Girl in a jacket

ಶರಾವತಿ ಹಿನ್ನೀರಿನ ಕರಾಳಮುಖದ ಕಥೆಯಿದು!

ಸುದ್ದಿಲೈವ್/ಸಾಗರ

ಶರಾವತಿ ಹಿನ್ನೀರಿನ ದ್ವೀಪದ ಊರಿನಲ್ಲಿ ನಡೆದ ರೌಡಿಸಂನ ಕಥೆ ಇದು. ಈ ಊರಿಗೆ ಭಯ ಭಕ್ತಿಯಿಂದ ಬರುವ ಜನರು ಬಂದೆ ಜೋದೆ ಅಂತಿದ್ದರೆ ಅಂತಹವರಿಗೆ ಈ ಕರಾಳ ಮುಖಗಳು ಕಾಣಿಸೊಲ್ಲ. ಆದರೆ ಏನಾದರೂ ಅಲ್ಲಿ ಸಮಸ್ಯೆಗೆ ಎದುರಾದರೋ ಕರಾಳ ಮುಖಗಳ ಕರಾಳರೂಪ ಬಟಬಯಾಲಾಗುತ್ತದೆ.

ಸಿಗಂದೂರಿಗೆ ದರ್ಶನಕ್ಕಾಗಿ ಬಂದಿದ್ದ ಹಾಸನದ ಕುಟುಂಬಕ್ಕೆ ಈ ಊರು ತನ್ನ ಕರಾಳ ರೂಪ ತೋರಿದೆ. ಜೀವ‌ಹಿಡಿದುಕೊಂಡು ಈ ಊರಿನಿಂದ ಹೊರ ಹೋದರೆ ಸಾಕು ಎಂಬ ಸ್ಥಿತಿಯಿಂದ ನಿರ್ಮಾಣವಾಗಿದೆ. ಏನಾದರೂ ಈ ಕುಟುಂಬ ತಪ್ಪು ಮಾಡಿದೆ ಎಂದರೆ ಥಳಿಸಿ ಬುದ್ದಿವಾದ ಹೇಳಿದ್ದರೆ ಹೌದು ಬಿಡಪ್ಪ ಹೊರಗಿನವರ ಹಾವಳಿ ಹೆಚ್ಚಾಯ್ತು ಎನ್ನಬಹುದು.

ಅಟ್ಯಾಕ್ ಮಾಡಿದ ಗ್ಯಾಂಗ್

ಆದರೆ ಸ್ಥಳೀಯರೇ ರಾಕ್ಷಸಿ ರೂಪ ತೋರಿದರೆ ಪ್ರಯಾಣಿಕರು ಎಲ್ಲಿಗೆ ಹೋಗಬೇಕು? ಹಾಸನದ ಸಂಜಯ್ ರಕ್ಷಿತ್ ಕುಟುಂಬ ಮತ್ತು ಅವರ ಸಹೋರರಿಬ್ಬರು ಸೇರಿ ಉಡುಪಿ ಕೊಲ್ಲೂರು ಮೂಲಕ ನಿನ್ನೆ ಸಂಜೆ ಸಿಗಂದೂರಿಗೆ ಬಂದಿದ್ದಾರೆ. ದೇವಿಯ ದರ್ಶನ ಪಡೆದಿದ್ದಾರೆ.

ದೇವಿಯ ದರ್ಶನ ಪಡೆದು ಇನ್ನೇನು ಲಾಂಚ್ ಮೂಲಕ ಸಾಗರ ತಲುಪಬೇಕು ಅಲ್ಲೇ ಅಪಘಾತ ಸಂಭವಿಸಿದೆ. ಎದುರಿನಿಂದ ಬಂದ‌ ಖಾಸಗಿ ಬಸ್ ಯಮಸ್ವರೂಪದಲ್ಲಿ ಎದುರಾಗಿದೆ. ಹೊಡೆದ ರಬಸಕ್ಕೆ ಸಂಜಯ್ ರಕ್ಷಿತ್ ಅವರ ಇನ್ನೋವ ಕಾರಿನ ಟಯರ್ ಬರ್ಸ್ಟ್ ಆಗಿದೆ. ನೋಡಿಕೋಡು ಚಲಾಯಿಸಲು ಬರೊಲ್ವಾ ಎಂದು ಬಸ್ ನವರಿಗೆ ಕೇಳಿದ್ದು ಅಷ್ಟೆ ತಡ ಸ್ಥಳೀಯ ಗ್ಯಾಂಗ್ ವೊಂದು ಸಂಜಯ್ ರಕ್ಷಿತ್ ಮತ್ತು ಆತನ ಸಹೋದರನ ಮೇಲೆ ಮುಗಿಬಿದ್ದಿದೆ.

ಅಕ್ಷರಶಃ ಯಮಸ್ವರೂಪದಂತೆ ಗಲಾಟೆ ಮಾಡಿದ್ದಾರೆ. ಸಂಜಯ್ ರಕ್ಷಿತ್ ಚಿಕ್ಕಮ್ಮರಿಗೆ ಇನ್ನು ಸ್ವಲ್ಪ ಹೊತ್ತು ಇದ್ದರೆ ನಿಮ್ಮ ಹೆಣವೂ ಸಿಗುವುದಿಲ್ಲವೆಂದು ಬೆದರಿಕೆ ಹಾಕಿದೆ. ವೀಲ್ ಜ್ಯಾಕ್, ಲಾಂಗ್ ಗಳನ್ನ ಹಿಡಿದುಕೊಂಡು ಅಟ್ಯಾಕ್ ಮಾಡಿರುವುದಾಗಿ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಯಜಮಾನರ ಸಹಾಯದಿಂದ ಗಲಾಟೆಯಿಂದ ಪ್ರಯಾಣಿಕರನ್ನ ಬಜಾವ್ ಮಾಡಲಾಗಿದೆ.

ಈ ರೀತಿಯ ಘಟನೆಗಳು ಇಲ್ಲಿ ಹೊಸದಲ್ಲ. ಸ್ಥಳೀಯ ಪೊಲೀಸ್ ಠಾಣೆಗಳು ಇಂತಹವರ ಸಹಾಯಕ್ಕೆ ಬರೊಲ್ಲ. ಪ್ರವಾಸಿಗರು ಹೆಚ್ಚು ಸೇರು ಜಾಗದಲ್ಲಿ ಠಾಣೆಯಲ್ಲಿ ದಾಖಲಾಗುವ ಎಫ್ಐಆರ್ ಗಳು ನೂರು ದಾಟಲ್ಲ.

ಜೋಗ ಮತ್ತು ಈ ಸಿಗಂದೂರು, ಹೊಳೆಬಾಗಿಲುಗಳು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರ್ತಾವೆ ವರ್ಷ ಪೂರ್ತಿ ಕಳೆದರು 100 ಎಫ್ಐಆರ್ ದಾಟೊಲ್ಲ ಎಂದರೆ ಇಲ್ಲಿನ ಪ್ರವಾಸಿಗರು ಅಷ್ಟೊಂದು ಸುರಕ್ಷಿತವೆಂದಲ್ಲ. ರಕ್ಷಣೆ ಇಲ್ಲವೆಂದು, ದೂರದ ಊರಿನಿಂದ ಬರುವ ನಮಗೆ ಇಲ್ಲಿನ ಉಸಾಬರಿ ಯಾಕೆ ಎಂದು. ರಕ್ಷಣೆಯೂ ಇಲ್ಲದಂತಾದಾಗ ಯಾರು ದೂರು ಕೊಡಲು ಮುಂದೆ ಬರ್ತಾರೆ?

ಇದನ್ನೂ ಓದಿ-https://suddilive.in/archives/15108

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು