ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಅನ್ಯಕೋಮಿನ ಯುವತಿಯನ್ನ ಕೆಲಸದ ನಿಮಿತ್ತ ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವಾಗ ಅಡ್ಡಕಟ್ಟಿ ಹಿಂದೂ ಯುವನನ್ನ ಥಳಿಸಿದ ಘಟನೆ ನಡೆದಿದೆ. ಗಾಯಗೊಂಡ ಯುವಕನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆಕ್ ಮೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕುಂಬಾರಗುಂಡಿಯ ಯುವಕ ಎಸ್ ಬಿ ನಂದನ್ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವತಿಯೋರ್ವಳು ಕರೆ ಮಾಡಿ ಆರ್ ಎಂಎಲ್ ನಗರದ ಪರೀದಾ ಅವರ ಮನೆಗೆ ಹೋಗೋಣ ಎಂದು ಹೇಳಿದ್ದಾರೆ.
ಪುರುಷೋತ್ತಮ ಎಂಬುವರ ಬೈಕ್ ನಲ್ಲಿ ನಂದನ್ ಮತ್ತು ಅನ್ಯ ಕೋಮಿನ ಯುವತಿಯೊಂದಿಗೆ ಹೋಗಿ ಗ್ರಾಹಕರಿಗೆ ಹಣ ಕಟ್ಟಲು ತಿಳಿಸಿದಾಗ ಫರೀದಾ ಮತ್ತು ಅವರ ಪತಿ, ಹಣ ಕಟ್ಟಲು ಆಗಲ್ಲ ಎಂದು ಹೇಳಿ ನಿಮ್ಮ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ನಂತರ ದಂಪತಿಗಳು ಆಟೋದಲ್ಲಿ ತೆರಳಿದ್ದಾರೆ.
ತಕ್ಷಣವೇ ನಂದನ್ ನ್ಯೂಮಂಡ್ಲಿಯ ಬಳಿ ಬಂದು ನಂತರ ಅನ್ಸಾರಿ ಮಸೀದಿ ಬಳಿ ಬನ್ನಿ ನಂತರ ಪೂರ್ವಿಕಾ ಮೊಬೈಲ್ ಗೆ ಹೋಗೋಣ ಎಂದು ಅನ್ಯಕೋಮಿನಯುವತಿಗೆ ಮೊಬೈಲ್ ನಲ್ಲಿ ತಿಳಿಸಿದ್ದಾರೆ.
ಮಸೀದಿ ಬಳಿ ಬಂದು ಅನ್ಯಕೋಮಿನ ಯುವತಿಯನ್ನ ಕೂರಿಸಿಕೊಂಡು ಹೋಗುವಾಗ ಎಸ್ ಎಸ್ ಟಿಂಬರ್ಸ್ ಬಳಿ ಇಬ್ಬರು ಅಡ್ಡಹಾಕಿ ಟಿಂಬರ್ಸ್ ಒಳಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಫರೀದಾ ಮತ್ತು ಪತಿಯನ್ನ ಕರೆಯಿಸಿ ಅಲ್ಲಿದ್ದ ಒಬ್ಬ ವ್ಯಕ್ತಿ ನಮ್ಮ ಧರ್ಮದ ಹುಡಿಗಿಯನ್ನ ಯಾಕೆ ಕರೆದುಕೊಂಡು ಓಡಾಡುತ್ತಿದ್ದೀಯ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಇಲ್ಲ ಕೆಲಸದ ನಿಮಿತ್ತ ಬಂದಿದ್ದೇವೆ. ಹಾಗೂ ಜೊತೆಯಲ್ಲಿ ಓಡಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಅನ್ಯಕೋಮಿನ ಯುವತಿಯನ್ನೂ ಕೇಳಿದಾಗ ಅವರು ಸಹ ಅದೇ ಉತ್ತರ ನೀಡಿದ್ದಾರೆ.
ಸರಿ ಎಂದು ಟಿಂಬರ್ಸ್ ಯಾರ್ಡ್ ನಿಂದ ಹೊರಬರುವಾಗ ಗಟ್ಟಿಯಾದ ವಸ್ತುವಿನಿಂದ ಬಲವಾಗಿ ಹೊಡೆಯಲಾಗಿದೆ. ನಂತರ ನಂದನ್ ಓಡಲು ಆರಂಭಿಸಿದ್ದಾರೆ. ಅವರನ್ನ 15-20 ಜನ ಅಟ್ಟಿಸಿಕೊಂಡು ಬಂದಿದ್ದಾರೆ. ಆ ವೇಳೆ ಮ್ಯಾನೇಜರ್ ಪುರುಷೋತ್ತಮ, ಸಂಜಯ್ ಮತ್ತು ಇಮ್ರಾನ್ ಬಂದಿದ್ದಾರೆ.
ಕೆಟ್ಟದಾಗಿ ಬೈದ ಯುವಕರ ಗುಂಪು ಇನ್ನೊಮ್ಮೆ ನಮ್ಮ ಹುಡುಗಿಯೊಂದಿಗೆ ಕಾಣಿಸಿಕೊಂಡರೆ ಜೀವ ಸಹಿತಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.ನಂದನ್ ಅವರ ಕಣ್ಣು ಬಾಯಿ ಎಡಕಿವಿ, ಕಿವಿಯ ಕೆಳಭಾಗ ತೀವ್ರ ಸ್ವರೂಪದ ಗಾಯಗಳಾಗಿವೆ. ಇದೇ ವೇಳೆ 1500 ರೂ. ಹಣ ಕಳೆದಿರುವ ಬಗ್ಗೆ ದೂರು ದಾಖಲಾಗಿದೆ.
ಚೆನ್ನಬಸಪ್ಪ ಮನವಿ
ಇಂದು ಶಾಸಕ ಚೆನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಸ್ಲೀಂ ಪುಂಡರುಬಾಲ ಬಿಚ್ಚಿದ್ದಾರೆ. ಕಾಂಗ್ರೆಸ್ ಮತ್ತು ಡಿಕೆ ಬ್ರದರ್ಸ್ ನಡುವಿನ ಸೌಹಾರ್ಧಕ್ಕೆ ಹಿಂದೂ ಯುವಕ ಬಲಿಯಾಗಿದ್ದಾನೆ.
ಶಿವಮೊಗ್ಗದಲ್ಲಿ ಕಾನೂನು ಹದಗೆಟ್ಟಿದೆ. ಇನ್ನಾದರೂ ಗೃಹಸಚಿವರು ಶಿವಮೊಗ್ಗದ ಕಡೆಗಮನ ಕೊಡಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ-https://suddilive.in/archives/16100