Girl in a jacket

ನೀನು ಹಿಂದೂ, ಮುಸ್ಲೀಂ ಏರಿಯಾಗೆ ಯಾಕೆ ಬರ್ತೀದ್ದೀಯಾ ಎಂದು ಅಡ್ಡಹಾಕಿದ ಕಿಡಿಗೇಡಿಗಳು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ತಿಪ್ಪಾಪುರ ಕ್ಯಾಂಪ್ ನಲ್ಲಿ ಹೋಗುತ್ತಿದ್ದ ಯುವಕನ ಬೈಕ್ ಅಡ್ಡಹಾಕಿದ ನಾಲ್ವರು ಕಿಡಿಗೇಡಿಗಳು ನೀನು ಹಿಂದೂ ನಮ್ಮ ಮುಸ್ಲೀಂ ಏರಿಯಾಕ್ಕೆ ಯಾಕೆ ಬರ್ತಿದೆ ಎಂದು ಜೀವ ಬೆದರಿಕೆ ಹಾಕಿರುವ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏ.28 ರಂದು ರಾತ್ರಿ ಸುಮಾರು 8:30 ಗಂಟೆ ಸಮಯದಲ್ಲಿ ತಿಪ್ಲಾಪುರ ನಿವಾಸಿ ಅರುಣ ಎಂಬುವರು ಅರಳಹಳ್ಳಿ ಕ್ರಾಸ್ ನಿಂದ ತಿಪ್ಲಾಪುರ ಕ್ಯಾಂಪ್ ಗ್ರಾಮದಲ್ಲಿರುವ ತಮ್ಮ ಮನೆಗೆ ಬೈಕ್ ನಲ್ಲಿ ಹೋಗುವಾಗ ತಿಪ್ಪಾಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ 4 ಕಿಡಿಗೇಡಿ ಹುಡುಗರು ಅಡ್ಡಹಾಕಿದ್ದಾರೆ.

ಅರುಣ್ ಬೈಕನ್ನು ಅಡ್ಡ ಹಾಕಿ ನಿಲ್ಲಿಸಿ, ಬೈಕಿನ ಚಾವಿಯನ್ನು ತೆಗೆದುಕೊಂಡಿದ್ದಾರೆ, ನನ್ನ ಬೈಕಿನ ಚಾವಿ ಯಾಕೆ ತೆಗೆದುಕೊಂಡ್ರಿ ಎಂದು ಕೇಳಿದ್ದಕ್ಕೆ ನಾಲ್ವರು ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು, ನಮ್ಮ ಏರಿಯಾದಲ್ಲಿ ಇಷ್ಟೊತ್ತಿನಲ್ಲಿ ಯಾಕೋ ಹೋಗುತ್ತಿದ್ದೀಯಾ ನಿನೊಬ್ಬ ಹಿಂದೂ ಆಗಿ ನಮ್ಮ ಮುಸ್ಲಿಂ ಏರಿಯಾದಲ್ಲಿ ಬರಲು ನಿನಗೆಷ್ಟೋ ಧೈರ್ಯ ಎಂದು ಅವಾಚ್ಯ ಶಬ್ದಗಳಲ್ಲಿ ಬೈದಿದ್ದಾರೆ.‌

ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದು, ನಾಲ್ವರಲ್ಲಿ ಒಬ್ಬ ಚಾಕು ತೋರಿಸಿ ಚುಚ್ಚುವುದಾಗಿ ಗದರಿಸಿದ್ದಾನೆ. ಅಷ್ಟರಲ್ಲಿ ಅರುಣ್ ಸ್ನೇಹಿತರಾದ ಇಮ್ಮು ಮತ್ತು ಜಾವೀದ್ ಇಬ್ಬರೂ ಬಂದು ಜಗಳ ಬಿಡಿಸಿದ್ದಾರೆ. ಈ ವೇಳೆ 4 ಜನರು ಇವತ್ತು ಉಳಿದುಕೊಂಡಿದ್ದೀಯಾ ಇನ್ನೊಂದು ಸಾರಿ ಸಿಗು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ.

ಮೇಲ್ಕಂಡ 4 ಜನರಲ್ಲಿ 2 ಜನರ ಹೆಸರು ತಿಳಿದಿದ್ದು, ಇನ್ನು 2 ಜನರ ಹೆಸರು ತಿಳಿಯಲು ಅರುಣ್ ಗೆ ಸಾಧ್ಯವಾಗಲಿಲ್ಲ. ಅಟ್ಯಾಕ್ ಮಾಡಿದ ದುಷ್ಕರ್ಮಿಗಳಲ್ಲಿ ಹೆಸರು ವಿಳಾಸ ತಿಳಿಯದೇ ಇದ್ದುದ್ದರಿಂದ ಪ್ರಕರಣ ತಡವಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಡ್ಡಹಾಕಿದ ಇಬ್ಬರಲ್ಲಿ ಅನ್ವರ್ ಕಾಲೋನಿಯ ಅಲಿ ಯಾನೆ ಅಲ್ವೀರ್ ಹಾಗೂ ಸೀಗೆಬಾಗಿಯ ತನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/13978

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು