರೆ ರೈತನ ಸವಾಲು ಕಾಂಗ್ರೆಸ್ ನಲ್ಲಿ ಹುಮ್ಮಸ್ಸು ತಂದುಕೊಟ್ಟಿದೆ.

ಇದನ್ನೂ ಓದಿ-https://suddilive.in/archives/14653

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು