ಬಸ್ ನಲ್ಲಿರುವಾಗಲೇ ಲ್ಯಾಪ್ ಟ್ಯಾಪ್ ಕಳುವು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಕಳ್ಳರ ಕೈಚಳಕ ಮುಂದುವರೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪ್ರಕರಣ ಕಡಿಮೆನೇ. ಈ ವರ್ಷದಲ್ಲಿ ಇದು 5-7 ನೇ ಪ್ರಕರಣ ವಿರಬಹುದು.

ಸುಮಾರು 3 ವರ್ಷಗಳಿಂದ ಬೆಂಗಳೂರಿನಲ್ಲಿ ಟೆಗೂಟೆಕ್ ಇಂಡಿಯಾ ಪ್ರೈವೇಟ್ ಲಿ. ಕಂಪೆನಿಯಲ್ಲಿ ಪ್ರೋಡಕ್ಷನ್ ಪ್ಲಾನರ್ & ಕಂಟ್ರೋಲರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬರ ಕಂಪೆನಿ ವತಿಯಿಂದ ಕೆಲಸಕ್ಕಾಗಿ ನೀಡಿದ್ದ HP Pavilion Ryzen 5 Hex ಲ್ಯಾಪ್ ಟಾಪ್ ಕಳುವಾಗಿದೆ.

ಶನಿವಾರ & ಭಾನುವಾರ ರಜೆ ಇದ್ದುದರಿಂದ ಊರಿಗೆ ಬಂದಿದ್ದ ಯುವತಿ‌  ವಾಪಾಸ್ ಬೆಂಗಳೂರಿಗೆ ಹೋಗಲು ತನ್ನ ಅಕ್ಕಳ ಜೊತೆ ಪ್ರಯಾಣ ಬೆಳೆಸಿದ್ದಾರೆ.  ಜೂ.23 ರಂದು ಶಿವಮೊಗ್ಗದ  ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ನಲ್ಲಿ ಬೆಂಗಳೂರಿಗೆ ಹೋಗುವ ಕೆಎ-17 ಎಫ್-1487 ಬಸ್ ಹತ್ತಿ ಕುಳಿತಿದ್ದರು.

ಲಗೇಜ್ ಕ್ಯಾರಿಯರ್ ನಲ್ಲಿ, ಲಗೇಜ್ ಇದ್ದ ಒಂದು ಬ್ಯಾಗ್ ಮತ್ತು ಲ್ಯಾಪ್ ಟಾಪ್ ಇದ್ದ ಬ್ಯಾಗನ್ನು ಇಟ್ಟಿದ್ದರು, ಭಾನುವಾರ ಆಗಿದ್ದರಿಂದ ಜನರು ಹೆಚ್ಚಾಗಿದ್ದು, ಬಸ್ ತುಂಬಾ ರಶ್ ಆಗಿದೆ. ಜನರು ಸ್ಟ್ಯಾಂಡಿಂಗ್ ನಲ್ಲಿದ್ದರು,

ನೀರು ಕುಡಿಯಲು ಲಗೇಜ್ ಬ್ಯಾಗ್ನಲ್ಲಿಟ್ಟಿದ್ದ ನೀರಿನ ಬಾಟಲ್ ತೆಗೆಯಲು ಹೋದಾಗ ಲಗೇಜ್ ಕ್ಯಾರಿಯರ್ ನಲ್ಲಿಟ್ಟಿದ್ದ ಲ್ಯಾಪ್ ಟಾಪ್ ಇದ್ದ ಬ್ಯಾಗ್ ಇರಲಿಲ್ಲ. ನಂತರ ಬಸ್ಸಿನಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಬ್ಯಾಗ್ ಇರಲಿಲ್ಲ.

ಪ್ರಯಾಣಿಕರಂತೆ ಬಂದು ಲ್ಯಾಪ್ ಟಾಪ್ ಇದ್ದ ಬ್ಯಾಗ್ ನ್ನು ಕಳವು ಮಾಡಲಾಗಿದೆ. ಹೋಗಿರುತ್ತಾರೆ.  ವಾಪಾಸ್ ಊರಿಗೆ ಹೋಗಿ ಮನೆಯಲ್ಲಿ ವಿಚಾರ ತಿಳಿಸಿ ನಿನ್ನೆ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಇದನ್ನೂ ಓದಿ-https://suddilive.in/archives/17793

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close