ಸುದ್ದಿಲೈವ್/ಶಿವಮೊಗ್ಗ
ಫೋಕ್ಸೋ ಆರೋಪಿಗೆ ಇಲ್ಲಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(FTSC)-1 20 ವರ್ಷ ಕಾರಾಗೃಹ ವಾಸ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಅಪ್ರಾಪ್ತ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಂಡ ಆರೋಪದ ಅಡಿ 2023 ರಲ್ಲಿ ಅಜ್ಮತುಲ್ಲಾ ಯಾನೆ ಇಬ್ಬು ಎಂಬಾತನ ವಿರುದ್ಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಆತನನ್ನ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC 1, ಪ್ರಕರಣದ ಆರೋಪಿತನಾದ ಆಜ್ಮತುಲ್ಲಾ @ ಇಬ್ಬು ವಿರುದ್ಧ ಆರೋಪಗಳು ದೃಢಪಟ್ಟಿದ್ದವು. ಆರೋಪಿಗೆ ಮಾನ್ಯ ಘನ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ, 50 ಸಾವಿರ ದಂಡ ವಿಧಿಸಿ ಇದರಲ್ಲಿ ನೊಂದ ಬಾಲಕಿಗೆ 45 ಸಾವಿರ ನೀಡುವಂತೆ ಹಾಗೂ ಸರ್ಕಾರದಿಂದ 7 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿರುತ್ತದೆ
Tags:
ಕ್ರೈಂ ನ್ಯೂಸ್