Girl in a jacket

ನೀರುಪಾಲಾಗಿದ್ದ ಮೂವರು ಶವವಾಗಿ ಪತ್ತೆ

ಶಿವಮೊಗ್ಗ/ಚಿಕ್ಕಮಗಳೂರು

ತೆಪ್ಪ ಮುಳುಗಿ ಭದ್ರಾ ನದಿಯಲ್ಲಿ ಮೂವರು ನೀರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾ ಹಿನ್ನೀರಿನಲ್ಲಿ ಮೂವರ ಶವ ಪತ್ತೆಯಾಗಿದೆ. ಮೃತದೇಹವನ್ನ ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರಿಂದ ಪತ್ತೆಹಚ್ಚಲಾಗಿದೆ. ಮೃತದೇಹ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನಿಸಲಾಗಿದೆ.

ನಿನ್ನೆಯೂ ಶೋಧ ಕಾರ್ಯ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು. ಕತ್ತಲಾದ ಬಳಿಕ ಶೋಧ ಕಾರ್ಯ ಸ್ಥಗಿತಗಿಳಿಸಿದ್ರು. ಇಂದು ಮುಂಜಾನೆಯಿಂದ ಶೋಧ ಕಾರ್ಯ ಮುಂದುವರೆದಿತ್ತು‌ ನಿನ್ನೆ ಪ್ರವಾಸಕ್ಕೆ ಭದ್ರಾ ನದಿ ಹಿನ್ನೀರಿಗೆ ಆಗಮಿಸಿದ್ದ ನಾಲ್ವರು ಸ್ನೇಹಿತರಲ್ಲಿ ಮೂವರು ತೆಪ್ಪದಲ್ಲಿ ಹೋಗಿದ್ದರು, ಓರ್ವ ದಡದಲ್ಲಿ ನಿಂತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ತೆಪ್ಪದಲ್ಲಿ ತೆರಳುವಾಗ ತೆಪ್ಪ ಮಗುಚಿ ಮೂವರು ನೀರು ಪಾಲಾಗಿದ್ದಾರೆ. ಆದೀಲ್, ಸಾಜೀದ್, ಅಫ್ಧಾಖಾನ್ ಮೂವರು ಮೃತ ದುರ್ದೈವಿಗಳಾಗಿದ್ದಾರೆ. ಈ ಮೂವರು ಮೃತರು ಶಿವಮೊಗ್ಗದ ವಿದ್ಯಾನಗರದ ನಿವಾಸಿಗಳಾಗಿದ್ದಾರೆ.

ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ನಿನ್ನೆ ನಡೆದಿದ್ದ ಘಟನೆಯಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/17334

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close