Girl in a jacket

ಪರ್ಮಿಟ್ ವಿಚಾರದಲ್ಲಿ ದಾಖಲಾಯಿತು ದೂರು

ಸುದ್ದಿಲೈವ್/ಶಿವಮೊಗ್ಗ

ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಖಾಸಗಿ ಬಸ್‌ ಸಿಬ್ಬಂದಿ ಮಧ್ಯೆ ಗಲಾಟೆಯಾಗಿದ್ದು, ಕಂಡಕ್ಟರ್‌ ಒಬ್ಬರಿಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶಿವಮೊಗ್ಗ – ಆಗುಂಬೆ (Agumbe) ಮಾರ್ಗದ ಎರಡು ಬಸ್ಸುಗಳ ಸಿಬ್ಬಂದಿ ಮಧ್ಯೆ ಗಲಾಟೆಯಾಗಿದೆ. ಬೆಳಗ್ಗೆ 4.33ಕ್ಕೆ ಕೃಷ್ಣ ಬಸ್‌ ಈ ಮಾರ್ಗದಲ್ಲಿ ಹೊರಡಬೇಕಿತ್ತು. ಬೆಳಗ್ಗೆ 5 ಗಂಟೆಗೆ ಮತ್ತೊಂದು ಬಸ್‌ ಹೊರಡಬೇಕಿತ್ತು. ನಿನ್ನೆ ಬೆಳಗ್ಗೆ 4.33ರ ಖಾಸಗಿ ಬಸ್‌ ಹೊರಡುವ ಮೊದಲೇ 10 ನಿಮಿಷ ಮುಂಚಿತವಾಗಿ ಬಸ್‌ ನಿಲ್ದಾಣದ ಪ್ರವೇಶಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿತ್ತು.

ಬೆಳಗ್ಗೆ 4.33ರ ಬಸ್ಸಿನ ಕಂಡಕ್ಟರ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಬೆಳಗ್ಗೆ 4.33ರ ಬಸ್ಸಿನ ಕಂಡಕ್ಟರ್‌ ನಂದನ್‌ ಕುಮಾರ್‌ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಚಾಲಕ ನಾಗೇಶ್‌, ಕಂಡಕ್ಟರ್‌ ಹನುಮಂತ, ಅಭಿ ಶೆಣೈ, ಆದರ್ಶ ಎಂಬುವವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/15398

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು