ಸುದ್ದಿಲೈವ್/ಶಿಕಾರಿಪುರ
ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಶಿಕಾರಿಪುರದ ಹಿತ್ತಲ ಗ್ರಾಮದ ಬಳಿ ನಡೆಸಿದೆ.
ಖಾಸಗಿ ಬಸ್ ಮತ್ತು ಬೈಸ್ ಸವಾರನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸತ್ತವನನ್ನ ಭದ್ರಾವತಿಯ ನಿವಾಸಿ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯನ್ನ ಮಂಜುನಾಥ್ (32) ಎಂದು ಗುರುತಿಸಲಾಗಿದೆ. ಅಕ್ಕನ ಮನೆ ಚುರ್ಚಿಗುಂಡಿಯಲ್ಲಿದ್ದು, ಚುರ್ಚಿಗುಂಡಿಯಿಂದ ಭದ್ರಾವತಿಗೆ ಮತದಾನ ಮಾಡಲು ಭದ್ರಾವತಿಗೆ ಬೈಕ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
ಚುರ್ಚಿಗುಂಡಿಯಲ್ಲಿರುವ ಅಕ್ಕನ ಜೊತೆಗೆ ವಾಸವಾಗಿದ್ದ ಮಂಜುನಾಥ್ ಅವರು ಭದ್ರಾವತಿಯಲ್ಲಿ ಮತದಾನದ ಹಕ್ಕನ್ನ ಪಡೆದಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿಕಾರಿ ಪುರದ ಗ್ರಾಮಾಂತರದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ-https://suddilive.in/archives/14382
Tags:
ಕ್ರೈಂ ನ್ಯೂಸ್