ಸುದ್ದಿಲೈವ್/ಶಿವಮೊಗ್ಗ
ದುಮ್ಮಳ್ಳಿಯಲ್ಲಿ ಆರೋಪಿಗಳ ಮನೆಯ ಮೇಲೆ ಉದ್ರಿಕ್ತ ಗ್ರಾಮಸ್ಥರು ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.
ದುಮ್ಮಳ್ಳಿಯಲ್ಲಿ ಇಂದು ಜಮೀನು ವಿಚಾರದಲ್ಲಿ ಸತೀಶ್ ಎಂಬ ಯುವಕನನ್ನ ಬರ್ಬರ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿ ಮಂಜನಾಯ್ಕ್ ಮನೆಯ ಮೇಲೆ ಕಲ್ಲು ತೂರಿದ್ದಾರೆ.
ನ್ಯಾಯಾಲದಲ್ಲಿ ಸತೀಶ್ ಪರ ತೀರ್ಪು ಬಂದಿದ್ದರೂ ವ್ಯಾಜ್ಯದ ಎದುರಾಳಿಯಾದ ಮಂಜನಾಯ್ಕ ಮತ್ತು ಆತನ ಪುತ್ರ ಗ್ರಾಮದಲ್ಲಿ ಒಳ್ಳೆ ಹೆಸರು ಪಡೆದಿದ್ದ ಸತೀಶ್ ನನ್ನ ಕೊಲೆ ಮಾಡಿದ್ದಕ್ಕೆ ಅವರ ಮನೆಯ ಮೇಲೆ ರೊಚ್ಚಿಗೆದ್ದ ಗ್ರಾಮಸ್ಥರು ಕಲ್ಲು ತೂರಿದ್ದಾರೆ. ಈವೇಳೆ ಸತೀಶ್ ಎಂಬ ಪೊಲೀಸ್ ಸಿಬ್ಬಂದಿಗಳಿಗೆ ಕಲ್ಲು ತಾಕಿ ತುಟಿಗೆ ಗಾಯವಾಗಿದೆ.
ಮನೆಯಲ್ಲಿದ್ದ ಆರೋಪಿಯ ಕುಟುಂಬಸ್ಥರರನ್ನ ಪೊಲೀಸರು ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ. ಪೊಲೀಸರ ಒಂದು ವೇಳೆ ಸ್ಥಳದಲ್ಲಿ ಇರಲಿಲ್ಲವೆಂದರೆ ಆರೋಪಿಯ ಕುಟುಂಬಸ್ಥರ ಸ್ಥಿತಿ ಗಂಭೀರವಾಗುತ್ತಿತ್ತು. ಬೀಸಿದ ಕಲ್ಲೊಂದು ಮಿಸ್ ಆಗಿ ಸಿಬ್ಬಂದಿಗೆ ತಗುಲಿ ಗಾಯವಾಗಿದೆ.
ಆರೋಪಿಗಳ ತಾಯಿ ಹೆಂಡತಿ ಮತ್ತು ಮಗಳನ್ನ ಪೊಲೀಸ್ ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ. ರಕ್ಷಣೆಯಲ್ಲಿ ಕರೆದೊಯ್ಯುವವರೆಗೆ ಆರೋಪಿಗಳಿಗೆ ಮಹಿಳ ಪೊಲೀಸರ ಭದ್ರತೆ ಒದಗಿಸಲಾಗಿತ್ತು. ಮನೆಯ ಒಳಗೆಲ್ಲ ಕಲ್ಲಿನ ಚೂರುಗಳು ಪತ್ತೆಯಾಗಿದೆ.
ಇದನ್ನೂ ಓದಿ-https://suddilive.in/archives/14680