ಸುದ್ದಿಲೈವ್/ಶಿವಮೊಗ್ಗ
ಮಲವಗೊಪ್ಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂಭಾಗದ ಮನೆಯೊಂದರ ಹಿತ್ತಲಿನಲ್ಲಿದ್ದ ತೆಂಗಿನ ಮರ ಗರಿಗಳಿಗೆ ಬೆಂಕಿಯೊಂದು ಹತ್ತಿಕೊಂಡಿದ್ದು ಬೆಂಕಿಯ ಜ್ವಾಲೆ ಬೃಹದಾಕಾರವಾಗಿ ಬೆಳೆದಿದೆ. ಅದೃಷ್ಟ ವಸ ಯಾವುದೇ ಹಾನಿ ಆಗಿರುವುದು ತಿಳಿದು ಬಂದಿಲ್ಲ
ರಾತ್ರಿ ಸುಮಾರ್ 8 ಗಂಟೆ ವೇಳೆಯಲ್ಲಿ ಅಗ್ನಿ ಅವಘಡ ಸಂಭಾವಿಸಿದ್ದು ಸ್ಥಳೀಯರು ಅಗ್ನಿ ನಂದಿಸಲು ಬಹಳಷ್ಟು ಪ್ರಯತ್ನ ಪಟ್ಟರು ಸಂಪೂರ್ಣ ಹತೋಟಿಗೆ ತರುವಲ್ಲಿ ವಿಫಲವಾಗಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ದಿಂದ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯ ಹಿತ್ತಲಲ್ಲಿ ಇದ್ದ ಬಣವೇ ಸೌದೆ, ಹಾಗೂ ಕಾಯಿ ಚಿಪ್ಪುಗಳಿಗೆ ಬೆಂಕಿ ತಗುಲಿತ್ತು. ಅಗ್ನಿಶಾಮಕ ದಳ ಈ ಎಲ್ಲಾ ಬೆಂಕಿಯನ್ನ ನಂದಿಸಿದ್ದಾರೆ. ಬೆಂಕಿ ಹೊತ್ತಲು ಕಾರಣವೇನಂದು ತಿಳಿದುಬಂದಿಲ್ಲ.
ಇದನ್ನೂ ಓದಿ-https://suddilive.in/archives/14307
Tags:
ಕ್ರೈಂ ನ್ಯೂಸ್