Girl in a jacket

ಅನುಷಾ ಭಾವಚಿತ್ರ ಹಿಡಿದು ಎಲ್ ಬಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಕಾಲೇಜಿನ ಮುಂಭಾಗ ರಸ್ತೆಗಳಿಗೆ ಜಿಬ್ರ ಕ್ರಾಸಿಂಗ್ ಹಾಗೂ ಸ್ವೀಟ್ ಬ್ರೇಕರ್ ಅಳವಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು. ರಸ್ತೆ ಅಪಘಾತದಲ್ಲಿ ಮೊನ್ನೆ ಸಾವನ್ನಪ್ಪಿದ ಅನುಷಾಳ ಭಾವಚಿತ್ರ ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಲ್ ಬಿ ಕಾಲೇಜ್ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಮೊನ್ನೆ ಕುಂದಾಪುರ ಮೂಲದ ಯುವತಿ ಅನುಷಾ ರಸ್ತೆ ಅಪಘಾತದಲ್ಲಿ ಜೀವಕಳೆದುಕೊಂಡಿದ್ದು, ಆಕೆಯ ಜೀವಹಾನಿಗೆ ಜೀಬ್ರ ಕ್ರಾಸಿಂಗ್ ಮತ್ತು ಸ್ಪೀಡ್ ಬ್ರೇಕ್ ಅಳವಡಿಸದಿರುವುದೇ ಕಾರಣ ಎಂಬುದು ಪ್ರತಿಭಟನಾ ವಿದ್ಯಾರ್ಥಿಗಳ ಆಕ್ಷೇಪವಾಗಿದೆ.

ತಾಲೂಕು ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಎಲ್ ಬಿ ಕಾಲೇಜ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ರಸ್ತೆ ಅಗಲೀಕರಣದಿಂದ ಅಪಘಾತಗಳು ಹೆಚ್ಚಾಗಿವೆ ಎಂದು ಆರೋಪಿಸಲಾಗಿದೆ.

ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ಕಾಲೇಜು ಮುಂಭಾಗ ರಸ್ತೆ ಅಗಲಿಕರಣದಿಂದ ಅಪಘಾತಗಳು ದಿನೇ ದಿನ ಹೆಚ್ಚಾಗಿದ್ದು, ಇದುವರೆಗೂ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಈ ಹಿಂದೆ ಎಲ್ ಬಿ ಕಾಲೇಜ್ ಮುಂಭಾಗ ಹಾಗೂ ಸಾಗರದ ಇಂದಿರಾ ಗಾಂಧಿ ಕಾಲೇಜು ಮುಂಭಾಗ ಎರಡು ಪ್ರತ್ಯೇಕ ಅಪಘಾತದಿಂದ ವಿದ್ಯಾರ್ಥಿಗಳು ಸಾವನಪ್ಪಿದ ಘಟನೆ ನಡೆದಿದೆ. ಆ ವಿದ್ಯಾರ್ಥಿಗಳ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ. ಅನುಷಾಳ ಭಾವಚಿತ್ರಕ್ಕೆ ಹೂವೇರಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಗಮನಸೆಳೆದಿತ್ತು.

ಇದನ್ನೂ ಓದಿ-https://suddilive.in/archives/17789

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು