Girl in a jacket

ಪತಿ ಮಾಡಿದ್ದ ಸಾಲದ ಹಣ ತರುವುದಾಗಿ ಹೇಳಿ ಪತ್ನಿ ನಾಪತ್ತೆ

ಸುದ್ದಿಲೈವ್/ಶಿವಮೊಗ್ಗ

ಪತಿ ಮಾಡಿರುವ ಸಾಲಕ್ಕೆ ಪತ್ನಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸಹೋದರಿಯ ಸ್ನೇಹಿತರೊಂದಿಗೆ ಮಹಿಳೆ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.‌

ಪತಿ ಖಾಸಗಿ ವ್ಯಕ್ತಿಗಳಿಂದ ಸಾಲಪಡೆದು ಕಟ್ಟಲು ಆಗದೆ ತಲೆಮರೆಸಿಕೊಂಡಿದ್ದನು, ಪತಿಯ ಸಾಲ ತೀರಿಸಿ ಎಂದು ಸಾಲಗಾರರು ಪತ್ನಿಯ ಹಿಂದೆ ಬಿದ್ದಿದ್ದರು. ಈಗ ಪತಿಯ ಸಾಲಕ್ಕೆ ಪತ್ನಿ ಸಹ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ 38 ವರ್ಷದ ಮಹಿಳೆ ಪತಿ ಮಾಡಿದ್ದ ಸಾಲ ತೀರಿಸಲು ಆಗದೆ, ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಹೋಗಿದ್ದಾರೆ. ಸಹೋದರಿಯ ಸ್ನೇಹಿತನ ಜೊತೆ ಹೋಗಿರುವುದಾಗಿ ಎಫ್ಐಆರ್ ನಲ್ಲಿ ದೂರು ದಾಖಲಾಗಿದೆ.

ತನ್ನ ಗಂಡನ ಸ್ನೇಹಿತರಿಂದ ಸಾಲ ಇಸ್ಕೊಂಡು ಬರುವುದಾಗಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಮಗಳೊಂದಿಗೆ ಹೋಗಿದ್ದು, ಮಗಳನ್ನ ಮನೆಗೆ ವಾಪಾಸ್ ಕಳುಹಿಸಿದ್ದು ಸ್ನೇಹಿತನೊಂದಿಗೆ ಮಹಿಳೆ ನಾಪತ್ತೆಯಾಗಿರುವುದಾಗಿ ಮಹಿಳೆಯ ಸಹೋದರಿ ಕೋಟೆ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.‌

ಇದನ್ನೂ ಓದಿ-https://suddilive.in/archives/14115

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು