Girl in a jacket

ಸಾಪಡ್, ಸಚಿನ್‌ಯಾನೆ ಸ್ಯಾಡೋ ಬಳ್ಳಾರಿ ಜೈಲ್ ಗೆ, ಇನ್ನಿಬ್ಬರು ಎಸ್ಕೇಪ್?

ಸುದ್ದಿಲೈವ್/ಶಿವಮೊಗ್ಗ/ಶಿಕಾರಿಪುರ

ಬಾಡಿಗೆ ಕಾರಿನ ಚಾಲಕನೋರ್ವನನ್ನ ಬಂಧನದಲ್ಲಿಸಿಕೊಂಡು ಮೊಬೈಲ್ ದೋಚಿರುವ ಆರೋಪ ಹಾಗೂ ಕಿಡ್ನ್ಯಾಪ್ ಆರೋಪದ ಮೇರೆಗೆ ಪ್ರತಾಪ್ ಯಾನೆ ಸಾಪಡ್ ಬೆಂಗಳೂರು, ಸಚಿನ್ ಯಾನೆ ಸ್ಯಾಡೋ, ಶಶಾಂಕ್, ಸುಮಾನ್ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣ ಏ.19 ರಂದು ನಡೆದ ಘಟನೆ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಾದ ನಂತರ ಮೇ.20 ರಂದು ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ತನಿಖೆ ನಡೆಸಲು ನ್ಯಾಯಾಲಯ ಸೂಚನೆ ನೀಡಿದ ಮೇರೆಗೆ ಹಾಗೂ ಎಸ್ಪಿ ಅವರ ಆದೇಶದ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಭದ್ರಾವತಿಯ ಕಾರನ್ನ ಬಾಡಿಗೆ ಪಡೆದ ಪ್ರತಾಪ್ ಯಾನೆ ಸಾಪಡ್, ಸಚಿನ್ ಯಾನೆ ಸ್ಯಾಡೋ ಇಬ್ಬ ಸುನೀಲ್ ಎಂಬುವರ ಕಾರು ಬಾಡಿಗೆ ಪಡೆದು ಬಂದಿದ್ದು ನಂತರ ಕಾರಿನ ಮಾಲೀಕ ಶಿವಮೊಗ್ಗದ ಶ್ರೀಕಾಂತ್ ಎಂಬುವರಿಗೆ ಕರೆ ಮಾಡಿ ಬಾಡಿಗೆ ಸಿಕ್ಕಿದೆ ಭದ್ರಾವತಿಯಿಂದ ಕರೆದುಕೊಂಡು ಬರುತ್ತಿದ್ದು ಅವರು ಹೊನ್ನಾಳಿಗೆ ಹೋಗಬೇಕಿದೆ ನೀನು ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಕರೆದುಕೊಂಡು ಹೊನ್ನಾಳಿಗೆ ಬಿಟ್ಟು ನಾಳೆ ಬಾ ಎಂದು ತಿಳಿಸಿದ್ದಾರೆ.

ಕಾರು ಮಾಲೀಕನ ಸೂಚನೆ ಮೇರೆಗೆ ಶ್ರೀಕಾಂತ್ ಕಾರನ್ನ ಚಲಾಯಿಸಿಕೊಂಡು ಸವಿ ಬೇಕರಿಯ ಬಳಿ‌ ತಂದು ನಿಲ್ಲಿಸಿದ್ದಾರೆ. ಇಲ್ಲಿ ಸಚಿನ್ ಯಾನೆ ಸ್ಯಾಡೋ, ಶಶಾಂಕ್ ಯಾನೆ ಸೂಡ ಹಾಗೂ ಸುಮನ್ ಮೂವರು ಇಳಿದುಕೊಂಡು ಹೋಗಿದ್ದು, ಬ್ಯಾಗ್ ನ್ನ ತಂದು ಡಿಕ್ಕಿಗೆ ಇಟ್ಟಿದ್ದಾರೆ. ಈ ಬ್ಯಾಗು ಏನು ಚಾಲಕ ಕೇಳಿದ್ದಕ್ಕೆ ಲಗೇಜ್ ಎಂದಿದ್ದಾರೆ.

