Girl in a jacket

ಅಸಮಾಧಾನ ಸಹಜ, ಆದರೆ ಪಕ್ಷದಿಂದ ಟಿಕೇಟ್‌ ಸಿಗೋದು ಒಬ್ಬರಿಗೆನೆ-ಡಿ.ಎಸ್.ಅರುಣ್

ಸುದ್ದಿಲೈವ್/ಶಿವಮೊಗ್ಗ

ಜೂ. 3 ರಂದು ಪರಿಷತ್ ಚುನಾವಣೆ ನಡೆಯಲಿದೆ. 75 ಜನರ ವಿಧಾನ‌ಪರಿಷತ್ ನ ತಂಡ ಆಯ್ಕೆಯಾಗಲಿದ್ದಾರೆ ಎಂದು ಎಂಎಲ್ ಸಿ ಡಿ.ಎಸ್.ಅರುಣ್ ಸುದ್ದಿಗೀಷ್ಠಿಯಲ್ಲಿ ತಿಳಿಸಿದರು.

1988 ರಲ್ಲಿ ನೈರುತ್ಯ ಪದವೀಧರ ಕ್ಷೇತ್ರ ರಚನೆಯಾಯಿತು. ಈ ಕ್ಷೇತ್ರ 30 ವಿಧಾನ ಸಭಾ ಕ್ಷೇತ್ರವನ್ನ ಒಳಗೊಂಡಿದೆ. 1980ರಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. 1988 ರಲ್ಲಿ ಬಿಎಸ್ ವೈ ಮಾತ್ರ ಆಯ್ಕೆಯಾಗಿದ್ದರು. ಆ ವೇಳೆ ನ ಡೆದ ಎಂಎಲ್ ಸಿ ಚುನಾವಣೆಯಲ್ಲಿ ಡಿಎಸ್ ಶಂಕರ ಮೂರ್ತಿ, ಎಂ.,ಆರ್ ತಂಗಾ‌, ರಾಮಚಂದ್ರೇ ಗೌಡ ಮೂವರು ಗೆದ್ದಿದ್ದರು.

2024 ರಲ್ಲಿ 6 ಚುನಾವಣೆ ನಡೆಯಲಿದೆ. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿಯಿಂದ ಮೈತ್ರಿ ಮಾಡಿಕೊಳ್ಳಲಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡರ ಕ್ಷೇತ್ರವನ್ನ ಜೆಡಿಎಸ್ ಜೊತೆ ಹೊಂದಾಣಿಕೆಯಾಗಬೇಕಿದೆ ಎಂದು ತಿಳಿಸಿದರು.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ್ ಸರ್ಜಿ ಗುರುವಾರ ಮೇ.16 ರಂದು ಮೈಸೂರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. 81,750 ಜನರ ಪದವೀಧರ ಕ್ಷೇತ್ರಕ್ಕೆ ನೋಂದಣಿ ಮಾಡಲಾಗಿದೆ. 6 ಜಿಲ್ಲೆಯಲ್ಲಿಯೂ ಬಿಜೆಪಿ ಗೆದ್ದಿರುವುದರಿಂದ ಮೈತ್ರಿಗಳಿಗೆ ಗೆಲುವು ಖಚಿತವಾಗಲಿದೆ ಎಂದರು.

ಸಂಘಟನೆಯ ತೀರ್ಮಾನ. ಪಕ್ಷದ ಕಾರ್ಯಕರ್ತರಿಂದ ಗೆಲ್ಲುತ್ತಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಕಳೆದ ಬಾರಿ 72 ಸಾವಿರ ಮತದಾರರು ನೋಂದಣಿಯಾಗುತ್ತದೆ. ಈಗ 10 ಸಾವಿರ ಮತಗಳ ನೋಂದಣಿಯಾಗಿದೆ. ಇದು ಕಾರ್ಯಕರ್ತನ ಶ್ರಮದಿಂದಲೇ ಆಗಿದೆ.

ಅಸಮಾಧಾನ ಇವತ್ತಿನಿಂದ ಮಾತ್ರವಲ್ಲ. ಅಸಮಾಧಾನ ಸಹಜವಾಗಿ ಪಕ್ಷದಲ್ಲಿರುತ್ತದೆ. ಯಾವಗಲೂ ಟಿಕೇಟ್ ಸಿಗೋದು ಒಬ್ಬರಿಗೆ ಎಂದ ಅವರು,  ಕೊಡಗು 3829, ಚಿಕ್ಕಮಗಳೂರು 10,821, ಉಡುಪಿ 16603, ಶಿವಮೊಗ್ಗ 25129 ಕಳೆದ ಬಾರಿ 32 ಸಾವಿರ ಇತ್ತು. ದಾವಣಗೆರೆಯ ಎರಡು ತಾಲೂಕಿನಲ್ಲಿ 6510 ಮತದಾರರಿದ್ದಾರೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು