Girl in a jacket

ಎಂಪಿಎಂ ನೀಲಗಿರಿ ನೆಡುತೋಪಿನಲ್ಲಿ ಮರ ಕಡಿತಲೆ-ಎಫ್ಐಆರ್ ದಾಖಲು

ಸುದ್ದಿಲೈವ್/ಹೊಳೆಹೊನ್ನೂರು

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ದಾನವಾಡಿಯ ಸರ್ವೆ ನಂಬರ್ 29, 33 ರಲ್ಲಿ ಎಂಪಿಎಂಗೆ ಸೇರಿದ್ದ ನೆಡುತೋಪಿನಲ್ಲಿ ಮರ ಕಡಿತಲೆ ನಡೆಸಿ, ಕಡಿತಲೆಯನ್ನ ಅಲ್ಲೇ ಬಿಟ್ಟು ಹೋದ 14 ಜನ ಮಹಿಳೆಯರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಅರಕೆರೆ ನಿವಾಸಿಗಳಾದ ಜಯಮ್ಮ, ಲಕ್ಷ್ಮೀ, ಬಸಮ್ಮ,ರುದ್ರಮ್ಮ, ವಿಶಾಲ, ಹಾಲಮ್ಮ, ರೂಪ, ಪುಷ್ಪ, ಸಿದ್ದಮ್ಮ, ಲತಾ, ವಿಜಯಮ್ಮ, ಮಂಜಮ್ಮ, ನಿರ್ಮಲ, ಚಂದ್ರಮ್ಮ ವಿರುದ್ಧ ಸಹಾಯಕ ಅರಣ್ಯ ಅಧಿಕಾರಿ ಕ್ರಿಷ ಹನುಮಂತಪ್ಪ ಸಾರಥಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ 14 ಜನ ಮಹಿಳೆಯರು ಎಂಪಿಎಂನ ನೀಲಗಿರಿ ನೆಡುತೋಪಿನಲ್ಲಿ ಮರಕಡಿತಲೆ ಮಾಡುತ್ತಿರುವ ಶಬ್ದ ಕೇಳಿ, ಅರಣ್ಯ ಇಲಾಖೆಯ ಕಾವಲುಗಾರ ಹೋಗಿ ನೋಡಿದಾಗ 14 ಜನ ಮಹಿಳೆಯರು ಮರಕಡಿತಲೆ ಮಾಡಿರುವುದು ಕಂಡು ಬಂದಿದೆ. ಸುಮಾರು 50 ಸಾವಿರ ಕಡಿತಲೆಯ ಮೌಲ್ಯ ಇರುವುದಾಗಿ ಅಂದಾಜಿಸಲಾಗಿದೆ.

ಯಾಕೆ ಮರಕಡಿಹಯುತ್ತಿದ್ದೀರಿ ಎಂದು ಕಾವಲುಗಾರ ಶಿವಕುಮಾರ್ ಪ್ರಶ್ನಿಸಿದ್ದಕ್ಕೆ ನಮಗೆ ಜಮೀನಿಲ್ಲ ಹಾಗಾಗಿ ಮರಕಡಿದಿರುವುದಾಗಿ ಮಹಿಳೆಯರು ಹೇಳಿ ಕಡಿತಲೆಯನ್ನ ಬಿಟ್ಟು ಹೋಗಿದ್ದಾರೆ. ಸಾರಥಿ ಅವರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/13989

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು