ಸುದ್ದಿಲೈವ್/ಜೋಗ
ಲಘು ಮಳೆಗೆ ಜೋಗ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತಿದೆ. ಶರಾವತಿ ಕಣಿವೆಯಲ್ಲಿ ನಾಲ್ಕು ದಿನದಿಂದ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಿಂದ ಆಚೆಗೆ ಬಿದ್ದ ಮಳೆಗೆ ಜಲಪಾತ ಜೀವಕಳೆ ಪಡೆದುಕೊಂಡಿದೆ.
ಬತ್ತಿ ಹೋಗಿದ್ದ ಜಲಾಪಾತಕ್ಕೆ ನಿಧಾನವಾಗಿ ಚೇತರಿಕೆಯಾಗಿದೆ. ಸ್ವಲ್ಪ ಮಳೆ, ಅಗಾಧ ಮಂಜು ಕವಿದು ರಮಣೀಯ ವಾತಾವರಣ ಸೃಷ್ಟಿಯಾಗಿದೆ. ಜೋಗದ ಸುತ್ತಲ ಕಾಡು ಮುಂಜಿನಿಂದ ಆವೃತವಾಗಿದೆ. ಭಾನುವಾರ ಒಂದೇ ದಿನ ಮೂರು ಸಾವಿರ ಜನರ ಭೇಟಿ ನೀಡಿರುವುದರಿಂದ ಬೇಸಿಗೆಯಲ್ಲಿ ಜೀವಕಳೆ ಪಡೆದಿದೆ.
ಜಲಾಪಾತದ ರಮಣೀಯತೆ ಇಲ್ಲದೇ ಇದ್ದರೂ ಮಂಜಿಗೆ ಜನ ಫಿಧಾ ಆಗಿದ್ದಾರೆ. ಜೋಗ ಅಭಿವೃದ್ಧಿ ಕಾಮಗಾರಿಗಳಿಗೂ ವೇಗ ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಬಿಡುಗಡೆಯಾದ ಅನುದಾನದಿಂದ ಕಾಮಗಾರಿ ಚುರುಕು ಪಡೆದುಕೊಂಡರೂ ಪೂರ್ಣವಾಗಲು ಇನ್ನೂ ಒಂದು ವರ್ಷ ಬೇಕಾಗಿದೆ.
ಪ್ರವಾಸಿಗರಿಂದ ಅರೆಬರೆ ಕಾಮಗಾರಿ ಸ್ಥಳ ಅಸ್ತವ್ಯಸ್ತಗೊಂಡಿರುವ ಪುಟ್ ಪಾತ್ ನಿಂದಾಗಿ ಹೈರಾಣ್ ಆಗಿದ್ದಾರೆ, ಮಳೆ ಮುಂದುವರಿದರೆ ಜೋಗದಲ್ಲಿ ವೀಕೆಂಡ್ ರಷ್ ಸಾಧ್ಯತೆಯಾಗುವುದರಿಂದ ಕೆಸರು ಇನ್ನಷ್ಟು ಹೆಚ್ಚಾಗಲಿವೆ.
ಮಧ್ಯ ಕರ್ನಾಟಕದಿಂದ ಸಿಗಂದೂರು, ಜೋಗಕ್ಕೆ ಪ್ರವಾಸಿಗರು ಈ ಬೇಸಿಗೆಯಲ್ಲೇ ಹರಿದು ಬರುತ್ತಿದ್ದಾರೆ. ಅರೆಕಾಲಿಕ ಮಳೆಯಿಂದಾಗಿ ಬೇಸಿಗೆಯಲ್ಲೇ ಜೋಗ ಜೀವಕಳೆ ಪಡೆದುಕೊಂಡಿದೆ.
ಇದನ್ನೂ ಓದಿ-https://suddilive.in/archives/15116