Girl in a jacket

ರೈಲ್ವೆ ಲೆವೆಲ್ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ; ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ– ಕುಂಸಿ ಮಧ್ಯೆ ಬರುವ ರೈಲ್ವೆ ಲೆ.ಕ್ರಾ. ನಂ.:50 ರಲ್ಲಿ ತಾಂತ್ರಿಕ ಪರಿಶೀಲನೆಗಾಗಿ ಮೇ 05 ರ ಬೆಳಗ್ಗೆ 08.00 ರಿಂದ ಮೇ 06 ರ ಸಂಜೆ 6.00 ರವರೆಗೆ ಗೇಟ್ ಮುಚ್ಚುವುದರಿಂದ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ನೀಡಿರುತ್ತಾರೆ.

ಶಿವಮೊಗ್ಗ ನಗರ-ಕುಂಸಿ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆ.ಕ್ರಾ.ನಂ.50 ರ ಬದಲಿ ಮಾರ್ಗವಾಗಿ ಎಲ್.ಸಿ. 52 ರ ಕಾಶಿಪುರ ಮೂಲಕ ಉಷಾ ನರ್ಸಿಂಗ್ ಹೋಂ, ಜೈಲ್ ಸರ್ಕಲ್, ವಿನೋಬನಗರ, ಪೊಲೀಸ್ ಚೌಕಿ ಮುಖಾಂತರ ಲಘು ಮತ್ತು ಭಾರಿ ಗಾತ್ರದ ವಾಹನಗಳು ಮತ್ತು ಪಿ&ಟಿ ಕಾಲೋನಿಯಿಂದ ಕೆಳ ರಸ್ತೆಯ ಮುಖಾಂತರ ಲಘು ವಾಹನಗಳು ಸಂಚರಿಸುವುದು, ಎಲ್.ಸಿ-49ರ ಸವಳಂಗ ರಸ್ತೆ ಮೂಲಕ ಉಷಾ ನರ್ಸಿಂಗ್ ಹೋಂ-ಜೈಲ್ ಸರ್ಕಲ್-ವಿನೋಬನಗರ ಪೊಲೀಸ್ ಚೌಕಿ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/14205

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close