ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ನಾಳೆ ಲೋಕಸಭೆ ಚುನಾವಣೆಯ ಮತದಾನ ನಡೆಯಲಿದ್ದು ಒಟ್ಟು ಜಿಲ್ಲೆಯಲ್ಲಿ 17,52,885 ಜನ ಮತಚಲಾಯಿಸಲಿದ್ದಾರೆ. ಇದರ ಪ್ರಯುಕ್ತ ಎನ್ ಇಎಸ್ ನ ಹೆಚ್ ಎಸ್ ರುದ್ತಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮತಯಂತ್ರಗಳ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯುತ್ತಿದೆ.
ಅದರಂತೆ ಭದ್ರಾವತಿಯಲ್ಲಿ ಸಂಚಿಹೊನ್ನಮ್ಮ ಪದವಿಪೂರ್ವ ಕಾಲೇಜು, ಸಹ್ಯಾದ್ರಿ ಕಾಲೇಜು, ತೀರ್ಥಹಳ್ಳಿಯ ಡಾ.ಯು.ಆರ್.ಅನಂತಮೂರ್ತಿ ಕಾಲೇಜು, ಶಿಜಾರಿಪುರದಲ್ಲಿ ಪ್ರಥಮ ದರ್ಜೆ ಕಾಲೇಜು, ಸೊರಬದಲ್ಲಿ ಪ್ರಥಮದರ್ಜೆ ಕಾಲೇಜು,
ಸಾಗರದಲ್ಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಿತ್ತಿದೆ.
325 ಮತಗಟ್ಟೆಗಳನ್ಮ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ ಗ್ರಾಮಾಂತರದಲ್ಲಿ ಸಖಿ ಮತಗಟ್ಟೆ ಎಂದು ಕೋಟೆಗಂಗೂರಿನ ಗೆಜ್ಜೇನಹಳ್ಳಿ ಪ್ರಾಥಮಿಕ ಶಾಲೆ, ಅಬ್ಬಲಗೆರೆಯ ಚೆನ್ನಮುಂಭಾಪುರ, ದುಮ್ಮಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, ಅನುಪಿನಕಟ್ಟೆ, ಮುದ್ದಿನಕೊಪ್ಪದ ಶ್ರೀರಾಮಪುರದ ಸರ್ಕಾರಿ ಶಾಲೆಗಳನ್ನ ನಿರ್ಧರಿಸಲಾಗಿದೆ.
ಬೇಡರ ಹೊಸಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಭದ್ರಾವತಿಯಲ್ಲಿ ಹಳೇಬಗರದ ಎನ್ ಪಾರ್ ಬಳಿಯ ಸರ್ಕಾರಿ ಶಾಲೆ ಹುತ್ತಾಕಾಲೋನಿ,, ಉಂಬ್ಳೆಬೈಲು ರಸ್ತೆ, ಕಾಳಿಂಗನಹಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಸರ್ಕಾರಿ ಮಾದರಿ ಶಾಲೆ, ತಲಾ ಒಂದು ವಿಶೇಷ ಮತಗಟ್ಟೆ, ಯುವಜನ ಮತಗಟ್ಟೆ ದ್ಯೇಯಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆಗಳನ್ನ ಗುರುತಿಸಲಾಗಿದೆ. 86,2786 ಪುರುಷರು, 89,0061 ಮಹಿಳೆಯರ ಮತದಾನವಿದೆ
ಶಿವಮೊಗ್ಗ ನಗರದಲ್ಲಿ ರವೀಂದ್ರ ನಗರ, ಕಾಶೀಪುರ, ಆರ್ ಎಂ ಎಲ್ ನಗರದ 12ನೇ ತಿರುವಿನ ಎಲ್ ಮೊಹ್ಮದ್ ಬಿ.ಎಸ್ ಕಾಲೇಜು, ಹೊಸಮನೆಯ ವೀಣಾ ಶಾರದ ಪದವಿಪೂರ್ವಕಾಏಜು, ಜೋಸೆಫ್ ನಗರದ ಸರ್ಜಾರಿ ಹಿರಿಯ ಪ್ರಾಥಮಿಕ ಶಾಕೆಗಳಲ್ಲಿಯೂ ಸಖೀ ಮತಗಟ್ಟಗಳನ್ನ ಗುರುತಿಸಲಾಗಿದೆ.
ಅದರಂತೆ ತಲಾ ಒಂದು ವಿಶೇಷ ಮತಗಟ್ಟೆ, ಯುವಜನ ಮತಗಟ್ಟೆ ದ್ಯೇಯಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆಗಳನ್ನ ಗುರುತಿಸಲಾಗಿದೆ. ತೀರ್ಥಹಳ್ಳಿ, ಸಾಗರ ಮತ್ತು ಶಿಕಾರಿಪುರದಲ್ಲಿಯೂ ಸಖೀ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ ಮತ್ತು ಇತರೆ ಮಾದರಿ ಮತಗಟ್ಟೆಗಳನ್ನ ಗುರುನತಿಸಲಾಗಿದೆ.
ಇದನ್ನೂ ಓದಿ-https://suddilive.in/archives/14314