ನಂತರ ಅಬ್ಬಲಗೆರೆಯ ಬಾರ್ ಬಳಿ ಸ್ಯಾಡೋ ಚಾಲಕ ಶ್ರೀಕಾಂತ್ ನ ಮೊಬೈಲ್ ಕಸಿದುಕೊಂಡು ಸುಮ್ಮನೆ ಕುಳಿತುಕೊಂಡರೆ ಸರಿ ಇಲ್ಲವೆಂದರೆ ನೀನು ಇರೊಲ್ಲ ನಿನ್ನ ಕಾರು ಇರಲ್ಲ ಎಂದು ಧಮ್ಕಿ ಹಾಕಿ ಮಧ್ಯ ತೆಗೆದುಕೊಂಡು ಬಂದು ಲ ಮದ್ಯ ಸೇವನೆ ಮಾಡಿದ್ದಾರೆ. ಚಾಲಕನ್ನ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡ ಗ್ಯಾಂಗ್ ಕಾರನ್ನ ಸ್ಯಾಡೋನೇ ಚಲಾಯಿಸಿಕೊಂಡು ಸವಳಂಗಕ್ಕೆ ಹೋಗಿದ್ದಾನೆ.

ಸವಳಂಗದಲ್ಲಿ ಅಲ್ಲೇ ಕೆಳಗೆ ಕುಳಿತುಕೊಂಡ ಗ್ಯಾಂಗ್ ಮಧ್ಯದಲ್ಲಿ ಚಾಲಕನನ್ನ ಕೂರಿಸಿಕೊಂಡು ನೆಲದ ಮೇಲೆ ಮದ್ಯಸೇವಿಸಿದ್ದಾರೆ. ಇಲ್ಲಿಂದ ಹೊನ್ನಾಳಿಗೆ ಹೋಗಿದ್ದು ಹೊನ್ನಾಳಿಯಲ್ಲಿ ಮದ್ಯ ಖರೀದಿಸಿ ಅಲ್ಲಿಂದ ಮತ್ತೆ ಶಿಕಾರಿಪುರದ ಕಡೆ ಚಲಾಯಿಸಿದ ಸ್ಯಾಡೋಗೆ ಜಕ್ಕತ್ತಿನಕೊಪ್ಪದ ಬಳಿ ಪೊಲೀಸರು ತಪಾಸಣೆಗೆ ಕೈವೊಡ್ಡಿದಾಗ ಕಾರನ್ನ‌ನಿಲ್ಲಿಸದೆ ಚಲಾಯಿಸಿಕೊಂಡು ಬಂದಿದ್ದಾನೆ.

ಅಲ್ಲಿಂದ 1‌ಕಿಮಿ ದೂರ ಮತ್ತೆ ಕಾರನ್ನ ನಿಲ್ಲಿಸಿಕೊಂಡು ಎಣ್ಣೆಹೊಡೆಯಲು ನಿಲ್ಲಿಸಿದ್ದು, ಚಾಲಕ ಶ್ರೀಕಾಂತ್ ನ ಕೈಹಿಡಿದುಕೊಂಡು ಮಧ್ಯದಲ್ಲಿ ಕೂರಿಸಿಕೊಂಡು ನಿನ್ನ ಬಳಿ ಎನಿದೆ ಎಲ್ಲಾ ಕೊಡು ಎಂದಿದ್ದಾನೆ. ಇರುವ ಮೊಬೈಲ್ ನ್ನ ಕಿತ್ತುಕೊಂಡಿದ್ದೀರಿ ನನ್ನ‌ಬಳಿ ಏನು ಇಲ್ಲ ಎಂದಿದ್ದಾನೆ. ನಂತರ ಕಾರಿನ ಡಿಕ್ಕಿಯಿಂದ ಏನೋ ತೆಗೆದುಕೊಂಡು ಬಂದ ಗ್ಯಾಂಗ್ ಮೊಬೈಲ್ ಟಾರ್ಚ್ ಬಿಟ್ಟು ಲಾಂಗು ತೋರಿಸಿ ನಿನ್ನಬಳಿ ಏನಿದೆ ಅದನ್ನೆಲ್ಲ ಕೊಡು ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.

ಇದಾದ 15 ನಿಮಿಷಕ್ಕೆ ಸ್ಥಳಕ್ಕೆ ಕಾರಿನ ಚಾಲಕ ಬಂದಿದ್ದು ಶ್ರೀಕಾಂತ್ ಗೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೇಕೆ? ಜಿಪಿಆರ್ ಎಸ್ ಮೂಲಕ ಇಲ್ಲಿಗೆ ಬಂದಿರುವುದಾಗಿ ಕೆಲ ಹುಡುಗರ ಜೊತೆ ಬಂದಿದ್ದಾರೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ.20 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣದಲ್ಲಿ ಪ್ರತಾಪ್ ಯಾನೆ ಸಾಪಡ್, ಸ್ಯಾಡೋ ಸಚ್ಚಿನ್ ರನ್ನ ಪೊಲೀಸರು ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ. ಶಶಾಂಕ್ ಮತ್ತು ಸುಮನ್ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/15403

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು