Girl in a jacket

8 ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಿಸಿದ ಲೋಕಾಯುಕ್ತರು-ಕಾಮಗಾರಿ ಪುನರ್ ಪರಿಶೀಲನೆಗೆ ಸೂಚನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಅದ್ಬುತವಾಗಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದ್ದ ಸ್ಮಾರ್ಟ್ ಸಿಟಿಯ ವೀಕ್ಷಣೆಯನ್ನ ಇಂದು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಸ್ಥಳ ಪರಿಶೀಲನೆಯ ವೇಳೆ ಕೆಲವೊಂದು ಕಡೆ ದುರಸ್ಥಿ ಕಾಮಗಾರಿ ನಡೆದಿದ್ದರೆ, ಕೆಲವೊಂದು ಕಡೆ ಕಾಮಗಾರಿ ಅಪೂರ್ಣಗೊಂಡಿರುವುದು ತಿಳಿದು ಬಂದಿದೆ. ಸಾರ್ವಜನಿಕ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಮಂಜುನಾಥ್ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ. ರವರು ಲೋಕಾಯುಕ್ತ ಠಾಣೆಯ ಅಧಿಕಾರಿಗಳಾದ ಶ್ರೀ ಉಮೇಶ್ ಈಶ್ವರ ನಾಯ್ಕ, ಡಿ.ಎಸ್‌.ಪಿ ಮತ್ತು ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಪ್ರಕಾಶ್, ಶ್ರೀ ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊಂದಿಗೆ ತಂಡ ಇಂದು ಶಿವಮೊಗ್ಗ ನಗರದ ಆಯನೂರು ಗೇಟ್, ದ್ವಾರಕ ಕನ್ವೆಷನ್ ಹಾಲ್ ಹತ್ತಿರ, ಆಲ್ಗೊಳ ಸರ್ಕಲ್, ವಿನೋಬನಗರದ 100 ಅಡಿ ಮುಖ್ಯ ರಸ್ತೆ, ಫ್ರೀಡಂ ಪಾರ್ಕ್, ಗಾಂಧಿನಗರ, ತಿಲಕ್‌ನಗರ, ತುಂಗಾ ನದಿ ಬಳಿ ಮತ್ತು ಇತರೆ ಪ್ರದೇಶಗಳಲ್ಲಿ ವಿಸಿಟ್ ಮಾಡಿದ್ದಾರೆ.

ಸ್ವಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಾದ ಡ್ರೈನೇಜ್, ರಸ್ತೆ, ಚರಂಡಿ, ಫುಟ್‌ಪಾತ್ ಇತರೆ ಕಾಮಗಾರಿಗಳನ್ನು ಪರಿಶೀಲನೆಯನ್ನು ನಡೆಸಿದ್ದಾರೆ. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಗಳಿಂದ ಮಳೆ ಸಂದರ್ಭದಲ್ಲಿ ನೀರು ನಿಂತು ಹಲವಾರು ಬಡಾವಣೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿರುವುದಾಗಿ ಲೋಕಾಯುಕ್ತ ಕಚೇರಿಗೆ ದೂರುಗಳು ಬಂದಿದ್ದವು.

ಸ್ವಾರ್ಟ್ ಸಿಟಿ ಯೋಜನೆ ಇಂಜಿನಿಯ‌ರ್ ರವರಿಗೆ ಸದರಿ ಕಾಮಗಾರಿಗಳನ್ನು ಪುನರ್ ಪರಿಶೀಲಿಸಿ ಕಾಮಗಾರಿಗಳ ಪೂರ್ಣ ಮಾಹಿತಿಯನ್ನು ನೀಡುವಂತೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಲೋಕಾಯುಕ್ತರವರು ಸೂಚನೆಗಳನ್ನು ನೀಡಿರುತ್ತಾರೆ.

ಮಾಯವಾದ ಜಿಲ್ಲಾ ಉಸ್ತುವಾರಿ ಸಚಿವರ ಆದೇಶ

ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತು ಜಿಪಂನ ಸಾಮಾನ್ಯ ಸಭೆಯಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದು ನಿರ್ಣಯ ತೆಗೆದುಕೊಂಡು 11 ತಿಂಗಳು ಕಳೆದಿದ್ದರೂ, ಈ ನಿರ್ಣಯ ಎಲ್ಲಿ ಹೋಗಿದೆ ಎಂಬುದೆ ತಿಳಿಯದಾಗಿದೆ. ರಾಜಕೀಯ ಪ್ರೇರಿತ ಆದೇಶಗಳು ಹೀಗೆ ನಾಪತ್ತೆಯಾಗಿಬಿಡುತ್ತದೆ. ಆದರೆ ಸಾರ್ವಜನಿಕರು ತೊಂದರೆಗೊಳಗಾದ ಪರಿಣಾಮ ನೀಡಿದ ದೂರು ಕೊನೆ ಪಕ್ಷ ಪುನರ್ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ-https://suddilive.in/archives/17341

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು