ಸುದ್ದಿಲೈವ್/ಶಿವಮೊಗ್ಗ
ಪ್ಯಾಸೆಂಜರ್ ಆಟೋರಿಕ್ಷಾ ಕ್ಯಾಂಟರ್ ವೊಂದು ಹಿಟ್ ಅಂಡ್ ರನ್ ಮಾಡಿದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಅಪಘಾತ ನಡೆದಿರುವ ಬಗ್ಗೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ತಾವರೆ ಚಟ್ನಳ್ಳಿಯಲ್ಲಿರುವ ಪೇಸ್ ಕಾಲೇಜಿನ ವಿದ್ಯಾರ್ಥಿನಿ ಗಾನವಿ(17)ಯನ್ಮ ತಾಯಿ ಮತ್ತು ಅಜ್ಜಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ ಬಂದು ಮಾತನಾಡಿಸಿಕೊಂಡು ಹೊರಗಡೆ ಊಟಕ್ಕೆ ತೆರಳಿದ್ದರು. ವಾಪಾಸ್ ಕಾಲೇಜಿನ ಬಳಿ ಪ್ಯಾಸೆಂಜರ್ ಆಟೊದಲ್ಲಿ ಬರುವಾಗ ತಿರುವಿನಬಳಿ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಗಾನವಿಗೆ ತಲೆಗೆ ಹೊಡೆತ ಬಿದ್ದು, ಸ್ಥಳದಲ್ಲಿ ಪ್ರಜ್ಞೆ ತಪ್ಪಿದ್ದಾಳೆ. ಈಕೆಯ ತಾಯಿ, ಅಜ್ಜಿ ಹಾಗೂ ಆಟೋ ಚಾಲಕನಿಗೆ ಗಾಯವಾಗಿದೆ. ತಕ್ಷಣವೇಗಾನವಿಯನ್ನ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಆಕೆಯ ಸಾವನ್ನ ಧೃಡಪಡಿಸಿದ್ದಾರೆ
ಗಾನವಿಗೆ ನಿನ್ನೆ ರಜೆ ಇದ್ದ ಕಾರಣ ಇವರ ತಾಯಿ ಹಾಗೂ ಅಜ್ಜಿ ಈಕೆಯನ್ನು ಸಂಬಂಧಿಕರ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಕಾಲೇಜಿನ ಹಾಸ್ಟೆಲ್ ಗೆ ಆಟೋದಲ್ಲಿ ವಾಪಸ್ ಆಗುವಾಗ ವಿಧಿಯ ಆಟಕ್ಕೆ ಗಾನವಿ ಬಲಿಯಾಗಿದ್ದಾಳೆ. ದ್ವಿಪಥ ರಸ್ತೆಯಿಂದ ಬಲಕ್ಕೆ ತಿರುಗಿದರೆ ಗಾನವಿಯ ಕಾಲೇಜು ಮತ್ತು ಹಾಸ್ಟೆಲ್ ಇತ್ತು. ಹಾಸ್ಟೆಲ್ ಸೇರಬೇಕಿದ್ದ ಗಾನವಿ ಸಾವನ್ನಪ್ಪಿದ್ದಾಳೆ.
ಈಕೆಯ ತಾಯಿ ಹಾಗೂ ಅಜ್ಜಿ ಮತ್ತು ಚಾಲಕನನ್ನ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಟ್ ಅಂಡ್ ರನ್ ಮಾಡಿದ ಕ್ಯಾಂಟರ್ನ್ನು ಚೀಲೂರಿನಲ್ಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಅಪಘಾತ ಮಾಡಿ ನಿಲ್ಲಿಸದೆ ಪರಾರಿಯಾಗಿದ್ದ ಕ್ಯಾಂಟರ್ ಅನ್ನು ಸ್ಥಳೀಯರು ಹಿಂಬಾಲಿಸಿಕೊಂಡು ಹೋಗಿ ಹಿಡಿಯಲು ಹೋದಾಗ ಅವರ ಕಾರಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ಈ ಕುರಿತು ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ಯಾಂಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/14693